ವಿರಾಟ್​ ವಿಶ್ವಕಪ್​ ಗೆಲ್ಲಬೇಕಾದರೆ ಈ ಆಟಗಾರನ ಮಾತು ಕೇಳಲೇಬೇಕಂತೆ?

ನವದೆಹಲಿ: ಮುಂಬರುವ ವಿಶ್ವಕಪ್​ನಲ್ಲಿ ಭಾರತ ಗೆಲ್ಲುವ ಫೇವರಿಟ್​ ತಂಡವಾಗಿದ್ದು, ನಾಯಕ ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತುಂಬಾ ಬಲಿಷ್ಠವಾಗಿದೆ. ಈಗಾಗಲೇ ವಿದೇಶಿ ನೆಲದಲ್ಲಿ ಗೆಲುವಿನ ಲಯಕ್ಕೆ ಮರಳಿರುವ ಭಾರತ ವಿಶ್ವಕಪ್​ ಮೇಲೆ ಕಣ್ಣಿಟ್ಟಿದೆ. ಆದರೆ, ಟೀಂ ಇಂಡಿಯಾ ವಿಶ್ವಕಪ್​ ಗೆಲ್ಲಬೇಕಾದರೆ ಈ ಆಟಗಾರ ಮಾತನ್ನು ಕೇಳಲೇಬೇಕಂತೆ. ಹಾಗದ್ರೆ ಆ ಆಟಗಾರು ಯಾರು? ಎಂಬ ಕುತೂಹಲವಿದ್ದರೆ, ಮುಂದೆ

ಹೌದು, ವಿರಾಟ್​ ಕೊಹ್ಲಿ ಉತ್ತಮ ನಾಯಕನಾಗಿದ್ದರೂ ಸಹ ಇಲ್ಲಿಯವರೆಗೆ ಐಸಿಸಿಯ ಯಾವುದೇ ಪ್ರಮುಖ ಟೂರ್ನಿಯನ್ನು ಗೆದ್ದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ಕಹಿ ಸತ್ಯ. ಆದರೆ, ಈ ಬಾರಿ ವಿರಾಟ್ ವಿಶ್ವಕಪ್ ಗೆಲ್ಲಬೇಕಂದರೆ ಮಾಡಬೇಕಾಗಿರೋದು ಇಷ್ಟೇ, ಅದೇನೆಂದರೆ ಧೋನಿಯ ಮಾತನ್ನು ಕೇಳಬೇಕಂತೆ. ಇದನ್ನು ಟೀಂ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಹೇಳಿದ್ದಾರೆ.

ಟೀಂ ಇಂಡಿಯಾಕ್ಕೆ ಧೋನಿ ಮಾರ್ಗದರ್ಶನ ತುಂಬಾ ಮುಖ್ಯ. ಅವರು ತಂಡದ ನಾಯಕನಲ್ಲ. ಆದರೂ ವಿರಾಟ್ ಕೊಹ್ಲಿ ಅವರು ಧೋನಿಯನ್ನು ನಂಬಬೇಕು, ಸಂಕಷ್ಟದ ಸಂದರ್ಭದಲ್ಲಿ ಧೋನಿಯ ನಿರ್ಧಾರದ ಬಗ್ಗೆ ಕೊಹ್ಲಿ ನಂಬಿಕೆ ಇಡಬೇಕು ಎಂದು ಕೈಫ್​ ವಿಶ್ವಕಪ್​ನಲ್ಲಿ ಧೋನಿ ಅವರ ಉಪಸ್ಥಿತಿಯ ಅವಶ್ಯಕತೆಯ ಬಗ್ಗೆ ಮಾತನಾಡಿದ್ದಾರೆ.

ಧೋನಿ ಅವರು ತಂಡದ ನಾಯಕನಲ್ಲ. ಆದರೆ, ಅವರ ಮಾರ್ಗದರ್ಶನ ತುಂಬಾ ಮುಖ್ಯವಾಗಿದ್ದು, ಸಂಕಷ್ಟದಲ್ಲಿ ಮಾಹಿಯ ಕೆಲ ನಿರ್ಧಾರಗಳನ್ನ ವಿರಾಟ್ ಕೇಳಬೇಕು ಎಂದು ಕೈಫ್​ ಅಭಿಪ್ರಾಯ ಪಟ್ಟಿದ್ದಾರೆ..

ಧೋನಿ ಒಬ್ಬ ಅದ್ಭುತ ಆಟಗಾರ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇತ್ತೀಚಿನ ದಿನಗಳಲ್ಲಿ ರಾಂಚಿಯ ರಾಜಕುಮಾರನ ಆಟ ಎಲ್ಲರೂ ಮೆಚ್ಚುವಂತದ್ದು, ಕೊಹ್ಲಿ ಜತೆ ಧೋನಿ ಮತ್ತು ಇತರ ಆಟಗಾರರ ಕೈ ಜೋಡಿಸಿದರೆ ಭಾರತ ಸುಲಭವಾಗಿ ವಿಶ್ವಕಪ್ ಎತ್ತಿ ಹಿಡಿಯುವುದು ಪಕ್ಕಾ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *