More

  ಬ್ರಿಟನ್ ರಾಜಮನೆತನದ ಬಿಕ್ಕಟ್ಟು ಉಲ್ಬಣ; ಕೆನಡಾಕ್ಕೆ ಮರಳಿದ ಹ್ಯಾರಿ ಪತ್ನಿ

  ಲಂಡನ್: ಬ್ರಿಟನ್ ರಾಜಕುಮಾರ ಹ್ಯಾರಿ ರಾಜಕುಟುಂಬದ ಜವಾಬ್ದಾರಿಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡ ಬೆನ್ನಿಗೆ ಹ್ಯಾರಿ ಪತ್ನಿ ಮೆಘಾನ್ ಕೆನಡಾಕ್ಕೆ ವಾಪಸಾಗಿದ್ದಾರೆ. ಇದರಿಂದ ಬ್ರಿಟನ್ ರಾಜಮನೆತನದ ಬಿಕ್ಕಟ್ಟು ಉಲ್ಬಣಗೊಂಡಿದೆ. ಈ ಮಧ್ಯೆ, ಕುಟುಂಬದಲ್ಲಿನ ಬಿಕ್ಕಟ್ಟು ಎರಡ್ಮೂರು ದಿನಗಳಲ್ಲಿ ಪರಿಹಾರವಾಗಲಿದೆ ಎಂದು ರಾಣಿ ಎರಡನೇ ಎಲಿಜಬೆತ್ ಹೇಳಿದ್ದಾರೆ.

  ಹೊಸ ಪ್ರಗತಿಪರ ಪಾತ್ರ ನಿಭಾಯಿಸಲು ನಿರ್ಧರಿಸಿದ್ದು, ಬ್ರಿಟನ್ ಮತ್ತು ಕೆನಡಾದಲ್ಲಿ ಸಮಯವನ್ನು ಸಮಾನವಾಗಿ ಕಳೆಯುವುದಾಗಿ ಹ್ಯಾರಿ ತಿಳಿಸಿದ್ದಾರೆ. ಆರ್ಥಿಕವಾಗಿ ಸ್ವತಂತ್ರವಾಗುವುದೂ ತಮ್ಮ ಬಯಕೆಯಾಗಿದೆ ಎಂದಿದ್ದಾರೆ. ಹ್ಯಾರಿ ದಂಪತಿಯ ಈ ದಿಢೀರ್ ಘೋಷಣೆಯು ರಾಜಮನೆತನದಲ್ಲಿ ಕಳವಳ ಮೂಡಿಸಿದೆ. ಇಬ್ಬರೂ ಏನನ್ನೂ ಬಹಿರಂಗವಾಗಿ ಘೋಷಿಸಬಾರದೆಂಬ ರಾಣಿ ಎಲಿಜಬೆತ್​ರ ಸೂಚನೆಯನ್ನು ಉಲ್ಲಂಘಿಸಿರುವುದು ಕೂಡ ತಲ್ಲಣ ಸೃಷ್ಟಿಸಿದೆ.

  ಈ ಹಿನ್ನೆಲೆಯಲ್ಲಿ ರಾಣಿ ಎಲಿಜಬೆತ್ ಕುಟುಂಬದವರ ಜತೆ ಗುರುವಾರ ತುರ್ತು ಸಮಾಲೋಚನೆ ನಡೆಸಿದರು. ರಾಜಕುಟುಂಬದಲ್ಲಿ ಕೆಲವರು ಹ್ಯಾರಿ ದಂಪತಿಯನ್ನು ಶಿಕ್ಷಿಸಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts