More

    ಆಸ್ತಿವಿವಾದ: ಮೂರು ದಿನ ಕಳೆದರೂ ಇನ್ನೂ ನಡೆಯದ ಮಹಿಳೆಯ ಶವ ಸಂಸ್ಕಾರ

    ಚಾಮರಾಜನಗರ: ಮಹಿಳೆಯೊಬ್ಬರು ಮೃತಪಟ್ಟು ಮೂರು ದಿನ ಕಳೆದರೂ ಇನ್ನು ಶವ ಸಂಸ್ಕಾರ ನಡೆದಿಲ್ಲ.

    ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿ ಗ್ರಾಮದಲ್ಲಿ ಹಲ್ಲೆಯಿಂದ ಮೃತಪಟ್ಟ ಶಶಿಕಲಾ ಎಂಬುವವರ ಶವವನ್ನು ಪತಿ ಮನೆ ಮುಂದೆ ಇಟ್ಟು ಮಕ್ಕಳಿಗೆ ಆಸ್ತಿ ಬರೆದುಕೊಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆರೋಪಿ ಸುರೇಶ್​ ಕುಟುಂಬದವರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶವ ಸಂಸ್ಕಾರ ವಿಳಂಬವಾಗಿದೆ.

    ಸುರೇಶ್​ ತನ್ನ ಪತ್ನಿ ಶಶಿಕಲಾಳನ್ನು ಹಲ್ಲೆ ಮಾಡಿದ್ದ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಆಕೆ ಮೃತಪಟ್ಟಿದ್ದರು. ಶಶಿಕಲಾ ಅವರ ಪಾಲಕರು ಗಂಡು ಮಗುವಿಗೆ ಸುರೇಶನ ಆಸ್ತಿ ಬರೆದುಕೊಡಬೇಕು. ಅಲ್ಲಿವರೆಗೆ ಶವ ಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

    ಕೊಲೆ ಆರೋಪದ ಮೇಲೆ ಪೊಲೀಸರು ಸುರೇಶ್​ನನ್ನು ಬಂಧಿಸಿದ್ದಾರೆ. ಆದರೆ ಸುರೇಶ್​ ಕುಟುಂಬದವರು ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts