ಚುನಾವಣೆಗೂ ಮುನ್ನ ದಾಳಿ ನಡೆಯುವ ಬಗ್ಗೆ ಗುಪ್ತಚರ ಇಲಾಖೆ ಫೆ.8ರಂದೇ ಎಚ್ಚರಿಸಿತ್ತು: ಮಮತಾ

ಕೋಲ್ಕತ: ಚುನಾವಣೆಗೂ ಮೊದಲು ದೇಶದಲ್ಲಿ ಉಗ್ರರಿಂದ ವಿಧ್ವಂಸಕ ದಾಳಿ ನಡೆಯಲಿದೆ ಎಂಬ ಮಾಹಿತಿ ಕೇಂದ್ರ ಸರ್ಕಾರಕ್ಕೆ ಫೆ.8ರಂದೇ ಸಿಕ್ಕಿತ್ತು. ಆದರೆ, ಸರ್ಕಾರ ಯಾವುದೇ ಭದ್ರತಾ ಕ್ರಮ ಕೈಗೊಂಡಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಪುಲ್ವಾಮ ಘಟನೆ ಕುರಿತು ಇಂದು ಕೋಲ್ಕತಾದಲ್ಲಿ ಮಾತನಾಡಿರುವ ಅವರು, ದೇಶದಲ್ಲಿ ದಾಳಿ ನಡೆಯುವ ಬಗ್ಗೆ ಗುಪ್ತಚರ ಇಲಾಖೆಯು ಸರ್ಕಾರಕ್ಕೆ ಫೆ.8ರಂದು ಮಾಹಿತಿ ನೀಡಿದೆ. ಆದರೆ, ಯಾಕೆ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಲಿಲ್ಲ. ಹಾಗಿದ್ದರೂ ಸೈನಿಕರಿದ್ದ 78 ವಾಹನಗಳನ್ನು ಭದ್ರತೆ ಇಲ್ಲದೇ ಕೊಂಡೊಯ್ದಿದ್ದೇಕೆ?” ಎಂದು ಅವರು ತೀವ್ರ ಟೀಕೆ ಮಾಡಿದರು.

ಇದಿಷ್ಟೇ ಅಲ್ಲ, “ನನ್ನ ಫೋನ್​ ಕರೆಗಳೂ ಕೂಡ ಕದ್ದಾಲಿಕೆಯಾಗುತ್ತಿವೆ. ಈ ಬಗ್ಗೆ ನನಗೂ ಗುಪ್ತಚರ ಇಲಾಖೆ ವರದಿಗಳಿವೆ. ಈ ವಿಚಾರ ನಿಮಗೂ ಗೊತ್ತು,” ಎಂದು ಮಮತಾ ಬ್ಯಾನರ್ಜಿ ಹೇಳಿದರು.

One Reply to “ಚುನಾವಣೆಗೂ ಮುನ್ನ ದಾಳಿ ನಡೆಯುವ ಬಗ್ಗೆ ಗುಪ್ತಚರ ಇಲಾಖೆ ಫೆ.8ರಂದೇ ಎಚ್ಚರಿಸಿತ್ತು: ಮಮತಾ”

Leave a Reply

Your email address will not be published. Required fields are marked *