ಐತಿಹಾಸಿಕ ಪ್ರಸಿದ್ಧ ನವಬೃಂದಾವನವನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳು: ಸ್ಥಳದಲ್ಲಿ ಬಿಗುವಿನ ವಾತಾವರಣ

ಗಂಗಾವತಿ: ಐತಿಹಾಸಿಕ ಪ್ರಸಿದ್ಧ ನವಬೃಂದಾವನವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ನಿಧಿಯಾಸೆಗಾಗಿ ರಾತ್ರೋರಾತ್ರಿ ಬೃಂದಾವನವನ್ನು ಹಾಳುಮಾಡಿದ್ದಾರೆ.

ಕೊಪ್ಪಳ ಜಿಲ್ಲೆಯ ಆನೆಗೊಂದಿ ಗ್ರಾಮದಲ್ಲಿ ವ್ಯಾಸರಾಯರ ಬೃಂದಾವನ ಸೇರಿ ಒಟ್ಟು ಒಂಭತ್ತು ಮಧ್ವ ಸಂತರ ಬೃಂದಾವನಗಳು ಇವೆ. ಈ ನವಬೃಂದಾವನವನ್ನು ತುಂಗಭದ್ರಾ ನದಿ ಸುತ್ತುವರಿದಿದೆ. ಹಂಪಿಯಿಂದ ಸುಮಾರು 20 ಕಿಮೀ ದೂರದಲ್ಲಿರುವ ನವಬೃಂದಾವನದಲ್ಲಿ ರಾತ್ರೋರಾತ್ರಿ ಕಂಬಗಳನ್ನು ಕಿತ್ತು ಹಾಕಲಾಗಿದೆ. ಆಳವಾದ ಗುಂಡಿಗಳನ್ನೂ ತೋಡಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ನವಬೃಂದಾವನ ಮಾಲೀಕತ್ವಕ್ಕೆ ಸಂಬಂಧಪಟ್ಟಂತೆ ಕೆಲವು ತೊಡಕುಗಳು ಇದ್ದು ಇದೊಂದು ವಿವಾದಿತ ಪ್ರದೇಶವೂ ಹೌದು.

One Reply to “ಐತಿಹಾಸಿಕ ಪ್ರಸಿದ್ಧ ನವಬೃಂದಾವನವನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳು: ಸ್ಥಳದಲ್ಲಿ ಬಿಗುವಿನ ವಾತಾವರಣ”

  1. ಸ್ವಾರ್ಥೀ ಮಾನವರಿಗೆ ಇವೆಲ್ಲಾ ಬೇಕಿಲ್ಲ. ಒಟ್ಟಿನಲ್ಲಿ ಹಳೆಯ ಸ್ಮಾರಕಗಳನ್ನು ಕೆಡವಿ ಇವರುಗಳು ಆನಂದ ಅನುಭವಿಸುತ್ತಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ಭೂಮಿಯೂ ಧ್ವಂಸವಾಗಿ ಹೋಗುವುದರಲ್ಲಿ ಸಂಶಯವೇ ಇಲ್ಲ. ಈ ಲೋಕ ದುರಾಚಾರಿಗಳಿಂದ ತುಂಬಿತುಳುಕುತ್ತಿದೆ.

Leave a Reply

Your email address will not be published. Required fields are marked *