ಚಿಕ್ಕಮಗಳೂರು: ವಾಹನಕ್ಕೆ ಅಡ್ಡ ಬಂದ ಕಾಡುಕೋಣವನ್ನು ಶ್ವಾನ ಹಿಮ್ಮೆಟ್ಟಿಸಿದ ಘಟನೆಯ ವಿಡಿಯೋ ಚಿತ್ರೀಕರಣ ವೈರಲ್ ಆಗಿದೆ.
ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದ ಕಾಫಿ ತೋಟದಲ್ಲಿ ಜೀಪ್ಗೆ ಅಡ್ಡ ಬಂದ ಕಾಡುಕೋಣವನ್ನುನಾಯಿ ಹಿಂದಕ್ಕೆ ಓಡಿಸಿತು.
ಮಾಲೀಕನ ಜತೆ ಜೀಪ್ನಲ್ಲಿದ್ದ ನಾಯಿ ಕೋಣ ಎದುರಾಗುತ್ತಿದ್ದಂತೆ ಇಳಿದು ಬೊಗಳಲು ಆರಂಭಿಸಿತು. ಆಕ್ರೋಶಗೊಂಡ ಕೋಣ ನಾಯಿ ಮೇಲೆ ದಾಳಿ ಮಾಡಲು ಮುಂದಾಯಿತು. ತಿವಿಯಲು ಕೋಣ ಮುಂದೆ ಬಂದಾಗ ನಾಯಿ ತಪ್ಪಿಸಿಕೊಂಡು ಕೋಣನ ಮೇಲೆ ಎರಗಲು ಯತ್ನಿಸಿತು. ಮಾಲೀಕ ಎಷ್ಟೆ ಬಾರಿ ಕರೆದರೂ ಹಿಂದಕ್ಕೆ ಬರದೆ ಹೋರಾಟ ನಡೆಸಿತು. ಛಲ ಬಿಡದ ನಾಯಿಯ ಹೋರಾಟಕ್ಕೆ ಕೋಣ ಮಣಿದು ಗುಡ್ಡ ಹತ್ತಿ ಹಿಂದಿರುಗಿತು. ಇತ್ತೀಚಿನ ದಿನಗಳಲ್ಲಿ ಕಾಫಿ ತೋಟದಲ್ಲಿ ಕಾಡುಕೋಣ ಪದೆ,ಪದೇ ಕಾಣಿಸಿಕೊಳ್ಳುತ್ತಿದೆ ಎಂಬುದು ಮಾಲೀಕರ ಹೇಳಿಕೆ.