More

    ಕನ್ನಡಿಗರು ಮನಸ್ಸು ಮಾಡಿದರೆ ಮಾತ್ರ ಭಾಷೆ ಉಳಿವು ಸಾಧ್ಯ


    ಚಾಮರಾಜನಗರ : ಕನ್ನಡಿಗರು ಮನಸ್ಸು ಮಾಡಿದರೆ ಮಾತ್ರ ಭಾಷೆಯ ಉಳಿವು ಸಾಧ್ಯವಾಗುತ್ತದೆ ಎಂದು ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡ ಪ್ರಸಾದ್ ಹೇಳಿದರು.

    ಗುಂಡ್ಲುಪೇಟೆ ಪಟ್ಟಣದಲ್ಲಿರುವ ಸಿಎಂಎಸ್ ಮಕ್ಕಳ ಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಭಾರತ ಕರುನಾಡ ಯುವಶಕ್ತಿ ಸಂಘಟನೆ 68ನೇ ಕನ್ನಡ ರಾಜ್ಯೋತ್ಸವ 50ನೇ ವರ್ಷದ ಸುವರ್ಣ ಕರ್ನಾಟಕ ಮಹೋತ್ಸವ ಹಾಗೂ ಸಂಘಟನೆಯ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


    ಗಡಿ ತಾಲೂಕಿಗೆ ದಿನೇ ದಿನೆ ತಾಲೂಕಿನಲ್ಲಿ ಅನ್ಯಭಾಷಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿಯೇ ಭೂಮಿ ಖರೀದಿಸಿ ದೊಡ್ಡ ಮಟ್ಟದಲ್ಲಿ ವ್ಯವಹಾರಗಳನ್ನು ನಡೆಸುತ್ತಿದ್ದು, ಕೆಲಸ ಕಾರ್ಯಗಳಿಗೆ ತಮ್ಮ ಊರುಗಳಿಂದಲೇ ಜನರನ್ನು ಕರೆತರುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಕನ್ನಡಿಗರನ್ನು ಹುಡುಕುವ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಕನ್ನಡಪರ ಸಂಘಟನೆಗಳು ಇದನ್ನು ಮನಗಂಡು ಕನ್ನಡದ ಉಳಿವಿಗಾಗಿ ಹೋರಾಡಬೇಕು ಎಂದು ಸಲಹೆ ನೀಡಿದರು.


    ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನೀರ್ ಪಾಷಾ, ರಾಜ್ಯ ಕಾನೂನು ಸಲಹೆಗಾರ ಉಮೇಶ್, ರಾಜ್ಯ ಯುವ ಘಟಕದ ಅಧ್ಯಕ್ಷ ಈಶ್ವರ್, ಬಿಎಸ್ಪಿ ಅಧ್ಯಕ್ಷ ಗೋವಿಂದರಾಜು, ಅಕ್ಷರ ಸಾಹಿತಿ ನಾಗಭೂಷಣ ಬಸವಾಪುರ, ಖಜಾನಾಧಿಕಾರಿ ನಾಗರತ್ನಮ್ಮ, ಸಿಎಂಎಸ್ ಮಕ್ಕಳ ಮನೆಯ ವ್ಯವಸ್ಥಾಪಕ ಶರವಣ ಸೇರಿದಂತೆ ಹಲವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts