More

  16, 17ರಂದು ‘ಗೋರ್‌ಮಾಟಿ’ ನಾಟಕದ ಮೊದಲ ಪ್ರಯೋಗ ಪ್ರದರ್ಶನ

  ಮೈಸೂರು: ಒಂದು ವಾರ ಕಾಲ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸವಿಯುಂಡ ಸಾಂಸ್ಕೃತಿಕ ನಗರಿಯ ರಂಗಾಸಕ್ತರಿಗೆ ಇನ್ನೊಂದು ಸಿಹಿ ಸುದ್ದಿ…!
  ರಂಗಕರ್ಮಿ ಸಿ.ಬಸವಲಿಂಗಯ್ಯ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ನಾಟಕದ ನಂತರ ಪ್ರಯೋಗಿಸುತ್ತಿರುವ ಮಹತ್ವದ ಬಂಜಾರ ಸಮುದಾಯದ ಅಸ್ಮಿತೆಯ ಕಾವ್ಯಕಥನ ‘ಗೋರ್‌ಮಾಟಿ’ ನಾಟಕವನ್ನು ಪ್ರದರ್ಶನಕ್ಕೆ ಅಣಿಗೊಳಿಸಿದ್ದು, ಮಾರ್ಚ್ 16 ಮತ್ತು 17 ರಂದು ಮೊದಲ ಪ್ರಯೋಗ ಪ್ರದರ್ಶನ ನಡೆಯಲಿದೆ.

  ನಂತರ ವಾರಾಂತ್ಯ ರಂಗ ಪ್ರದರ್ಶನವಾಗಿ ಮಾರ್ಚ್ 22, 23, 24, ಹಾಗೂ 29, 30, 31ರಂದು ಪ್ರದರ್ಶನಗೊಳ್ಳುತ್ತಿದೆ. ನಂತರ ಬೇರೆ ಬೇರೆ ಜಿಲ್ಲೆ, ರಾಜ್ಯ, ತಾಂಡಾಗಳಲ್ಲೂ ಪ್ರದರ್ಶನ ಆಯೋಜಿಸಲಾಗುವುದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ತಿಳಿಸಿದರು.

  ಬಜೆಟ್‌ನಲ್ಲಿ ಬಂಜಾರ ಬುಟಕಟ್ಟು ಉತ್ಸವ ಘೋಷಿಸಿದ್ದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸೂಚನೆ ಮೇರೆಗೆ ಬಂಜಾರ ಸಮುದಾಯದ ಜೀವನ ಕತೆಯನ್ನು ರಂಗರೂಪಕ್ಕಿಳಿಸಲಾಗಿದೆ. ಗೋರ್‌ಮಾಟಿ ಎಂದರೆ ನಮ್ಮ ಜನ ಎಂದರ್ಥ. ಇದು ಜಾತಿ ಸೂಚಕವಲ್ಲ. ಬದಲಿಗೆ ಸಂಸ್ಕೃತಿ ಸೂಚಕ. ನಮ್ಮ ನೆಲಮೂಲದ ಸಂಸ್ಕೃತಿ ಬಗ್ಗೆ ತಿಳಿಸುವ ಉದ್ದೇಶದಿಂದ ಈ ನಾಟಕ ನಿರ್ದೇಶಿಸಲಾಗಿದೆ. ಬಂಜಾರ ಜನಾಂಗದ ಸಂತೋಷ, ಸುಖ-ದುಃಖಗಳು ನಾಟಕದಲ್ಲಿವೆ. ಚರಿತ್ರೆಯಲ್ಲಿ ಇವರ ಬದುಕು ಹೇಗೆ ದುರಂತಮಯವಾಗಿದೆ ಎಂಬುದನ್ನು ನಾಟಕ ರೂಪದಲ್ಲಿ ಕಟ್ಟಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.

  ಬಂಜಾರರು ವ್ಯಾಪಾರಿಗಳಾಗಿದ್ದು, ಒಂದು ಕಡೆ ನೆಲೆಸುವವರಲ್ಲ. ಪಶು ಸಂಗೋಪನಾ ಪಾಲಕರಾಗಿ, ಕೃಷಿ ಕಾರ್ಮಿಕರಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ಗುಪ್ತಚರರಾಗಿ, ಶ್ರಮಜೀವಿಗಳಾಗಿ ತಮ್ಮದೇ ವಿಶಿಷ್ಟ ಸಾಂಸ್ಕೃತಿಕ ಆಚರಣೆ, ಸಂಪ್ರದಾಯ, ಉಡುಗೆ ತೊಡುಗೆಯಿಂದ ಜಗತ್ತಿನ ಗಮನ ಸೆಳೆಯುವ ಬಂಜಾರ ಸಮುದಾಯ ಮುಖ್ಯವಾಹಿನಿಗೆ ಬರಲು ಇನ್ನೂ ಹೆಣಗಾಡುತ್ತಿದೆ. ಅವರ ದುಃಖದುಮ್ಮಾನಗಳಿಗೆ ಕಲೆ, ಸಂಸ್ಕೃತಿ ಅಭಿವ್ಯಕ್ತಿಯ ಪ್ರಕ್ರಿಯೆ ಈ ರಂಗಪ್ರಯೋಗ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts