ನಕ್ಸಲ್​ ನಾಯಕಿ, ಕ್ಯಾನ್ಸರ್​ ಪೀಡಿತೆ ನರ್ಮದಾ, ಆಕೆಯ ಪತಿಯನ್ನು ಅರೆಸ್ಟ್​ ಮಾಡಿದ ಗಡ್​ಚಿರೋಲಿ ಪೊಲೀಸರು

ಗಡ್​ಚಿರೋಲಿ: ತೆಲಂಗಾಣದ ಗಡ್​ಚಿರೋಲಿ ಪ್ರಮುಖ ನಕ್ಸಲ್​ ಪೀಡಿತ ಪ್ರದೇಶ. ಇತ್ತೀಚೆಗೆ ಅಲ್ಲಿ ನಕ್ಸಲರು ಭೀಕರವಾಗಿ ದಾಳಿ ನಡೆಸಿ 15 ಕ್ಕೂ ಹೆಚ್ಚು ಮಂದಿ ಪೊಲೀಸ್​ ಸಿಬ್ಬಂದಿಯನ್ನು ಹತ್ಯೆಗೈದಿದ್ದರು. ಈಗ ಅಲ್ಲಿನ ಪ್ರಮುಖ ಹಿರಿಯ ನಕ್ಸಲ್​ ನಾಯಕಿ ನರ್ಮದಾ ಹಾಗೂ ಆಕೆಯ ಪತಿ ಕಿರಣ್​ ಅವರನ್ನು ಗಡ್​ಚಿರೋಲಿ ಪೊಲೀಸರು ಬಂಧಿಸಿದ್ದಾರೆ.

ಬಂಧನದ ಬಗ್ಗೆ ಪೊಲೀಸ್​ ಅಧಿಕಾರಿ ಶೈಲೇಶ್​ ಬಾಲ್ಕಾವಾಡೆ ಅಧಿಕೃತ ಮಾಹಿತಿ ನೀಡಿದ್ದು, ಗಡ್​ಚಿರೋಲಿಗೆ ಹೊಂದಿಕೊಂಡಂತಿರುವ ತೆಲಂಗಾಣದ ಅದಿಲ್​ಬಾದ್​ ಜಿಲ್ಲೆಯ ಸಿರೋಂಚಾದಲ್ಲಿ ಇವರಿಬ್ಬರನ್ನೂ ಬಂಧಿಸಲಾಗಿದೆ. ಹೈದರಾಬಾದ್​ನಿಂದ ಮರಳಿ ಬರುತ್ತಿದ್ದ ಅವರಿಬ್ಬರನ್ನೂ ಸಿರೋಂಚಾದಲ್ಲಿ ತಡೆಹಿಡಿಯಲಾಗಿದೆ. ಮಂಗಳವಾರ ರಾತ್ರಿಯಿಂದಲೂ ಅವರು ಬಂಧನದಲ್ಲೇ ಇದ್ದಾರೆ ಎಂದು ತಿಳಿಸಿದ್ದಾರೆ.

ನರ್ಮದಾ ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದು ಕಿಮೋಥೆರಪಿ ಚಿಕಿತ್ಸೆಗಾಗಿ ಅವರಿಬ್ಬರೂ ಹೈದರಾಬಾದ್​ಗೆ ತೆರಳಿದ್ದರು. ಆರು ಏಳು ತಿಂಗಳಿಂದ ನರ್ಮದಾ ಕಾರ್ಯಚಟುವಟಿಕೆ ಮೇಲೆ ಕಣ್ಣಿಟ್ಟಿದ್ದೆವು. ಈಕೆ ವಿರುದ್ಧ ಹತ್ಯೆ, ಅಪಹರಣ, ಎನ್​ಕೌಂಟರ್​, ಬಾಂಬ್​, ಗುಂಡಿನ ದಾಳಿಗೆ ಸಂಬಂಧಪಟ್ಟಂತೆ ಒಟ್ಟು 65 ಪ್ರಕರಣಗಳು ದಾಖಲಾಗಿವೆ. ತೆಲಂಗಾಣ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಅವರಿಬ್ಬರನ್ನೂ ಬಂಧಿಸಿದ್ದಾಗಿ ಹೇಳಿದ್ದಾರೆ.

ನಾವು ಅವರನ್ನು ತಡೆಯುತ್ತಿದ್ದಂತೆ ನರ್ಮದಾ ಭಯಗೊಂಡರು. ಹಾಗೇ ಆಶ್ಚರ್ಯವನ್ನೂ ವ್ಯಕ್ತಪಡಿಸಿದರು. ಅಲ್ಲದೆ ಅವರಿಗೆ ಸಹಾಯ ಮಾಡುತ್ತಿದ್ದವರ ಬಗ್ಗೆ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಕೂಡ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *