Eclipse : ಭಾರತದಲ್ಲಿ ಸೂರ್ಯಗ್ರಹಣ, ಚಂದ್ರಗ್ರಹಣ ಕೇವಲ ಬಾಹ್ಯಾಕಾಶದಲ್ಲಿ ಘಟಿಸುವ ವಿಸ್ಮಯಗಳಲ್ಲ. ಅದರ ಹಿಂದೆ ನಾನಾ ಲೆಕ್ಕಾಚಾರಗಳಿವೆ. ರಾಶಿ, ಅದೃಷ್ಠ, ಸೂತಕ, ವೃತ ಸೇರಿದಂತೆ ಒಂದಷ್ಟು ವಿಚಾರಗಳು ಅಡಗಿಕೊಂಡಿದೆ.
2025ರ ಮೊದಲ ಚಂದ್ರಗ್ರಹಣ ಇತ್ತೀಚೆಗೆ ಘಟಿಸಿದೆ. ಹೋಳಿ ಹಬ್ಬದ ದಿನವೇ ಚಂದ್ರಗ್ರಹಣ ನಡೆದಿತ್ತು. ಇದೀಗ ಇದೇ ತಿಂಗಳಲ್ಲಿ ಸೂರ್ಯ ಗ್ರಹಣವೂ ನಡೆಯುತ್ತಿದೆ. ಇದು ಈ ವರ್ಷದ ಮೊದಲ ಸೂರ್ಯಗ್ರಹಣ. ಚಂದ್ರನ ಭೂಮಿ ಹಾಗೂ ಸೂರ್ಯನ ನಡುವೆ ಬರುವ ಕಾರಣ ಸೂರ್ಯನ ಬೆಳಕು ಭೂಮಿಗೆ ನೆರಳಾಗಿ ಬೀಳಲಿದೆ.
ಇದೇ ಮಾರ್ಚ್ 29ರಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಈ ಗ್ರಹಣವು ಏಷ್ಯಾ, ಉತ್ತರ ಅಮೆರಿಕಾ, ಯುರೋಪ್, ಆಫ್ರಿಕಾ ಮತ್ತು ಆರ್ಕ್ಟಿಕ್‌ನ ಕೆಲವು ಭಾಗಗಳು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಗೋಚರಿಸುತ್ತದೆ. ಅಂದರೆ ಚಂದ್ರನು ಸೂರ್ಯನ ಒಂದು ಭಾಗವನ್ನು ಮಾತ್ರ ಮರೆಮಾಡುತ್ತಾನೆ. ಈ ಗ್ರಹಣವು ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದ್ದು, ಜನ ಸಾಮಾನ್ಯರು ನಿರ್ದಿಷ್ಟ ಮುನ್ನೆಚ್ಚರಿಕೆಗಳನ್ನು ಕಾಯ್ದುಕೊಳ್ಳಬೇಕಾಗಿದೆ.
ಗ್ರಹಣದ ಸಮಯದಲ್ಲಿ ಕಣ್ಣುಗಳನ್ನು ರಕ್ಷಿಸುವುದು
ಸೂರ್ಯಗ್ರಹಣದ ಸಮಯದಲ್ಲಿ ನಮ್ಮ ಕಣ್ಣುಗಳನ್ನು ಅತ್ಯಂತ ಸುರಕ್ಷತೆ ದೃಷ್ಠಿಯಿಂದ ಕಾಪಾಡಿಕೊಳ್ಳಬೇಕಾಗಿರುತ್ತದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮ ಕಣ್ಣುಗಳು ಸೂರ್ಯನತ್ತ ನೋಡದಂತೆ ಎಚ್ಚರದಿಂದಿರಬೇಕು. ಈ ಮುನ್ನೆಚ್ಚರಿಕೆಗಳನ್ನು ನಿರ್ಲಕ್ಷಿಸುವುದರಿಂದ ಕಣ್ಣಿನ ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಸುರಕ್ಷಿತ ವೀಕ್ಷಣಾ ವಿಧಾನಗಳನ್ನು ಅನುಸರಿಸುವುದು ಅತ್ಯಗತ್ಯ. ಸೂರ್ಯನನ್ನು ದಿಟ್ಟಿಸುವುದರಿಂದ ಸೂರ್ಯನ ಕಿರಣಗಳ ತೀವ್ರತೆಯಿಂದಾಗಿ ಕಣ್ಣಿಗೆ ಹಾನಿಯಾಗಿ ಕುರುಡುತನ ಉಂಟಾಗುವ ಸಾಧ್ಯತೆ ಇರುತ್ತದೆ. ಗ್ರಹಣ ವೀಕ್ಷಣೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸೌರ ವೀಕ್ಷಣಾ ಕನ್ನಡಕಗಳು, ಸೂರ್ಯನ ನೆರಳನ್ನು ವೀಕ್ಷಿಸಲು ಸುರಕ್ಷಿತವಾದ ವಸ್ತುಗಳಾಗಿವೆ. ಸೂರ್ಯ ಗ್ರಹಣವನ್ನು ವೀಕ್ಷಿಸಲು ಸರಿಯಾದ ಸೌರ ಫಿಲ್ಟರ್‌ಗಳನ್ನು ಹೊಂದಿರುವ ದೂರದರ್ಶಕಗಳು ಅಥವಾ ಕ್ಯಾಮೆರಾಗಳನ್ನ ಉಪಯೋಗಿಸುವುದು ಸೂಕ್ತ.
ಆಹಾರ ಪದ್ಧತಿ ಮತ್ತು ಆಧ್ಯಾತ್ಮಿಕ ಅಭ್ಯಾಸಗಳು
ಅನೇಕ ಸಂಸ್ಕೃತಿಗಳು ಸೂರ್ಯಗ್ರಹಣಗಳನ್ನು ಆಧ್ಯಾತ್ಮಿಕ ಶಕ್ತಿಯೊಂದಿಗೆ ಸಂಯೋಜಿಸುತ್ತವೆ. ಗ್ರಹಣದ ಸಂದರ್ಭದಲ್ಲಿ ಕೆಲವು ಆಹಾರ ಪದ್ಧತಿಗಳನ್ನು ಶಿಫಾರಸು ಮಾಡಲಾಗುತ್ತದೆ. ತಾಜಾ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಬೀಜಗಳು, ಮತ್ತು ಡೈರಿ ಉತ್ಪನ್ನಗಳಂತಹ ಸಾತ್ವಿಕ ಆಹಾರಗಳನ್ನು ಸೇವಿಸಿವುದು ಉತ್ತಮ. ಇವುಗಳನ್ನು ಶುದ್ಧವಾಗಿರುವ ಆಹಾರವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಬೇಯಿಸಿದ ಆಹಾರ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಮಾಂಸಾಹಾರಿ ವಸ್ತುಗಳನ್ನು ತಪ್ಪಿಸಿ, ಏಕೆಂದರೆ ಕೆಲವರು ಈ ಆಹಾರಗಳು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತವೆ ಎಂದು ನಂಬುತ್ತಾರೆ. ಕೆಲವು ಸಾಂಪ್ರದಾಯಿಕ ನಂಬಿಕೆಗಳು ಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸುವುದು ಅಷ್ಟು ಸರಿಯಲ್ಲೆ ಎಂದು ಹೇಳುತ್ತವೆ.
ಚೂಪಾದ ವಸ್ತುಗಳನ್ನು ತಪ್ಪಿಸುವುದು
ಸೂರ್ಯಗ್ರಹಣದ ಸಮಯದಲ್ಲಿ ಚಾಕು ಮತ್ತು ಕತ್ತರಿಗಳಂತಹ ಚೂಪಾದ ವಸ್ತುಗಳನ್ನು ಬಳಸಬಾರದು ಎನ್ನಲಾಗುತ್ತದೆ. ಏಕೆಂದರೆ ಅವು ನಕಾರಾತ್ಮಕ ಶಕ್ತಿಗಳಿಗೆ ಒಡ್ಡಿಕೊಳ್ಳುತ್ತವೆ ಎಂದು ನಂಬಲಾಗಿದೆ. ವಿಶೇಷವಾಗಿ ಗರ್ಭಿಣಿಯರು ಮನೆಯೊಳಗೆ ಇದ್ದು ಆಧ್ಯಾತ್ಮಿಕ ರಕ್ಷಣೆಗಾಗಿ ಪ್ರಾರ್ಥನೆ ಅಥವಾ ಮಂತ್ರಗಳನ್ನು ಪಠಿಸಲು ಸೂಚಿಸಲಾಗುತ್ತದೆ. ಈ ಪದ್ಧತಿಗಳು ವೈಜ್ಞಾನಿಕ ಪುರಾವೆಗಳಿಗಿಂತ ಸಾಂಪ್ರದಾಯಿಕ ನಂಬಿಕೆಗಳನ್ನು ಆಧರಿಸಿದ್ದರೂ, ಅನೇಕ ಸಂಸ್ಕೃತಿಗಳಲ್ಲಿ ಅವುಗಳನ್ನು ಇನ್ನೂ ಅನುಸರಿಸಲಾಗುತ್ತಿದೆ.
ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ನಂಬಿಕೆಗಳು
ಅನೇಕ ಸಂಪ್ರದಾಯಗಳು ಸೂರ್ಯಗ್ರಹಣಗಳ ಸುತ್ತ ಸುತ್ತುತ್ತವೆಯಾದರೂ, ವೈಜ್ಞಾನಿಕ ಸಂಗತಿಗಳು ಮತ್ತು ಸಾಂಸ್ಕೃತಿಕ ನಂಬಿಕೆಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಅತ್ಯಗತ್ಯ. ವೈಜ್ಞಾನಿಕವಾಗಿ, ಸೂರ್ಯಗ್ರಹಣವು ನೈಸರ್ಗಿಕ ವಿದ್ಯಮಾನವಾಗಿದ್ದು, ಮಾನವನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದಾಗ್ಯೂ ಅದಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ಮಹತ್ವವು ತಲೆಮಾರುಗಳಿಂದ ವಿವಿಧ ಆಚರಣೆಗಳು ಮತ್ತು ಮುನ್ನೆಚ್ಚರಿಕೆಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ.(ಏಜೆನ್ಸೀಸ್)
ಬಾತ್ರೂಮ್ನಲ್ಲಿ ಟೂತ್ ಬ್ರಷ್ ಇಡುವುದು ಅಪಾಯಕಾರಿಯಂತೆ!; ವೈಜ್ಞಾನಿಕ ಕಾರಣ ಇಲ್ಲಿದೆ.. | Toothbrush