68ನೇ ವಯಸ್ಸಿನಲ್ಲಿ 7ನೇ ತರಗತಿ ಪರೀಕ್ಷೆ ಬರೆದ ಖ್ಯಾತ ನಟ! ಕಾರಣ ತಿಳಿದ್ರೆ ಮೆಚ್ಚಿಕೊಳ್ತೀರಿ

Indrans

ತಿರುವನಂತಪುರಂ: 2018 ಶೀರ್ಷಿಕೆ ಅಡಿಯಲ್ಲಿ 2023ರಲ್ಲಿ ಬಿಡುಗಡೆಯಾದ ಮಲಯಾಳಂ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಭಾರಿ ಸದ್ದು ಮಾಡಿತು. ಕೇರಳ ಪ್ರವಾಹ ಆಧರಿಸಿದ ತೆಗೆದ ಸಿನಿಮಾ ಇದು. ನಟ ಟೊವಿನೋ ಥಾಮಸ್​, ಕುಂಚಿಕೋ ಬೋಬನ್, ಆಸಿಫ್ ಅಲಿ, ಸುನಿಲ್ ಕುಮಾರ್, ವಿನೀತ್ ಶ್ರೀನಿವಾಸನ್, ಲಾಲ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದರು.

ಇದರಲ್ಲಿ ನಟ ಇಂದ್ರನ್ಸ್ ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ಸಿನಿಮಾದಲ್ಲಿ ಪ್ರವಾಹದಲ್ಲಿ ಸಿಲುಕಿದ ಕುರುಡನ ಪಾತ್ರದಲ್ಲಿ ಇಂದ್ರನ್ಸ್ ನಟಿಸಿದ್ದು,​ ಅವರನ್ನು ಕಾಪಾಡಿ ಟೊವಿನೋ ಥಾಮಸ್ ಸಾಯುತ್ತಾರೆ. ಈ ಪಾತ್ರದಿಂದ ಇಂದ್ರನ್ಸ್ ಪ್ಯಾನ್-ಇಂಡಿಯನ್ ಮಟ್ಟದಲ್ಲಿ ಮನ್ನಣೆ ಗಳಿಸಿದರು. ಇದೀಗ ಏಳನೇ ತರಗತಿ ಪರೀಕ್ಷೆ ಬರೆದು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ವಿದ್ಯಾಭ್ಯಾಸಕ್ಕೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಇಂದ್ರನ್ಸ್​ ಸಾಬೀತುಪಡಿಸಿದ್ದಾರೆ. ತನ್ನ 68ನೇ ವಯಸ್ಸಿನಲ್ಲಿ 7ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಕೇರಳದ ಅಟ್ಟಕುಳಂಗರ ಶಾಲೆಯ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಬರೆದರು. ಎಲ್ಲ ವಿದ್ಯಾರ್ಥಿಗಳಂತೆ ಇವರಿಗೂ ಪರೀಕ್ಷೆ ಎಂದರೆ ಭಯ. ಆದರೆ, ಆ ಭಯವನ್ನು ಬಿಟ್ಟು ಪರೀಕ್ಷೆ ಎದುರಿಸಿದ್ದಾರೆ. ಅನಿವಾರ್ಯ ಪರಿಸ್ಥಿತಿಗಳಿಂದಾಗಿ ನಾಲ್ಕನೇ ತರಗತಿಯಲ್ಲೇ ಶಾಲೆ ತೊರೆದ ಇಂದ್ರನ್ಸ್ ಜೀವನೋಪಾಯಕ್ಕಾಗಿ ಟೈಲರಿಂಗ್ ಕಲಿತರು.

ಟೈಲರಿಂಗ್​ ಬಳಿಕ ಇಂದ್ರನ್ಸ್​ ಅವರು ಸಿನಿಮಾ ಇಂಡಸ್ಟ್ರಿಯತ್ತ ಕಾಲಿಟ್ಟರು. ಆದ್ದರಿಂದ ಅವರ ಓದುವ ಕನಸು ಕನಸಾಗಿಯೇ ಉಳಿಯಿತು. ಸಿನಿಮಾ ಕ್ಷೇತ್ರದಲ್ಲೂ ಯಶಸ್ಸು ಪಡೆದಿರುವ ಇಂದ್ರನ್ಸ್​ ಅವರಿಗೆ ಇದೀಗ ಓದುವ ಆಲೋಚನೆ ಹುಟ್ಟಿಕೊಂಡಿದೆ. ಹೀಗಾಗಿ ಪುಸ್ತಕಗಳನ್ನು ಖರೀದಿಸಿ ಅಧ್ಯಯನಗಳಲ್ಲಿ ತೊಡಗಿದ್ದಾರೆ. ಆದರೆ, ಕೇರಳದಲ್ಲಿ ನೇರವಾಗಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. 7 ಮತ್ತು 10ನೇ ತರಗತಿ ಪಾಸಾಗಿರಬೇಕು. ಸದ್ಯ ಇಂದ್ರನ್ಸ್​ ಅವರು ಏಳನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದಾರೆ. ಸದ್ಯ ಮಲಯಾಳಂ, ಇಂಗ್ಲಿಷ್ ಮತ್ತು ಹಿಂದಿ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ. ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಗಣಿತ ಪರೀಕ್ಷೆಗಳು ನಡೆಯಲಿದ್ದು, ಈ ಪರೀಕ್ಷೆಗಳ ಫಲಿತಾಂಶವನ್ನು ಇನ್ನೆರಡು ವಾರಗಳಲ್ಲಿ ಪ್ರಕಟಿಸಲಾಗುತ್ತದೆ. ಇದಾದ ಬಳಿಕ 10ನೇ ತರಗತಿ ಪರೀಕ್ಷೆಗೆ ಇಂದ್ರನ್ಸ್​ ತಯಾರಿ ನಡೆಸಲಿದ್ದಾರೆ.

ಇಂದ್ರನ್ ಅವರು 10ನೇ ತರಗತಿಯನ್ನು ತಲುಪಿದಾಗ, ಅವರನ್ನು ಕೇರಳ ರಾಜ್ಯ ಸಾಕ್ಷರತಾ ಮಿಷನ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗುತ್ತದೆ. ಅವರ ಹೆಸರನ್ನು ಸರ್ಕಾರಕ್ಕೆ ಶಿಫಾರಸು ಮಾಡಲು ಸಾಕ್ಷರತಾ ಮಿಷನ್ ಈಗಾಗಲೇ ಸಿದ್ಧತೆ ನಡೆಸಿದೆ. ಈ ಬಗ್ಗೆ ನಿರ್ದೇಶಕಿ ಎ.ಜಿ.ಒಲಿನಾ ಮಾತನಾಡಿ, ಇಂದ್ರನ್ಸ್​ ಅವರ ಅಪಾರವಾದ ಶಿಕ್ಷಣದ ಒಲವು ಸಾಮಾನ್ಯ ಜನರನ್ನು ಪ್ರೇರೇಪಿಸುತ್ತದೆ ಎಂದಿದ್ದಾರೆ.

ಇನ್ನು ಇಂದ್ರನ್ಸ್​ ಅವರ ವೃತ್ತಿಜೀವನದ ವಿಷಯಕ್ಕೆ ಬಂದರೆ ಅವರ ನಿಜವಾದ ಹೆಸರು ಕೆ. ಸುರೇಂದ್ರನ್. ಕಾಸ್ಟ್ಯೂಮ್ ಡಿಸೈನರ್ ಆಗಿ ಆರಂಭವಾದ ಅವರ ಪಯಣ ಇಂದು ನಟನಾಗಿ ಮುಂದುವರೆದಿದೆ. 1985 ರಿಂದ ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಅನೇಕ ಚಲನಚಿತ್ರಗಳನ್ನು ಮಾಡಿದ್ದಾರೆ. 2018ರ ಸಿನಿಮಾದಲ್ಲಿ ಇಂದ್ರನ್ಸ್​ ಕುರುಡನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ಅತ್ಯುತ್ತಮ ನಟನೆಗಾಗಿ ಕೇರಳ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು. ಮಲಯಾಳಂ ಮಾತ್ರವಲ್ಲದೆ ಕೆಲವು ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ. ಕಿರುತೆರೆಯಲ್ಲೂ ಸದ್ದು ಮಾಡಿದ್ದಾರೆ. (ಏಜೆನ್ಸೀಸ್​)

blank

ಬೇರೆ ದಾರಿಯೇ ಇಲ್ಲ: ಅವಕಾಶಕ್ಕಾಗಿ ಮಂಚಕ್ಕೆ ಕರೆಯುವವರ ಬಗ್ಗೆ ಮೀರಾ ಜಾಸ್ಮಿನ್ ಕೊಟ್ಟ ಹೇಳಿಕೆ ವೈರಲ್​

2 ಲಕ್ಷ ರೂ. ಕೊಡೋದು ಬೇಡ ರಾತ್ರಿ ಮನೆಗೆ ಬಾ! ಮಂಚಕ್ಕೆ ಕರೆದ ನಟನ ಹೆಸರು ಬಹಿರಂಗಪಡಿಸಿದ ನಟಿ

Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…