ಪ್ರೀತಿಸಬೇಡ ಎಂದು ಅಜ್ಜ ಬುದ್ದಿವಾದ ಹೇಳಿದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕಿ

ಕೋಲಾರ: ಜಿಲ್ಲೆಯ ಕೆಜಿಎಫ್​ ತಾಲೂಕಿನ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯೊಬ್ಬಳಿಗೆ ಪ್ರೀತಿಸಬೇಡ, ಓದಿನ ಕಡೆ ಗಮನಕೊಡು ಎಂದು ಅಜ್ಜ ಬುದ್ದಿವಾದ ಹೇಳಿದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರಥಮ ಪಿಯುಸಿ ಓದುತ್ತಿದ್ದ 17 ವರ್ಷದ ಬಾಲಕಿ ವಿನೋದ್​ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಮನೆಯಲ್ಲಿ ಗೊತ್ತಾಗಿತ್ತು. ಬಾಲಕಿಯ ತಾತಾ ನಾರಾಯಣಪ್ಪ ಪ್ರೀತಿಸದಂತೆ ಬುದ್ದಿಮಾತು ಮೊಮ್ಮಗಳಿಗೆ ಹೇಳಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಆಕೆಯ ತಾಯಿ ಪ್ರಿಯಕರ ವಿನೋದ್ ಎಂಬಾತನ ವಿರುದ್ಧ ಪೊಲೀಸ್​ ಠಾಣೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯುವಕನ ಮೇಲೆ ಜಾತಿ ನಿಂದನೆ, ಫೋಕ್ಸೊ, ಭಾರತೀಯ ದಂಡ ಸಂಹಿತೆಯ 306ರ ಅಡಿ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)