ಗುಂಡ್ಲುಪೇಟೆ: ತಾಲೂಕಿನ ಕೋಟೆಕೆರೆ ಗ್ರಾಮದಲ್ಲಿ ಧರೆಗೆ ದೊಡ್ಡವರು ಮಂಟೇಸ್ವಾಮಿ ಜಾತ್ರೆ ವಿಜೃಂಭಣೆಯಿಂದ ನೆರವೇರಿತು.

ಮಂಟೇಸ್ವಾಮಿ ಗದ್ದಿಗೆ ಉತ್ಸವದ ಅಂಗವಾಗಿ ಗ್ರಾಮದ ರಸ್ತೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಉತ್ಸವ ಸಾಗುವ ಮಾರ್ಗದಕ್ಕೂ ರಸ್ತೆಗೆ ನೀರು ಹಾಕಿ ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸುತ್ತಮುತ್ತ 33ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ಮಂಟೇಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು.
ಗ್ರಾಮದ ಭಕ್ತರು ಅಲತ್ತೂರು ಗ್ರಾಮದಿಂದ ಮಂಟೇಸ್ವಾಮಿ ಗದ್ದುಗೆಯನ್ನು ತಂದು ವಿವಿಧ ಹೂಗಳಿಂದ ಅಲಂಕರಿಸಿ ಛತ್ರಿ ಚಾಮರ ವಾದ್ಯ ಮೇಳಗಳ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಮಂಟೇಸ್ವಾಮಿ ಗದ್ದಿಗೆಯನ್ನು ಆಲತ್ತೂರು ಗ್ರಾಮಕ್ಕೆ ತಲುಪಿಸಿದರು.