ಮುಂಡರಗಿ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕತೆ ಪುನಶ್ಚೇತನಗೊಳ್ಳುವಲ್ಲಿ ಸಹಕಾರಿಯಾಗಿದೆ. ಐದು ಯೋಜನೆಗಳು ಈಗಾಗಲೇ ಶೇ.90ರಷ್ಟು ಕಾರ್ಯಗತವಾಗಿದ್ದು, ಶೇ.100ರಷ್ಟು ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಗ್ಯಾರಂಟಿ ಸಮಿತಿಯವರು, ಅಧಿಕಾರಿಗಳು ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ಹೇಳಿದರು.
ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಗ್ಯಾರಂಟಿ ಸಮಿತಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2024- 25ನೇ ಸಾಲಿನಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ 58 ಸಾವಿರ ಕೋಟಿ ರೂ.ಗಳನ್ನು ತೆಗೆದಿರಿಸಿದೆ. ತಾಲೂಕಿನಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲು ನಾವೆಲ್ಲರೂ ಕಾರ್ಯಪ್ರವೃತರಾಗಬೇಕು. ಮುಂಬರುವ ದಿನಗಳಲ್ಲಿ ಡಂಬಳ ಮತ್ತು ಮುಂಡರಗಿ ಹೋಬಳಿ ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಮಕ್ಷಮ ಗ್ಯಾರಂಟಿ ಸಮಿತಿ ಪ್ರಗತಿ ಪರಿಶೀಲನೆ ಸಭೆ ಕೈಗೊಂಡು ಮತ್ತಷ್ಟು ವೇಗ ಕೊಡಲಾಗುವುದು ಎಂದರು.
ತಾಲೂಕಿನಲ್ಲಿ 432 ನಿರುದ್ಯೋಗಿ ಪದವೀಧರರು ಅರ್ಜಿ ಹಾಕಿದ್ದರು. ಆ ಪೈಕಿ ಸದ್ಯ 312 ಫಲಾನುಭವಿಗಳಿಗೆ ಯುವನಿಧಿ ಹಣ ಜಮೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ ಪಿ.ಎನ್. ತಿಳಿಸಿದರು. 120 ಅರ್ಜಿದಾರರು ಯಾವ ಕಾರಣಕ್ಕೆ ಯೋಜನೆಗೆ ಒಳಪಟ್ಟಿಲ್ಲ ಎಂದು ಅಧ್ಯಕ್ಷ ಡಿ.ಡಿ. ಮೋರನಾಳ, ಸದಸ್ಯ ವಿಶ್ವನಾಥ ಪಾಟೀಲ ಪ್ರಶ್ನಿಸಿದರು. ತಾಂತ್ರಿಕ ಸಮಸ್ಯೆಗಳಿಂದ, ಸಂಪೂರ್ಣ ದಾಖಲಾತಿ ದೊರೆಯದಿದ್ದರಿಂದ ತಡೆಹಿಡಿದಿದೆ ಎಂದರು. 120 ಅರ್ಜಿದಾರರ ಮಾಹಿತಿ ನೀಡಿ ಅವರನ್ನು ಸಂಪರ್ಕಿಸಿ ಅಗತ್ಯ ದಾಖಲಾತಿ ಪೂರೈಸುವ ನಿಟ್ಟಿನಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ಮೋರನಾಳ ತಿಳಿಸಿದರು.
ಶಕ್ತಿಯೋಜನೆಯಡಿ ತಾಲೂಕಿನಲ್ಲಿ ಡಿಸೆಂಬರ್ ವರೆಗೆ ತಾಲೂಕಿನಲ್ಲಿ 1.3 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ ಎಂದು ಸ್ಥಳೀಯ ಡಿಪೋ ಸಿಬ್ಬಂದಿ ಭೀಮಾನಾಯ್ಕ ತಿಳಿಸಿದರು. ಅನ್ನಭಾಗ್ಯ ಯೋಜನೆಯಡಿ ತಾಲೂಕಿನಲ್ಲಿ 31,008 ಬಿಪಿಎಲ್, ಎಐ ಪಡಿತರ ಕಾರ್ಡ್‌ದಾರರಿಗೆ ಸೆಪ್ಟೆಂಬರ್‌ವರೆಗೆ 1.64 ಕೋಟಿ ರೂ. ಜಮೆಯಾಗಿದೆ ಎಂದು ಆಹಾರ ನಿರೀಕ್ಷಕ ಜೆ.ಬಿ. ಅಮಾತಿ ಮಾಹಿತಿ ನೀಡಿದರು.
ಗೃಹಲಕ್ಷ್ಮಿ ಯೋಜನೆ ಅಡಿ ನೋಂದಣಿಯಾದ 34,525 ಫಲಾನುಭವಿಗಳ ಪೈಕಿ 33,824 ಮಹಿಳೆಯರಿಗೆ ಒಟ್ಟು 6.76 ಕೋಟಿ ಹಣ ಜಮೆಯಾಗಿದೆ. ಶೇ.98ರಷ್ಟು ಗುರಿ ಸಾಧಿಸಲಾಗಿದೆ ಎಂದು ಸಿಡಿಪಿಒ ಮಹಾದೇವ ಇಸರನಾಳ ತಿಳಿಸಿದರು.
ಆರ್ಥಿಕ ಪುನಶ್ಚೇತನಕ್ಕೆ ಗ್ಯಾರಂಟಿ ಸಹಕಾರಿ

You Might Also Like
ಬಿಸಿಲಲ್ಲಿ ಸೆಖೆ ತಾಳಲಾರದೆ ICE ನೀರು ಕುಡಿದ್ರೆ ಜೀವಕ್ಕೆ ಅಪಾಯ ಖಂಡಿತ! Summer Health
Summer Health: ನೀರು ಮನುಷ್ಯರಿಗೆ ಬಹಳ ಅವಶ್ಯಕ. ನಾವು ಅನ್ನ ತಿನ್ನದೆ ಬದುಕಬಹುದು, ಆದರೆ ನೀರು…
ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್? ಇಲ್ಲಿದೆ ನೋಡಿ ಉತ್ತರ | Summer
Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…
ಒಂದು ಪ್ರೀತಿಯ ಅಪ್ಪುಗೆ ಸಾಕು! ವಾಸಿ ಮಾಡುತ್ತೆ ನಾನಾ ಕಾಯಿಲೆ… hugging
hugging : ಫೆಬ್ರವರಿ 12 ರಂದು ಅಪ್ಪುಗೆಯ ದಿನ, ಅಂದರೆ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ಅವರ…