ಹುನಗುಂದ: ಪಟ್ಟಣದ ಸಂಗಮ ರಸ್ತೆಯ ಸ್ವಂತ ಜಮೀನಿನಲ್ಲಿ ಸೋಮವಾರ ಸಂಜೆ ರೈತ ಗಿಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಟ್ಟಣದ ಮೇಗಲಪೇಟೆಯ ರೈತ ಈರಪ್ಪ ಭರಮಪ್ಪ ಹೊಸೂರ (62) ಸಾಲಬಾಧೆ ತಾಳದೆ ನೇಣಿಗೆ ಶರಣಾಗಿದ್ದಾರೆ.
ರೈತ ಈರಪ್ಪ ಹುನಗುಂದ ಪಿಕೆಪಿಎಸ್‌ನಲ್ಲಿ 50 ಸಾವಿರ ರೂ., ವಿಜಯ ಮಹಾಂತೇಶ ಬ್ಯಾಂಕ್‌ನಲ್ಲಿ 10 ಲಕ್ಷ ರೂ., ಕೈಗಡ 10 ಲಕ್ಷ ರೂ. ಸೇರಿ ಒಟ್ಟು 22 ಲಕ್ಷ ರೂ. ಸಾಲ ಮಾಡಿದ್ದರು. ಈ ವರ್ಷ ಸಮರ್ಪಕ ಮಳೆ ಆಗದೆ ಬಿತ್ತಿದ ಬೆಳೆ ಸಂಪೂರ್ಣ ನಷ್ಟವಾಗಿದೆ.
ಸ್ಥಳಕ್ಕೆ ಹುನಗುಂದ ಪಿಎಸ್‌ಐ ಚನ್ನಯ್ಯ ದೇವೂರ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.