ಗಡಿಪಾರು ಮಾಡುವ ನಿರ್ಧಾರ ಸರಿಯಲ್ಲ: ಕೆ.ಮಹೇಶ್ ಕಾಮತ್

blank

ಮೈಸೂರು: ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ವ್ಯಾಪಾರಿಯಾಗಿ ಹಲವಾರು ಮುಸ್ಲಿಂ ಸಮುದಾಯದವರಿಗೂ ಕೆಲಸ ನೀಡುತ್ತಿರುವ ವ್ಯಾಪಾರಿ ಸತೀಶ ಅವರನ್ನು ಗಡಿಪಾರು ಮಾಡುವ ನಿರ್ಧಾರ ಸರಿಯಲ್ಲ ಎಂದು ವಿಶ್ವ ಹಿಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಮಹೇಶ್ ಕಾಮತ್ ಹೇಳಿದ್ದಾರೆ.
ವ್ಯಾಪಾರಿಯಾಗಿ ಹಲವು ವರ್ಷದಿಂದ ಬಹಳಷ್ಟು ಜನರಿಗೆ ಅದರಲ್ಲೂ ಮುಸ್ಲಿಂ ಸಮುದಾಯದವರಿಗೂ ಕೆಲಸ ಕೊಟ್ಟಿದ್ದಾರೆ. ಆದರೆ ಉರ್ದು ಭಾಷೆ ತಿಳಿಯದೆ ಯಾರೋ ಕಳುಹಿಸಿದ್ದ ಪೋಸ್ಟ್‌ಅನ್ನು ಹಾಕಿದ ತಪ್ಪಿಗೆ ಪೊಲೀಸರು ಸತೀಶ್ ಅವರನ್ನು ಗಡಿ ಪಾರು ಮಾಡಲು ಆಲೋಚಿಸಿರುವುದು ವಿಷಾದನೀಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅರಿವಿಲ್ಲದೇ ಮಾಡಿದ ತಪ್ಪಿಗೆ ವಿಷಾದ ವ್ಯಕ್ತಪಡಿಸಿದರೂ ಮತ್ತೇಕೆ ಪೊಲೀಸರು ಹೀಗೆ ಕ್ರಮ ವಹಿಸಲು ಮುಂದಾಗಿದ್ದಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಮುಸ್ಲಿಂ ವಿರೋಧಿ ಆಗಿದ್ದರೆ ಅವರು ಆ ಸಮುದಾಯಕ್ಕೆ ಕೆಲಸವನ್ನೇ ನೀಡುತ್ತಿರಲಿಲ್ಲ. ಇಷ್ಟು ವರ್ಷ ಜಾತಿ, ಧರ್ಮ ನೋಡದೆ ಕೆಲಸ ನೀಡಿರುವುದು ತಪ್ಪೇ? ಹಾಗಾದರೆ ಪೊಲೀಸರಿಗೆ ಯಾರ ಒತ್ತಡವಿದೆ? ಡ್ರೈ ಫ್ರೂಟ್ ವ್ಯಾಪಾರಸ್ಥರೇನಾದರೂ ಒತ್ತಡ ಹಾಕಿರಬಹುದೇ? ಎಂದು ಪ್ರಶ್ನಿಸಿದ್ದಾರೆ.

Share This Article

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…

ಜಗತ್ತಿನ ಈ 5 ಜನರ ಮುಂದೆ ಯಾವಾಗಲೂ ಮೌನವಾಗಿರಬೇಕಂತೆ! ಚಾಣಕ್ಯ ನೀತಿ ಬಗ್ಗೆ ತಿಳಿಯಿರಿ | Chanakya Niti

Chanakya Niti : ಚಾಣಕ್ಯ ಎಂದ ಕ್ಷಣ ಕಣ್ಣ ಮುಂದೆ ಬರುವುದೆ ಚಾಣಕ್ಷ್ಯತನ, ಬುದ್ಧಿವಂತಿಕೆ. ಹಾಗಾಗಿ,…

ಮಾವಿನಹಣ್ಣು ತಿಂದು ಈಸಿಯಾಗಿ ದೇಹದ ತೂಕ ಇಳಿಸಬಹುದು! ಹೊಸ ಅಧ್ಯಯನ.. mango

mango: ತೂಕ ಇಳಿಸಿಕೊಳ್ಳಲು ಬಯಸುವ ಜನರು ಹೆಚ್ಚಾಗಿ ಮಾವಿನಹಣ್ಣನ್ನು ತಪ್ಪಿಸುತ್ತಾರೆ. ಆದರೆ ಇತ್ತೀಚಿನ ಅಧ್ಯಯನವು ತೂಕ…