More

    ಫ್ಯಾನ್ಸ್​ಗೆ ಸಂಕ್ರಾಂತಿ ಸಂಭ್ರಮ

    ಸ್ಯಾಂಡಲ್​ವುಡ್​ನ ಸ್ಟಾರ್ ನಟರ ಅಭಿಮಾನಿಗಳಿಗೆ ಈ ಸಂಕ್ರಾಂತಿಯಂದು ಡಬಲ್ ಸಂಭ್ರಮ. ಬಹುನಿರೀಕ್ಷಿತ ಚಿತ್ರಗಳಾದ ‘ಕೋಟಿಗೊಬ್ಬ 3’, ‘ಭಜರಂಗಿ 2’, ‘ರವಿ ಬೋಪಣ್ಣ’ ಸಿನಿಮಾಗಳ ಮೋಷನ್ ಪೋಸ್ಟರ್, ಪೋಸ್ಟರ್, ಟೀಸರ್​ಗಳನ್ನು ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಮಂಗಳವಾರ ಬಿಡುಗಡೆ ಮಾಡಿರುವುದೇ ಸ್ಟಾರ್​ನಟರ ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಲು ಕಾರಣ.

    ಕಿಚ್ಚ-ಕ್ರೇಜಿ

    ಕಿಚ್ಚ ಸುದೀಪ್ ಅಭಿಮಾನಿಗಳ ಸಂಭ್ರಮ ತುಸು ಹೆಚ್ಚೇ ಎನ್ನಬಹುದು. ಏಕೆಂದರೆ ಸುದೀಪ್ ಅಭಿನಯದ 2 ಚಿತ್ರತಂಡಗಳು ಅಭಿಮಾನಿಗಳಿಗೆ ಸಂಕ್ರಾಂತಿ ಗಿಫ್ಟ್ ಆಗಿ ಮೋಷನ್ ಪೋಸ್ಟರ್ ಮತ್ತು ಟೀಸರ್ ಬಿಟ್ಟಿವೆ. ‘ರಾಮ್ಾಬು ಪ್ರೊಡಕ್ಷನ್ಸ್’ ಮೂಲಕ ಸೂರಪ್ಪ ಬಾಬು ನಿರ್ವಣ, ಶಿವಕಾರ್ತಿಕ್ ನಿರ್ದೇಶನದಲ್ಲಿ ಸುದೀಪ್ ಅಭಿನಯಿಸುತ್ತಿರುವ ‘ಕೋಟಿಗೊಬ್ಬ 3’ ಚಿತ್ರದ ಮೋಷನ್ ಪೋಸ್ಟರ್ ಮಂಗಳವಾರ ಬಿಡುಗಡೆ ಆಗಿದೆ. ಮತ್ತೊಂದೆಡೆ ರವಿಚಂದ್ರನ್ ಅಭಿನಯದಲ್ಲಿ ಮೂಡಿ ಬರುತ್ತಿರುವ ‘ರವಿ ಬೋಪಣ್ಣ’ ಚಿತ್ರದ ಟೀಸರ್ ಕೂಡ ಮಂಗಳವಾರವೇ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಸುದೀಪ್ ಒಂದು ಪ್ರಮುಖಪಾತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಈ ಚಿತ್ರಕ್ಕೆ ರವಿಚಂದ್ರನ್ ಅವರೇ ನಿರ್ದೇಶಕರಾಗಿರುವುದರಿಂದ ಸಿನಿಮಾ ಕುರಿತ ಕುತೂಹಲ ಹಾಗೂ ನಿರೀಕ್ಷೆ ಅಧಿಕವಿದೆ. ರವಿಚಂದ್ರನ್ ರಿಟೈರ್ಡ್ ಸೈಬರ್​ಕ್ರೖೆಮ್ ಆಫೀಸರ್ ಆಗಿ ಕಾಣಿಸಿರುವ ಈ ಸಿನಿಮಾದಲ್ಲಿ ರಚಿತಾರಾಮ್ ಕಾವ್ಯಾ ಶೆಟ್ಟಿ ನಾಯಕಿಯರಾಗಿದ್ದು, ಸಂಚಿತಾ ಪಡುಕೋಣೆ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    ಇನ್ನು ನೀನಾಸಂ ಸತೀಶ್, ವಸಿಷ್ಠ ಸಿಂಹ, ಶ್ರದ್ಧಾ ಶ್ರೀನಾಥ್, ರಕ್ಷಾ ಸೋಮಶೇಖರ್ ಅಭಿನಯದ ‘ಗೋದ್ರಾ’ ಸಿನಿಮಾದ ಮೋಷನ್ ಪೋಸ್ಟರ್ ಸೋಮವಾರ ಬಿಡುಗಡೆ ಆಗಿದ್ದು, ಅದ್ಭುತವಾದ ಹಿನ್ನೆಲೆ ಸಂಗೀತದಲ್ಲಿ ಮೂಡಿಬಂದಿರುವ ಇದು ಚಿತ್ರದ ಕುರಿತ ಕುತೂಹಲ ಹೆಚ್ಚಿಸಿದೆ.

    ಶಿವಣ್ಣ ಭರ್ಜರಿ ಲುಕ್

    ‘ಜಯಣ್ಣ ಫಿಲಮ್ಸ್​ ಬ್ಯಾನರ್​ನಲ್ಲಿ ಜಯಣ್ಣ-ಭೋಗೇಂದ್ರ ನಿರ್ಮಾಣ ಮತ್ತು ಎ. ಹರ್ಷ ನಿರ್ದೇಶನದಲ್ಲಿ ‘ಸೆಂಚುರಿ ಸ್ಟಾರ್’ ಶಿವರಾಜ್​ಕುಮಾರ್ ಅಭಿನಯಿಸಿರುವ ಬಹುನಿರೀಕ್ಷಿತ ‘ಭಜರಂಗಿ 2’ ಚಿತ್ರದ ಯಾವುದೇ ಪೋಸ್ಟರ್ ಅಥವಾ ಲುಕ್ ಅನ್ನು ಚಿತ್ರತಂಡ ಇದುವರೆಗೂ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಚಿತ್ರದ ದೃಶ್ಯವೊಂದನ್ನೇ ಇರಿಸಿಕೊಂಡು ರೂಪಿಸಿರುವ ಪೋಸ್ಟರ್​ವೊಂದನ್ನು ನಿರ್ದೇಶಕ ಎ. ಹರ್ಷ ಹೊರಬಿಟ್ಟಿದ್ದಾರೆ. ಅದರಲ್ಲೂ ಈಗ ಬಿಡುಗಡೆ ಮಾಡಲಾಗಿರುವ ಚಿತ್ರದ ಪ್ರಪ್ರಥಮ ಪೋಸ್ಟರ್​ನಲ್ಲಿ ಶಿವರಾಜ್​ಕುಮಾರ್ ಅವರ ಪೂರ್ಣ ಲುಕ್ ಹೊರಹಾಕದಿದ್ದರೂ ಅವರ ಕಣ್ಣುಗಳಷ್ಟೇ ಪ್ರಧಾನವಾಗಿ ಕಾಣುತ್ತಿವೆ. ಜತೆಗೆ ಚಾಣಕ್ಯನಂಥ ಗೆಟಪ್​ನ ವ್ಯಕ್ತಿಯೊಬ್ಬ ಆ ಕಂಗಳನ್ನೇ ದಿಟ್ಟಿಸುವಂತೆ ನಿಂತಿರುವುದು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್​ಗೆ ಜೋಡಿಯಾಗಿ ಭಾವನಾ ನಟಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts