ಇಂದಿನಿಂದ 3ನೇ ರಾಜ್ಯ ಮಿನಿ ಒಲಿಂಪಿಕ್ಸ್: ಐದು ಸಾವಿರಕ್ಕೂ ಅಧಿಕ ಮಕ್ಕಳು ಭಾಗಿ

blank

ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ (ಕೆಒಎ) ನವೆಂಬರ್ 14ರಿಂದ 20ರವರೆಗೆ ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಮೂರನೇ ಆವೃತ್ತಿಯ ಮಿನಿ ಒಲಿಂಪಿಕ್ಸ್ ಆಯೋಜಿಸಲು ಸಜ್ಜಾಗಿದೆ. ಟೂರ್ನಿಯಲ್ಲಿ ರಾಜ್ಯದ 14 ವಯೋಮಿತಿಯ ಐದು ಸಾವಿರಕ್ಕೂ ಅಧಿಕ ಮಕ್ಕಳು ಭಾಗವಹಿಸಲಿದ್ದು, ಗುಂಪು ಸಹಿತ 24 ವಿವಿಧ ಕ್ರೀಡೆಗಳು ಮತ್ತು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿವೆ.

ಕರ್ನಾಟಕ ಒಲಿಂಪಿಕ್ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಒಎ ಅಧ್ಯಕ್ಷ ಕೆ.ಗೋವಿಂದರಾಜ್, ಮಿನಿ ಒಲಿಂಪಿಕ್ಸೃ್ ಭವಿಷ್ಯದ ಕ್ರೀಡಾಪಟುಗಳಿಗೆ ಅಡಿಪಾಯ ಹಾಕಲು ನಿರ್ಣಾಯಕ ವೇದಿಕೆ ಒದಗಿಸುತ್ತದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಮಕ್ಕಳು ಅವರು ಆಯ್ಕೆ ಮಾಡಿದ ಕ್ರೀಡೆಯಲ್ಲಿ ಬೆಳೆಯಲು ಭದ್ರ ಬುನಾದಿಯಾಗಲಿದೆ ಎಂದರು. ವಿಶೇಷವಾಗಿ ಇದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪ್ರಯೋಜನಕಾರಿಯಾಗಿದ್ದು, ಇದರಲ್ಲಿ ಭಾಗವಹಿಸುವ ಎಲ್ಲರಿಗೂ ಹೋಟೆಲ್, ವಸತಿ, ಸಾರಿಗೆ ಮತ್ತು ಆಹಾರ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

2020ರಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಮಿನಿ ಒಲಿಂಪಿಕ್ಸೃ್ಗೆ ಈ ಬಾರಿಯೂ ರಾಜ್ಯ ಸರ್ಕಾರದಿಂದ ಸಂಪೂರ್ಣ ನೆರವು ಒದಗಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ಡಿ.ರಣದೀಪ್ ತಿಳಿಸಿದರು. ರಾಜ್ಯ ಸರ್ಕಾರದಿಂದ ಕೂಟ ಆಯೋಜನೆಗೆ ₹3 ಕೋಟಿ ಮೀಸಲಿಡಲಾಗಿದೆ.

ಎಲ್ಲರಿಗೂ ಪ್ರಮಾಣ ಪತ್ರ
ಕೂಟದಲ್ಲಿ ವಿಜೇತ ಕ್ರೀಡಾಪಟುಗಳಿಗೆ ಪ್ರಮಾಣ ಪತ್ರ, ಪದಕ ಜತೆಗೆ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಗುವುದು. ಕ್ರೀಡಾಪಟುಗಳಿಗೆ ಕಂಠೀರವ ಕ್ರೀಡಾಂಗಣ ಹಾಗೂ ವಿದ್ಯಾನಗರದಲ್ಲಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ. ಆಟಗಾರರ ವಸತಿ ಸ್ಥಳದಿಂದ ಸ್ಪರ್ಧೆಗಳು ನಡೆಯುವ ಸ್ಥಳಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

ಸ್ಪರ್ಧೆಗಳು ನಡೆಯುವ ಸ್ಥಳ
ಎಲ್ಲ ಸ್ಪರ್ಧೆಗಳು ಕಂಠೀರವ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ ಸೇರಿ ವಿದ್ಯಾನಗರ ಕ್ರೀಡಾ ಸಂಕೀರ್ಣ ಬಸನಗುಡಿಯ ಅಕ್ವಟಿಕ್ ಸೆಂಟರ್‌ನಲ್ಲಿ (ಈಜು ಸ್ಪರ್ಧೆಗಳು) ಆಯೋಜಿಸಲಾಗಿದೆ. ಆರ್ಚರಿ, ಅಥ್ಲೆಟಿಕ್ಸೃ್, ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್‌ಬಾಲ್, ಜೂಡೋ, ಕಬಡ್ಡಿ, ಲಾನ್ ಟೆನಿಸ್, ಟೇಬಲ್ ಟೆನಿಸ್, ಟೇಕ್ವಾಂಡೋ, ವಾಲಿಬಾಲ್, ವೇಯ್ಟಲಿಫ್ಟಿಂಗ್, ಕುಸ್ತಿ, ವುಶು ಸ್ಪರ್ಧೆಗಳು ಕಂಠೀರವ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ. ಉಳಿದಂತೆ ಸಾಯಿ ದಕ್ಷಿಣ ಕೇಂದ್ರದಲ್ಲಿ ರೈಲ್ ಶೂಟಿಂಗ್, ವಿದ್ಯಾನಗರ ಕ್ರೀಡಾ ಸಂಕೀರ್ಣದಲ್ಲಿ ನೆಟ್ ಬಾಲ್, ಶಾಂತಿನಗರದ ಕೆ.ಎಂ ಕಾರಿಯಪ್ಪ ಕ್ರೀಡಾಂಗಣದಲ್ಲಿ ಹಾಕಿ, ಜಯಪ್ರಕಾಶ್ ನಾರಾಯಣ ರಾಷ್ಟ್ರೀಯ ಯುವ ಕೇಂದ್ರದಲ್ಲಿ ಖೋ-ಖೋ, ಹ್ಯಾಂಡ್ ಬಾಲ್, ವೈಟ್ ಫೀಲ್ಡ್‌ನ ಗೋಪಾಲನ್ ಕ್ರೀಡಾ ಕೇಂದ್ರದಲ್ಲಿ ಜಿಮ್ನಾಸ್ಟಿಕ್ಸೃ್ ಸ್ಪರ್ಧೆಗಳು ನಡೆಯಲಿವೆ.

ಸಿಎಂ,ಡಿಸಿಎಂ ಉದ್ಘಾಟನೆ
ಏಳು ದಿನ ನಡೆಯುವ ಟೂರ್ನಿಗೆ ಕಂಠೀರಣ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಕೆಒಎ ಅಧ್ಯಕ್ಷ , ಸಿಎಂ ರಾಜಕೀಯ ಕಾರ್ಯದರ್ಶಿ ಡಾ.ಕೆ. ಗೋವಿಂದರಾಜ್ ಸೇರಿ ಸಚಿವರು ಭಾಗವಹಿಸಲಿದ್ದಾರೆ. ನ.20ರಂದು ಕೂಟದ ಸಮಾರೋಪ ಸಮಾರಂಭ ನಡೆಯಲಿದೆ.

15 ಅಗ್ರ ಮಕ್ಕಳಿಗೆ
ನಗದು ಬಹುಮಾನ
ಕಂಠೀರವ ಕ್ರೀಡಾಂಗಣದಲ್ಲಿರುವ ಕ್ರೀಡಾ ವಿಜ್ಞಾನ ಸಂಸ್ಥೆ (ಎಸ್‌ಎಸ್‌ಸಿ), ಡ್ರೀಮ್ ಸ್ಪೋರ್ಟ್ಸ್ ೌಂಡೇಷನ್ ಸಹಯೋಗದಲ್ಲಿ ಕೂಟದ ಅಗ್ರ 15 ಆಟಗಾರರಿಗೆ ತಲಾ ಐದು ಸಾವಿರ ನಗದು ಬಹುಮಾನ ಜತೆಗೆ 200 ಅತ್ಯುತ್ತಮ ಪ್ರತಿಭೆಗಳಿಗೆ ಒಂದು ತಿಂಗಳು ಮಾನಸಿಕ, ಕೌಶಲ ಅಭಿವೃದ್ಧಿ ತರಬೇತಿ ಜತೆಗೆ ಭವಿಷ್ಯದಲ್ಲಿ ಫಿಟ್ನೆಸ್ ಕಾಯ್ದುಕೊಳ್ಳಲು ಸೂಕ್ತ ಮಾಹಿತಿಯ ಜತೆಗೆ ನೆರವು ಒದಗಿಸಲಾಗುವುದು.

Share This Article

30 ನೇ ವಯಸ್ಸಿನಲ್ಲಿಯೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದೆಯೇ? White Hair ಆಗಿದ್ರೆ ಇಲ್ಲಿದೆ ಉಪಯುಕ್ತ ಮಾಹಿತಿ

White Hair : ಇಂದಿನ ಕಾಲದಲ್ಲಿ ಜನರ ಕೂದಲು ಚಿಕ್ಕ ವಯಸ್ಸಿನಲ್ಲೇ ಬೆಳ್ಳಗಾಗುತ್ತಿದೆ. ಇನ್ನು ಕೆಲವರು…

ಪ್ರಯಾಣ ಮಾಡುವಾಗ ವಾಂತಿ ಬರುತ್ತದೆಯೇ? ಚಿಂತಿಸಬೇಡಿ, ಈ ಸಿಂಪಲ್​​ ಟಿಪ್ಸ್​ ಅನುಸರಿಸಿ ಸಾಕು! Vomiting while Travelling

Vomiting while Travelling : ಸಾಮಾನ್ಯವಾಗಿ ಕೆಲ ಜನರು ಪ್ರಯಾಣವನ್ನು ಇಷ್ಟಪಡುವುದಿಲ್ಲ. ಅದರಲ್ಲೂ ಕಾರು, ಬಸ್​ನಂತಹ…

Health Tips: ಚಳಿಗಾಲದಲ್ಲಿ ಕೆಮ್ಮು, ನೆಗಡಿ ಹೋಗಲಾಡಿಸಲು ಹೀಗೆ ಮಾಡಲೇಬೇಕು!

Health Tips:   ಚಳಿಗಾಲ   ಶುರುವಾಗಿದೆ ಎಂದರೆ ಸೀಸನಲ್ ಕಾಯಿಲೆಗಳೂ ನಮ್ಮನ್ನು ಕಾಡುತ್ತಿವೆ. ಅದರಲ್ಲೂ ಶೀತ ವಾತಾವರಣದಲ್ಲಿ…