ರಾಮದುರ್ಗ: ಮಹಾನ್ ಶಿವಯೋಗಿಗಳು ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಪ್ರಯುಕ್ತ ವಿದ್ಯಾಪ್ರಸಾರಕ ಸಮಿತಿಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ವ್ಯಸನಮುಕ್ತ ದಿನ ಆಚರಿಸಲಾಯಿತು.
ಮಹಾವಿದ್ಯಾಲಯದ ಸಂಯೋಜಕ ಎಸ್. ಲೇಪಾಕ್ಷಿ ಮಾತನಾಡಿ. ಸಮಾಜ ಸುಧಾರಣೆಗೆ ಮಹಾಂತ ಶಿವಯೋಗಿಗಳು ಜನರಿಗೆ ಸನ್ಮಾರ್ಗ ತೋರಿಸುವ ಕಾಯಕವನ್ನು ಮಾಡಿದರು. ದುಶ್ಚಟಮುಕ್ತ ಸಮಾಜ ನಿರ್ಮಿಸುವ ಉದ್ದೇಶದಿಂದ ಹಳ್ಳಿಹಳ್ಳಿಗೆ ಜನರಿಂದ ದುಶ್ಚಟಗಳ ಭಿಕ್ಷೆ ಕೇಳಿದರು.
ರಾಜ್ಯ ಸರ್ಕಾರ ಅವರ ಜನ್ಮದಿನವನ್ನು ವ್ಯಸನಮುಕ್ತ ದಿನವನ್ನಾಗಿ ಆಚರಿಸುತ್ತಿರುವುದು ಸಂತಸದ ಸಂಗತಿ. ಶಿವಯೋಗಿಗಳ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಂಡಾಗ ಜೀವನ ಸಾರ್ಥಕ ಎಂದರು. ಜಿಮಖಾನಾ ಉಪಾಧ್ಯಕ್ಷ ಪ್ರೊ.ಎಂ.ಆರ್. ಕುಂಬಾರ, ಉಪನ್ಯಾಸಕರಾದ ಡಾ.ಎನ್.ಎನ್. ವಾಳ್ವೇಕರ, ಪ್ರೊ.ಜಿ.ಪಿ. ಗಡದೆ, ಪ್ರೊ.ಜಿ.ಬಿ. ಬಟಕುರ್ಕಿ, ಪ್ರೊ.ಎಸ್.ಎಂ. ನಾಯ್ಕ, ಡಾ.ವಿ.ಬಿ. ವಗ್ಗರ, ಪ್ರೊ.ಶಿವಲೀಲಾ ಗೋಲನ್ನವರ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಆನಂದ ಲಮಾಣಿ, ಮಂಜುಳಾ ರಾಠೋಡ ಇತರರಿದ್ದರು.