ಸವಣೂರ: ಪಟ್ಟಣದ ಕೋರಿಪೇಟೆಯಲ್ಲಿರುವ ಶಿರಹಟ್ಟಿ ಶ್ರೀ ಜಗದ್ಗುರು ಫಕೀರೇಶ್ವರ ಶಾಖಾ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಬೆಳಗ್ಗೆ ವಿವಿಧ ಧಾರ್ವಿುಕ ಕೈಂಕರ್ಯ ಹಾಗೂ ಸಂಜೆ ತಾಲೂಕಿನ ಹೂವಿನಶಿಗ್ಲಿ ವಿರಕ್ತಮಠದ ಶ್ರೀಚನ್ನವೀರ ಸ್ವಾಮೀಜಿ ಅವರಿಂದ ಕಡುಬಿನ ಕಾಳಗ ಜರುಗಿತು.

ಬೆಳಗ್ಗೆ ಶ್ರೀ ಜಗದ್ಗುರು ಫಕೀರೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಪೂಜೆ ಹಾಗೂ ವಿವಿಧ ಧಾರ್ವಿುಕ ಕೈಂಕರ್ಯ ಕೈಗೊಳ್ಳಲಾಯಿತು.
ಮಧ್ಯಾಹ್ನ ಮಹಿಳಾ ಡೊಳ್ಳು ಮೇಳ ತಂಡ, ಕುದರೆ ಕುಣಿತ, ಆನೆ ಅಂಬಾರಿ ಪಲ್ಲಕ್ಕಿ, ಗೊಂಬೆ ಕುಣಿತ ಸೇರಿದಂತೆ ವಿವಿಧ ವಾದ್ಯ ವೈಭವಗಳೊಂದಿಗೆ ಉತ್ಸವ ಮೂರ್ತಿ ಹಾಗೂ ತಾಲೂಕಿನ ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮೀಜಿ ಅವರ ಮೆರವಣಿಗೆ ಶ್ರೀಮಠದಿಂದ ಆರಂಭಗೊಂಡು ಕೋರಿಪೇಟೆ, ಬುಧವಾರ ಪೇಟೆ, ಶಿಂಪಿಗಲ್ಲಿ, ಉಪ್ಪಾರ ಓಣಿ, ಶುಕ್ರವಾರ ಪೇಟೆ, ಚಿತ್ರಗಾರ ಓಣಿ, ಮುಖ್ಯ ಮಾರುಕಟ್ಟೆ ಸೇರಿದಂತೆ ರಾಜಬೀದಿಯಲ್ಲಿ ಶ್ರೀಮಠದಲ್ಲಿ ಸಂಪನ್ನಗೊಂಡಿತು.
ಸಂಜೆ ತಾಲೂಕಿನ ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮೀಜಿ ಅವರಿಂದ ಕಡುಬಿನ ಕಾಳಗ (ಬೆಲ್ಲ ತೂರುವುದು) ಜರುಗಿತು. ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತರು ಪಾಲ್ಗೊಂಡಿದ್ದರು.