ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು ಅನುಮತಿ ಕೋರಿ, ದರ್ಶನ್ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಕೋರ್ಟ್ ಸಮ್ಮತಿ ಸೂಚಿಸಿದೆ. ಇದರ ಬೆನ್ನಲ್ಲೇ ದರ್ಶನ್ ಮತ್ತೊಮ್ಮೆ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ದರ್ಶನ್ಗೆ ವಿದೇಶಕ್ಕೆ ಹೋಗಲು ಕೋರ್ಟ್ 25 ದಿನಗಳ ಕಾಲ ಅನುಮತಿ ನೀಡಿದೆ.ಸಿನಿಮಾ ಶೂಟಿಂಗ್ ಹಿನ್ನೆಲೆ ದುಬೈ ಹಾಗೂ ಯೂರೋಪ್ ಗೆ ಹೋಗಲು ಅನುಮತಿ ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಹಾಗಾಗಿ ಜೂನ್ 1ರಿಂದ ಜೂನ್ 25ರವರೆಗೆ ವಿದೇಶಕ್ಕೆ ಹೋಗಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಮಾಹಿತಿ ಹಕ್ಕು ಅಧಿನಿಯಮ ಕುರಿತು ಕೊಪ್ಪಳ ವಿ.ವಿ.ಯಿಂದ ಒಂದು ದಿನದ ಕಾರ್ಯಾಗಾರ| Workshop
ಡೆವಿಲ್ ಚಿತ್ರದ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೀಗ ತಂಡ ಬಿಗ್ ಅಪ್‌ಡೇಟ್ ಹಂಚಿಕೊಂಡಿದೆ. ಡೆವಿಲ್ ಸಿನಿಮಾದ ಪ್ರಾಥಮಿಕ ಹಂತದ ಡಬ್ಬಿಂಗ್ ಮುಕ್ತಾಯವಾಗಿದೆ ಸ್ವತಃ ತಂಡ ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿದೆ. ಸಿಗರೇಟ್ ಹಿಡಿದು ಅಂಬಿ ಕನ್ವರ್ ಲಾಲ್ ಗೆಟಪ್‌ನಲ್ಲಿ ಇರುವ ದರ್ಶನ್ ಹೊಸ ಲುಕ್ಅನ್ನು ಚಿತ್ರತಂಡ ಅನಾವರಣ ಮಾಡಿದೆ.
ಅಂಬರೀಷ್ ಅಭಿನಯದ ಅಂತ ಸಿನಿಮಾದಲ್ಲಿ ಕನ್ವರ್ ಲಾಲ್ ಆಗಿ ರೆಬಲ್ ಸ್ಟಾರ್ ಅಂಬರೀಷ್ ಮಿಂಚಿದ್ದರು. ಅದೇ ರೀತಿಯ ಲುಕ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ನಟನ ಈ ಗೆಟಪ್ ನೋಡಿ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಲೇಡಿ ಗ್ಯಾಂಗ್ ಅಟ್ಟಹಾಸ; ಪರಿಚಯಸ್ಥ ವ್ಯಕ್ತಿಯನ್ನೇ ಅಮಾನುಷವಾಗಿ ಥಳಿಸಿದ ಗ್ಯಾಂಗ್| Viral vedeo
ಬೆಂಗಳೂರು, ಮೈಸೂರು, ರಾಜಸ್ಥಾನ ಸೇರಿದಂತೆ ಹಲವೆಡೆ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಉಳಿದ ಭಾಗ ವಿದೇಶದಲ್ಲಿ ಚಿತ್ರೀಕರಣ ಮಾಡಲಿದ್ದಾರೆ. ಡೆವಿಲ್ ಚಿತ್ರ ತಂಡ ನಾಳೆಯಿಂದ ದುಬೈ ಹಾಗೂ ಯುರೋಪ್‌ನಲ್ಲಿ ಶೂಟಿಂಗ್‌ಗೆ ತೆರಳಲಿದೆ ಹೀಗಾಗಿ ಇದಕ್ಕೂ ಮುಂಚೆಯೇ ಅಂಬರೀಶ್ ಅವರು `ಅಂತ’ ಸಿನಿಮಾದ ಕನ್ವರ್ ಲಾಲ್ ಹೋಲಿಕೆಯಿರೋ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ದರ್ಶನ್ ಮಾತ್ರ ಸಖತ್ ರಗಡ್ ಲುಕ್‌ನಲ್ಲಿ ಕಂಡಿದ್ದಾರೆ. ಕೈಯಲ್ಲಿ ಸಿಗರೇಟ್ ಹಿಡಿದು ಅಬ್ಬರಿಸಿದ್ದಾರೆ ದರ್ಶನ್, ಫಸ್ಟ್ ಡೇ ಫಸ್ಟ್ ಶೋ ಹೋಗೋಕೆ ರೆಡಿ ಇರೋರು ಲೈಕ್ ಮಾಡಿ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ರೈತರಿಂದ ತೀವ್ರ ಪ್ರತಿಭಟನೆ; ಕಾಮಗಾರಿ ತಾತ್ಕಾಲಿಕ ಸ್ಥಗಿತ| protest