ಮಹಿಳೆಯರು ಅಯ್ಯಪ್ಪ ದೇಗುಲಕ್ಕೆ ಹೋಗುವುದಾದರೆ ಅವಕಾಶ ಕಲ್ಪಿಸುತ್ತೇವೆ; ಕೇರಳ ಸಿಎಂ

ಕೊಚ್ಚಿ: ಮಹಿಳಾ ಭಕ್ತರು ಅಯ್ಯಪ್ಪ ದೇಗುಲಕ್ಕೆ ಹೋಗುವುದಾದರೆ ಅವರಿಗೆ ಸೂಕ್ತ ರೀತಿಯ ಅವಕಾಶ ಕಲ್ಪಿಸಲಾಗುವುದು. ಇದನ್ನು ವಿರೋಧಿಸುವ ನೆಪದಲ್ಲಿ ಯಾರಾದರೂ ಕಾನೂನು ಮೀರಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಸ್ಪಷ್ಟಪಡಿಸಿದ್ದಾರೆ.

ಮಹಿಳಾ ಭಕ್ತಾದಿಗಳಿಗೆ ಶಬರಿಮಲೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್​ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಕೇರಳದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ” ಕಾನೂನನ್ನು ಕೈಗೆ ತೆಗೆದುಕೊಳ್ಳಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ. ಮಹಿಳಾ ಭಕ್ತರು ದೇಗುಲಕ್ಕೆ ಹೋಗುವುದಾದರೆ ಸೂಕ್ತ ಅವಕಾಶ ಕಲ್ಪಿಸುತ್ತೇವೆ. ಸುಪ್ರೀಂ ಕೋರ್ಟ್​ ನೀಡಿರುವ ತೀರ್ಪು ಮರುಪರಿಶೀಲಿಸಲು ಕೇರಳ ಸರ್ಕಾರ ಯಾವುದೇ ಅರ್ಜಿ ಸಲ್ಲಿಸದು, ಎಂದು ಅವರು ತಿಳಿಸಿದರು.

ಅಲ್ಲದೆ, ಸುಪ್ರೀಂಕೋರ್ಟ್​ ನೀಡಿರುವ ತೀರ್ಪನ್ನು ಜಾರಿಗೊಳಿಸುತ್ತೇವೆ ಎಂದು ನ್ಯಾಯಾಲಯಕ್ಕೆ ಹೇಳಿದ್ದೇವೆ ಎಂದೂ ಪಿಣರಾಯಿ ವಿಜಯನ್​ ಹೇಳಿದ್ದಾರೆ.