ಗುವಾಹಟಿ: ಕಳೆದೆರಡು ವಾರದಿಂದ ನಿರಂತರ ನೀರಿನಲ್ಲಿ ಮುಳುಗಿರುವ ಅಸ್ಸಾಂನಲ್ಲಿ ಪ್ರವಾಹ ಮತ್ತಷ್ಟು ಭೀಕರತೆ ಪಡೆದುಕೊಂಡಿದೆ.
34 ಜಿಲ್ಲೆಗಳು ಸಂಪೂರ್ಣ ಜಲಾವೃತಗೊಂಡಿದ್ದು, 41 ಲಕ್ಷ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಈ ನಡುವೆ ಪರಿಸ್ಥಿತಿ ಕುರಿತು ಗೃಹ ಸಚಿವ ಅಮಿತ್ ಶಾ ದೂರವಾಣಿ ಕರೆ ಮೂಲಕ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾಸ್ ಅವರಿಂದ ಮಾಹಿತಿ ಪಡೆದಿದ್ದಾರೆ.
ಇದರೊಂದಿಗೆ ಮೇಘಾಲಯ ಮುಖ್ಯಮಂತ್ರಿ ಕೊನಾರ್ಡ್ ಸಂಗ್ಮಾ ಅವರೊಂದಿಗೂ ಚರ್ಚಿಸಿದ್ದು, ಕೇಂದ್ರದಿಂದ ಇನ್ನಷ್ಟು ನೆರವು ನೀಡುವ ಭರವಸೆ ನೀಡಿದ್ದಾರೆ.
ಮೇಘಾಲಯದಲ್ಲಿ ಸಿಲುಕಿದ್ದ 12 ಲಕ್ಷ ಜನರನ್ನು ಸಹ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದ್ದು, ಸದ್ಯಕ್ಕೆ ಪ್ರವಾಹ ಮತ್ತಷ್ಟು ಭೀತಿ ಎದುರಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಏಜೆನ್ಸೀಸ್)
VIDEO: ಯೋಗ ದಿನಾಚರಣೆಯಲ್ಲಿ ಭಾಗವಹಿಸಿದವರ ಮೇಲೆ ಹಲ್ಲೆ: ತನಿಖೆಗೆ ಮಾಲ್ಡೀವ್ಸ್ ಸರ್ಕಾರ ಆದೇಶ
ವಿಶ್ವ ಯೋಗ ದಿನ: ವಿವಿಧ ಆಸನ ಪ್ರದರ್ಶಿಸಿದ ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ ಅಭಿಮಾನಿಗಳಿಂದ ಮೆಚ್ಚುಗೆ