21.7 C
Bengaluru
Tuesday, January 21, 2020

ಬಾಲಾಕೋಟ್​ ಉಗ್ರ ನೆಲೆಗಳ ಧ್ವಂಸ: ದಾಳಿಯಲ್ಲಿ ಪಾಲ್ಗೊಂಡಿದ್ದ ಪೈಲಟ್​ಗಳ ಅನುಭವ ಇದು…

Latest News

ಉಬರ್ ಈಟ್ಸ್​ ವ್ಯವಹಾರ ಸ್ವಾಧೀನ ಪಡಿಸಿಕೊಂಡ ಜೊಮ್ಯಾಟೋ | ಭಾರತದಲ್ಲಿ ವಹಿವಾಟು ಕೊನೆಗೊಳಿಸಿದ ಉಬರ್ ಈಟ್ಸ್​

ನವದೆಹಲಿ: ಆಲ್ ಸ್ಟಾಕ್ ಡೀಲ್ ಮೂಲಕ ಉಬರ್ ಈಟ್ಸ್​ನ ವ್ಯವಹಾರವನ್ನು ಭಾರತದಲ್ಲಿ ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿರುವುದಾಗಿ ಜೊಮ್ಯಾಟೋ ಮಂಗಳವಾರ ಘೋಷಿಸಿದೆ. ಈ ಮೂಲಕ...

ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು. ದೇಶವ್ಯಾಪಿ...

ಚಿತ್ರದುರ್ಗ: ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಹಳೇ ಮಿಡ್ಲ್...

ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ...

ಸೆನ್ಸೆಕ್ಸ್​ 200ಕ್ಕೂ ಹೆಚ್ಚು ಅಂಶ ಕುಸಿತ; ನಿಫ್ಟಿ 12,200ರಲ್ಲಿ ವಹಿವಾಟು ಶುರು

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ...

ನವದೆಹಲಿ: ಭಾರತ ವಾಯುಸೇನೆ ಪಾಕಿಸ್ತಾನದ ಬಾಲಾಕೋಟ್​ ಜೈಶ್​-ಎ-ಮೊಹಮ್ಮದ್​ ಉಗ್ರನೆಲೆಗಳ ಮೇಲೆ ದಾಳಿ ನಡೆಸಿದ್ದರ ಬಗ್ಗೆ ಅದೆಷ್ಟೋ ಅಪಸ್ವರಗಳು ಎದ್ದಿದ್ದವು. ಅದು ಸತ್ಯನಾ, ಅಥವಾ ಜನರ ಕಣ್ಣುಕಟ್ಟಲಾಗುತ್ತಿದೆಯೋ ಎಂಬಂಥ ಮಾತುಗಳೂ ಕೇಳಿದ್ದವು. ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳೂ ಸ್ಯಾಟ್​ಲೈಟ್​ ಚಿತ್ರಗಳನ್ನು ಬಿಡುಗಡೆ ಮಾಡಿ ಹಾನಿಯಾಗಿಲ್ಲ ಎಂದು ಬಿಂಬಿಸಿದ್ದವು.

ಈಗ ಆ ದಾಳಿ ನಡೆಸಿ ಉಗ್ರ ಅಡಗುತಾಣಗಳನ್ನು ಧ್ವಂಸ ಮಾಡಿದ್ದ ಪೈಲಟ್​ಗಳೇ ತಮ್ಮ ರೋಚಕ ಅನುಭವಗಳನ್ನು ಮಾಧ್ಯಮವೊಂದರ ಜತೆ ಹಂಚಿಕೊಂಡಿದ್ದಾರೆ.

ಅದೊಂದು ಎರಡೂವರೆ ತಾಸುಗಳ ಕಾರ್ಯಾಚರಣೆಯಾಗಿತ್ತು. ಈ ಯೋಜನೆ ಕಾರ್ಯಾನುಷ್ಠಾನಕ್ಕೂ ಮುನ್ನ ಅದೆಷ್ಟು ಸ್ಮೋಕ್​ ಮಾಡಿದ್ದೇವೆ ಲೆಕ್ಕ ಇಲ್ಲ. ಅಷ್ಟು ಟೆನ್ಷನ್​ ಆಗಿತ್ತು. ಇದೊಂದು ಯೋಜನೆಯ ಬಗ್ಗೆ ತಿಳಿದಾಗಿನಿಂದ ನಮ್ಮಲ್ಲಿ ಆಗುತ್ತಿದ್ದ ಚಡಪಡಿಕೆ ಹೇಳಲೂ ಸಾಧ್ಯವಿಲ್ಲ ಎಂದು ದಾಳಿಯಲ್ಲಿ ಭಾಗವಹಿಸಿದ್ದ ಇಬ್ಬರು ಇಬ್ಬರು ಮಿರಾಜ್​ 2000 ಯುದ್ಧ ವಿಮಾನದ ಪೈಲಟ್​ಗಳು ಹೇಳಿದ್ದಾರೆ.  

ಗುರಿಯಿಟ್ಟ ಪ್ರದೇಶಕ್ಕೆ ನಿಖರವಾಗಿ ತಲುಪಿ ವಿನಾಶಗೊಳಿಸುವ ಸ್ಪೈಸ್​ 2000 ಬಾಂಬ್​ನ್ನು ದಾಳಿಯಲ್ಲಿ ಉಪಯೋಗಿಸಲಾಗಿತ್ತು. ಈ ಬಾಂಬ್​ದಾಳಿಯ ಚಿತ್ರಣವನ್ನು ರೆಕಾರ್ಡ್​ ಮಾಡಿ ವಿಡಿಯೋವನ್ನು ನಮಗೆ ಕಳಿಸುವ ಕ್ರಿಸ್ಟೇಲ್​ ಮೇಜ್​ ಕ್ಷಿಪಣಿಯನ್ನೂ ಬಳಸಲು ನಿರ್ಧರಿಸಲಾಗಿತ್ತಾದರೂ ಅಂದು ಮೋಡಗಳು ತೀರಾ ಕೆಳಗೆ ಇದ್ದುದರಿಂದ ತಡೆಯುಂಟಾಯಿತು. ನಾವು ದಾಳಿಗಾಗಿ ತೆಗೆದುಕೊಂಡು ಹೋಗಿದ್ದ ಒಟ್ಟು 6 ಬಾಂಬ್​ಗಳಲ್ಲಿ ಐದನ್ನು ಪ್ರಯೋಗಿಸಿದ್ದೇವೆ ಎಂದು ಪೈಲಟ್​ಗಳು ತಿಳಿಸಿದ್ದಾರೆ. 

ನಾವು ಪ್ರಯೋಗ ಮಾಡಿದ ಸ್ಪೈಸ್​​ 2000 ಬಾಂಬ್​ ಗುರಿ ತಲುಪಿದ್ದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಓರ್ವ ಪೈಲಟ್​ ಆತ್ಮವಿಶ್ವಾಸದಿಂದ ನುಡಿದರು. ಸ್ಪೈಸ್​ 2000 ಯಾವುದೇ ಕಾರಣಕ್ಕೂ ಗುರಿತಪ್ಪುವುದಿಲ್ಲ. ಹಾನಿಯಾಗಿದ್ದು ಸತ್ಯ. ಆದರೆ ಅಲ್ಲಿನ ಕಟ್ಟಡಗಳು ಧ್ವಂಸ ಆಗಿದ್ದನ್ನು ಮರೆಮಾಚುವ ಪ್ರಯತ್ನ ನಡೆದಿರಬಹುದು ಎಂದು ಇನ್ನೋರ್ವ ಪೈಲಟ್​ ತಿಳಿಸಿದರು.

ಸ್ಪೈಸ್​ 2000 ಒಂದು ಫೈರ್ ಆ್ಯಂಡ್​ ಫಾರ್ಗೆಟ್​ ಅಸ್ತ್ರ. ಅದನ್ನು ಪ್ರಯೋಗ ಮಾಡಿದ ಮೇಲೆ ಅದು ಯಶಸ್ವಿ ಆಗಿದೆಯೋ ಇಲ್ಲವೋ ಎಂಬುದನ್ನು ಗಮನಿಸುವ ಅಗತ್ಯವೂ ಇಲ್ಲ, ನಾವು ಅಲ್ಲೇ ಇದ್ದು ಕಾಲಹರಣ ಮಾಡುವುದು ಬೇಡ. ಅದರ ಕೆಲಸ ಅದು ಮಾಡಿ ಮುಗಿಸಿರುತ್ತದೆ. ನಮ್ಮ ಕಾರ್ಯಾಚರಣೆ ಪೂರ್ವ ಸಿದ್ಧತೆಯೂ ತುಂಬ ಶಿಸ್ತಿನಿಂದ ಇತ್ತು. ಬಾಂಬ್​ ದಾಳಿ ನಡೆಸಲು ಸರಿಯಾದ ಪೊಸಿಷನ್​ ತೆಗೆದುಕೊಳ್ಳಲು ನಾವು ಗಡಿನಿಯಂತ್ರಣಾ ರೇಖೆಯುದ್ದಕ್ಕೂ 8 ಕಿಮೀಗಳಷ್ಟು ದೂರ ಸಂಚರಿಸಿದ್ದೆವು ಎಂದು ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಫೆ.14ರಂದು ಪುಲ್ವಾಮಾದಲ್ಲಿ ನಡೆದ ಉಗ್ರದಾಳಿಗೆ ಸುಮಾರು 40 ಜನ ಸಿಆರ್​ಪಿಎಫ್​ ಯೋಧರು ಮೃತಪಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ವಾಯುಸೇನೆ ಫೆ.26ರಂದು ಬಾಲಾಕೋಟ್​ ಮೇಲೆ ದಾಳಿ ನಡೆಸಿತ್ತು. (ಏಜೆನ್ಸೀಸ್​)

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...