ಬೆಂಗಳೂರು: ಉಪನ್ಯಾಸಕಿಯಾಗಿದ್ದ ಪತ್ನಿಯನ್ನು ಹಣಕಾಸು ವಿಚಾರಕ್ಕೆ ಉಸಿರುಗಟ್ಟಿಸಿ ಕೊಂದು ಸಹಜ ಸಾವು ಎಂದು ಬಿಂಬಿಸಿ ನಾಟಕವಾಡಿದ್ದ ಪತಿಯನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಮಲ್ಲೇಶ್ವರ ೧೮ನೇ ಅಡ್ಡರಸ್ತೆ ನಿವಾಸಿ ಶರತ್ ಉತ್ತಂಗಿ (೪೫) ಬಂಧಿತ ಆರೋಪಿ. ಆತ ಪತ್ನಿ ಚೇತನಾ (೪೫) ಅವರನ್ನು ಕೊಲೆ ಮಾಡಿದ್ದ. ಮೂಲತಃ ದಾವಣಗೆರೆ ಜಿಲ್ಲೆ ಹರಪನಹಳ್ಳಿಯ ಶರತ್ ಮತ್ತು ಚೇತನಾ ಬಾಲ್ಯ ಸ್ನೇಹಿತರು. ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದ ಅವರು ಪರಸ್ಪರ ಪ್ರೀತಿಸಿ ೧೫ ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ದಂಪತಿಗೆ ೧೩ ವರ್ಷದ ಮಗಳಿದ್ದಾಳೆ. ಎಂ.ಎ. ಪದವೀಧರೆಯಾದ ಚೇತನಾ, ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರು. ಎಂಬಿಎ ಪದವೀಧರನಾದ ಆರೋಪಿ ಶರತ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೀಯಾಳಿಸುತ್ತಿದ್ದ ಪತ್ನಿ:
ಪತಿಗಿಂತ ಹೆಚ್ಚಿನ ಸಂಬಳ ಪಡೆಯುತ್ತಿದ್ದ ಚೇತನಾ ಅವರು ಶರತ್‌ನನ್ನು ಕೀಳಾಗಿ ಕಾಣುತ್ತಿದ್ದರು. ತನಗಿಂತ ಕಡಿಮೆ ಸಂಬಳ ಪಡೆಯುತ್ತೀಯಾ ಎಂದು ಪತಿಯನ್ನು ಹೀಯಾಳಿಸುತ್ತಿದ್ದರು ಎನ್ನಲಾಗಿದೆ. ಹಣಕಾಸು ವಿಚಾರಕ್ಕೆ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಪತ್ನಿಯ ವರ್ತನೆಯಿಂದ ಅಸಮಾಧಾನಗೊಂಡಿದ್ದ ಶರತ್, ಚೇತನಾ ಅವರನ್ನು ಕೊಲೆ ಮಾಡಲು ನಿರ್ಧರಿಸಿದ್ದ. ಈ ಮಧ್ಯೆ, ಚೇತನಾ ಅವರಿಗೆ ೆ.೩ ನೆಗಡಿಯಾಗಿತ್ತು. ಆ ದಿನ ರಾತ್ರಿ ಕೊಲೆ ಸಂಚನ್ನು ಕಾರ್ಯಗತಗೊಳಿಸಲು ನಿರ್ಧರಿಸಿದ್ದ ಶರತ್, ಶೀತದ ಮಾತ್ರೆಗಳ ಜತೆಗೆ ನಿದ್ದೆ ಮಾತ್ರೆಯನ್ನು ಪತ್ನಿಗೆ ನುಂಗಿಸಿದ್ದ. ನಿದ್ದೆ ಮಾತ್ರೆ ನುಂಗಿ ಗಾಢ ನಿದ್ದೆಗೆ ಜಾರಿದ ಚೇತನಾ ಅವರನ್ನು ಶರತ್ ಮಂಗಳವಾರ ನಸುಕಿನಲ್ಲಿ ಕೊಲೆ ಮಾಡಿದ್ದ. ಚೇತನಾ ಅವರ ಕುತ್ತಿಗೆಗೆ ಬೆಡ್‌ಶೀಟ್ ಬಿಗಿದು ಉಸಿರುಗಟ್ಟಿಸಿ ಕೊಂದಿದ್ದ. ನಂತರ ಶವವನ್ನು ಮಂಚದಿಂದ ಕೆಳಗೆ ಹಾಕಿ, ಪಕ್ಕದ ಕೊಠಡಿಯಲ್ಲಿ ಮಲಗಿದ್ದ ಮಗಳನ್ನು ಎಬ್ಬಿಸಿದ್ದಾನೆ. ಬಳಿಕ ನೆಲ ಮಹಡಿಯಲ್ಲಿ ವಾಸವಿರುವ ಮಾಲೀಕರಿಗೆ ವಿಷಯ ತಿಳಿಸಿ ಅವರ ಸಹಾಯದಿಂದ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ. ಚೇತನಾ ಅವರನ್ನು ಪರೀಕ್ಷಿಸಿದ್ದ ವೈದ್ಯರು ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ಹೇಳಿದ್ದರು.
ಕೊಲೆಗೈದು ಏನು ಗೊತ್ತಿಲ್ಲದಂತೆ ನಾಟಕವಾಡಿದ್ದ:
ನೆಗಡಿಯಿಂದ ಬಳಲುತ್ತಿದ್ದ ಪತ್ನಿ ಚೇತನಾ ೆ.೩ರಂದು ರಾತ್ರಿ ತಲೆ ಸುತ್ತುತ್ತಿದೆ ಎಂದು ತನಗೆ ಹೇಳಿದ್ದಳು. ಹೀಗಾಗಿ, ಜ್ವರದ ಮಾತ್ರೆ ಕೊಟ್ಟಿದ್ದೆ. ಮಾತ್ರೆ ನುಂಗಿದ ನಂತರ ಪತ್ನಿ ನಿದ್ದೆ ಮಾಡಿದ್ದಳು. ಬಳಿಕ ಮಧ್ಯರಾತ್ರಿ ೨.೩೦ ಕ್ಕೆ ಮಂಚದಿಂದ ಕೆಳಗೆ ಬಿದ್ದಳು. ಕೂಡಲೇ ಮಗಳನ್ನು ಎಬ್ಬಿಸಿ, ಮನೆ ಮಾಲೀಕರ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ದೆ. ಆದರೆ, ಮಾರ್ಗ ಮಧ್ಯೆಯೇ ಚೇತನಾ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು ಎಂದು ಆರೋಪಿಯು ಸಂಬಂಧಿಕರಿಗೆ ಸುಳ್ಳು ಹೇಳಿದ್ದ. ಅದೇ ರೀತಿ ಮಗಳು ಮತ್ತು ಮನೆ ಮಾಲೀಕರಿಗೂ ಜ್ವರದ ಮಾತ್ರೆಯ ಕಟ್ಟು ಕಥೆ ಹೇಳಿ ನಂಬಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹೀಯಾಳಿಸಿದಕ್ಕೆ ಪತ್ನಿ ಕಥೆ ಮುಗಿಸಿದ ಪತಿ

You Might Also Like
ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips
ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…
ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips
ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…
ವೇಜ್, ನಾನ್ವೆಜ್ ಖಾದ್ಯ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!
Tomato : ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು ಕರಿ, ಗ್ರೇವಿ, ಸೂಪ್…