ನವಲಗುಂದ: ಪಟ್ಟಣದ ಕುರುಬರ ಓಣಿಯ ಬೀರಲಿಂಗೇಶ್ವರ ದೇವಸ್ಥಾನದ 13ನೇ ವರ್ಷದ ಜಾತ್ರಾ ಮಹೋತ್ಸವದ ಪಲ್ಲಕ್ಕಿ ಉತ್ಸವಕ್ಕೆ ಅಜಾತ ನಾಗಲಿಂಗಮಠ ವೀರೇಂದ್ರ ಸ್ವಾಮೀಜಿ ಭಾನುವಾರ ಚಾಲನೆ ನೀಡಿದರು.
ಪಟ್ಟಣದ ಪ್ರಮುಖ ಬೀದಿಗಳಾದ ಗಣಪತಿ ದೇವಸ್ಥಾನದಿಂದ ನೀಲಮ್ಮನ ಕೆರೆಯಿಂದ ಲಿಂಗರಾಜ ವೃತ್ತ ಹಾಗೂ ಗಾಂಧಿ ಮಾರುಕಟ್ಟೆ ಮೂಲಕ ಡೊಳ್ಳು ಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ ವೈಭವೋಪೇರಿತವಾಗಿ ಜರುಗಿತು.
ಬೆಳಗ್ಗೆ 6 ಗಂಟೆಗೆ ಬೀರಲಿಂಗೇಶ್ವರ ಮೂರ್ತಿಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆಯು ಸಂಜೀವ ಹಿರೇಮಠ ಅವರ ವೈದಿಕ ಸಾನ್ನಿಧ್ಯದಲ್ಲಿ ನಡೆಯಿತು. ಸಂಜು ಹಿರೇಮಠ, ಡಿಎಫ್. ಮಾಬನೂರು, ಶಿವಾನಂದ ಕೊಳಲಿನ, ಮಾಳಪ್ಪ ಮೂಲಿಮನಿ, ಹನುಮಂತ ಬಂಡಿವಾಡ, ಕಲ್ಲಪ್ಪ ಮುಳ್ಳೂರು, ಯಲ್ಲಪ್ಪ ದಾಡಿಬಾವಿ, ಶಿವಪ್ಪ ಬಂಡಿವಾಡ, ಲಕ್ಷ್ಮಣ ಮೂಲಿಮನಿ, ಹನುಮಂತ ಬಂಡಿವಾಡ, ಸಿದ್ದಪ್ಪ ಕೊಳಲಿನ, ದ್ಯಾಮಣ್ಣ ಪೂಜಾರಿ , ರವಿ ಬೆಂಡಿಗೇರಿ , ಸಿದ್ದು ಬಸಾಪುರ, ಬಸವರಾಜ ಕೊಳಲಿನ, ರಾಜಕುಮಾರ ಬಸಾಪುರ ಪಾಲ್ಗೊಂಡಿದ್ದರು.