More

  ನಾಲ್‌ರೋಡ್-ಗರಿಕೆಕಂಡಿ ಮಾರ್ಗದ ಗುಂಡಿ ಮುಚ್ಚಿದ ಚಾಲಕ!

  ಹನೂರು: ತಾಲೂಕಿನ ನಾಲ್‌ರೋಡ್-ಗರಿಕೆಕಂಡಿ ಮಾರ್ಗದಲ್ಲಿನ ಕೆಲ ಗುಂಡಿಗಳನ್ನು ಚಾಲಕರೊಬ್ಬರು ಮಣ್ಣು ಹಾಕಿ ಮುಚ್ಚುವ ಮೂಲಕ ಜನಪ್ರತಿಧಿಗಳು ಹಾಗೂ ಅಧಿಕಾರಿಗಳು ಮಾಡಬೇಕಿದ್ದ ಕಾರ್ಯಕ್ಕೆ ಸೆಡ್ಡು ಹೊಡೆದಿದ್ದಾರೆ.

  ಒಂದೂವರೆ ವರ್ಷದ ಹಿಂದೆ ರಾತ್ರಿ ವೇಳೆ ದಿಂಬಂ ಮೂಲಕ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಅಧಿಕ ಭಾರದ ಲಾರಿಗಳ ಸಂಚಾರ ಹೆಚ್ಚಾಗಿತ್ತು.ಪರಿಣಾಮ ಈ ಮಾರ್ಗದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ ತೀವ್ರ ಹದಗೆಟ್ಟಿತ್ತು. ಇದರಿಂದ ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿತ್ತು.

  ರಸ್ತೆ ಅಭಿವೃದ್ಧಿ ಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಆದರೆ ಜನಪ್ರತಿನಿಧಿಗಳಾಗಲೀ ಅಥವಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾಗಲೀ ಗಮನಹರಿಸಿರಲಿಲ್ಲ. ಈ ನಡುವೆ 15 ದಿನದ ಹಿಂದೆ ಈ ಭಾಗದಲ್ಲಿ ಆಗಾಗ್ಗೆ ಸುರಿದ ಮಳೆಯಿಂದಾಗಿ ಗುಂಡಿಗಳ ಪ್ರಮಾಣ ಹೆಚ್ಚಾಗಿತ್ತು. ಇದರಿಂದ ವಾಹನಗಳ ಸಂಚಾರಕ್ಕೆ ಮತ್ತಷ್ಟು ತೊಂದರೆಯಾಗಿತ್ತು. ಇದನ್ನು ಮನಗಂಡ ಲಾರಿ ಚಾಲಕ ಈಶ್ವರನ್ ಅವರು ಸ್ವತಃ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚುವ ಕಾರ್ಯ ಮಾಡಿದ್ದಾರೆ.

  ಚಾಲಕನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇನ್ನಾದರೂ ಈ ಬಗ್ಗೆ ಗಮನಹರಿಸಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿದ್ದಾರೆ.

  See also  ಪೋಷಕಾಂಶಗಳ 'ಸಿರಿ' ರೈತರಿಗೆ ಲಾಭದ 'ಧಾನ್ಯ'

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts