20.4 C
Bangalore
Monday, December 9, 2019

ಯುದ್ಧ ವಿಮಾನ ಸಾಗಣೆ ವೆಚ್ಚ ದುಪ್ಪಟ್ಟು

Latest News

ಬೈ ಎಲೆಕ್ಷನ್ ರಿಸಲ್ಟ್​| ವಿಜಯನಗರ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ ಬಿಜೆಪಿಯ ಆನಂದ್ ಸಿಂಗ್​…

ಬಳ್ಳಾರಿ: ಗಣಿನಾಡಿನ ವಿಜಯನಗರ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಮೊದಲ ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ...

ಮೊದಲ ಸುತ್ತಿನ ಮತಎಣಿಕೆ: ಹೊಸಕೋಟೆಯಲ್ಲಿ ಪಕ್ಷೇತರ ಶರತ್​ ಬಚ್ಚೇಗೌಡ, ಯಶವಂತಪುರದಲ್ಲಿ ಜೆಡಿಎಸ್​ ಜವರಾಯಿಗೌಡ ಮುನ್ನಡೆ

ಬೆಂಗಳೂರು: ಹೊಸಕೋಟೆ ವಿಧಾನಸಭಾ ಹಾಗೂ ಯಶವಂತಪುರ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತಎಣಿಕೆ ಪಕ್ರಿಯೆ ಮುಗಿದಿದೆ. ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿರುದ್ಧ ಪಕ್ಷೇತರ...

ಬೈ ಎಲೆಕ್ಷನ್ ರಿಸಲ್ಟ್​| ಯಲ್ಲಾಪುರದಲ್ಲಿ ಮೂರನೇ ಸುತ್ತು ಮತ ಎಣಿಕೆ ಅಂತ್ಯ

ಕಾರವಾರ: ರಾಜ್ಯದ ಉಪಚುನಾವಣಾ ಸಮರದಲ್ಲಿ ಗಮನಸೆಳೆದಿರುವ ಯಲ್ಲಾಪುರ ಕ್ಷೇತ್ರದ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಮೂರನೇ ಸುತ್ತು ಮುಕ್ತಾಯವಾದಾಗ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ...

ರಾಣೇಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮುನ್ನಡೆ

ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ 417 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ...

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

ಸುಭಾಸ ಧೂಪದಹೊಂಡ ಕಾರವಾರ

ಜಿಲ್ಲಾಡಳಿತದ ವಿಳಂಬದಿಂದಾಗಿ ನಿವೃತ್ತಿಯಾದ ನೌಕಾ ಯುದ್ಧ ವಿಮಾನವನ್ನು ವಸ್ತು ಸಂಗ್ರಹಾಲಯವಾಗಿಸುವ ವೆಚ್ಚ ದುಪ್ಪಟ್ಟಾಗಿದೆ.

2017ರ ಮಾರ್ಚ್​ನಲ್ಲೇ ಕಾರ್ಯನಿಲ್ಲಿಸಿದ ಟಪ್ಲು-142ಎಂ ಯುದ್ಧ ವಿಮಾನವನ್ನು ಕಾರವಾರಕ್ಕೆ ತಂದು ನಿಲ್ಲಿಸಲು ರಕ್ಷಣಾ ಇಲಾಖೆ ಒಪ್ಪಿಗೆ ನೀಡಿದರೂ ಮುಂದಿನ ಕಾರ್ಯಕ್ಕೆ ವಿವಿಧ ವಿಘ್ನ ಉಂಟಾಗುತ್ತಿದೆ. ಇದರಿಂದ ಅದರ ಸಾಗಣೆ ಹಾಗೂ ನಿರ್ಮಾಣ ವೆಚ್ಚ ಈಗ 4 ರಿಂದ 10 ಕೋಟಿ ರೂ.ಗೆ ಏರಿಕೆಯಾಗಿದೆ. ನಿರ್ಮಾಣ ವೆಚ್ಚದಲ್ಲಿ 2 ಕೋಟಿ ರೂ.ಗಳನ್ನು ಮಾತ್ರ ಕರ್ನಾಟಕ ಸರ್ಕಾರ ನೀಡಲು ಸಿದ್ಧವಿದ್ದು, ಉಳಿದ 8 ಕೋಟಿ ರೂ.ಗಳನ್ನು ರಕ್ಷಣಾ ಇಲಾಖೆಯೇ ಭರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಇತ್ತೀಚೆಗೆ ನವದೆಹಲಿಯಲ್ಲಿ ಭೇಟಿಯಾಗಿ ಮನವಿ ಮಾಡಿದ್ದಾರೆ. ಅಲ್ಲದೆ, ಯುದ್ಧ ವಿಮಾನವನ್ನು ಕಾರವಾರಕ್ಕೆ ತಂದು ನಿಲ್ಲಿಸುವ ಜವಾಬ್ದಾರಿಯನ್ನೂ ನಿರ್ವಹಿಸುವಂತೆ ಭಾರತೀಯ ನೌಕಾಸೇನೆಗೆ ಜಿಲ್ಲಾಡಳಿತ ಪತ್ರ ಬರೆದಿದೆ.

ಕಾಯುತ್ತಿದೆ ವಿಮಾನ: ಜಲಾಂತರ್ಗಾಮಿಗಳನ್ನು ಹೊಡೆದುರುಳಿಸಬಲ್ಲ ರಷ್ಯಾ ನಿರ್ವಿುತ ಟಪ್ಲು-142ಎಂ ಎಂಬ 3 ಯುದ್ಧ ವಿಮಾನಗಳನ್ನು ಭಾರತೀಯ ನೌಕಾಸೇನೆ 2017ರ ಮಾರ್ಚ್​ನಲ್ಲಿ ತಮಿಳುನಾಡಿನ ಐಎನ್​ಎಸ್ ರಂಜಲಿಯಲ್ಲಿ ನಿವೃತ್ತಿಗೊಳಿಸಿದೆ. ಒಂದು ವಿಮಾನವನ್ನು 2018 ಜುಲೈನಲ್ಲಿ ವಿಶಾಖಾಪಟ್ಟಣಕ್ಕೆ ಕೊಂಡೊಯ್ದು ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಲಾಗಿದೆ. ಇನ್ನೊಂದನ್ನು ಹೈದರಾಬಾದ್ ಅಥವಾ ಕೋಲ್ಕತ್ತಾದಲ್ಲಿ ವಸ್ತು ಸಂಗ್ರಹಾಲಯವಾಗಿಸುವ ಬಗ್ಗೆ ಚರ್ಚೆ ನಡೆದಿದೆ. ಕಾರವಾರಕ್ಕಾಗಿ ಮೀಸಲಿರುವ 3ನೇ ವಿಮಾನ ಇನ್ನೂ ತಮಿಳುನಾಡಿನಲ್ಲೇ ಕಾಯುತ್ತಿದೆ.

ಸಮಸ್ಯೆ ಏನು..? ಟಪ್ಲು-142ಎಂ ಯುದ್ಧ ವಿಮಾನವನ್ನು ಕಾರವಾರದ ಚಾಪೆಲ್ ಯುದ್ಧ ನೌಕಾ ವಸ್ತು ಸಂಗ್ರಹಾಲಯದ ಪಕ್ಕದಲ್ಲೇ ತಂದಿರಿಸಲು ಯೋಜಿಸಲಾಗಿತ್ತು. ನೌಕಾಸೇನೆಯ ಕರ್ನಾಟಕ ವಲಯ ಮುಖ್ಯಸ್ಥ ರೇರ್ ಎಡ್ಮಿರಲ್ ಕೆ.ಜೆ. ಕುಮಾರ ಸ್ಥಳ ಪರಿಶೀಲಿಸಿದ್ದರು. ಆದರೆ, ಅದನ್ನು ಇಲ್ಲಿಗೆ ತಂದು ಸ್ಥಾಪನೆ ಮಾಡುವ ಖರ್ಚು ವೆಚ್ಚಗಳ ಬಗ್ಗೆ ಪತ್ರ ವ್ಯವಹಾರದಲ್ಲೇ ಕಾಲ ಕಳೆಯಿತು. ಅಷ್ಟು ಹೊತ್ತಿಗಾಗಲೇ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗಾಗಿ ಫ್ಲೈ ಓವರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇದರಿಂದ ಯುದ್ಧ ವಿಮಾನವನ್ನು ತಂದು ಇಳಿಸುವ ಖರ್ಚು ದುಪ್ಪಟ್ಟಾಗಿದೆ.

ಏನಿದರ ವಿಶೇಷ..? ಭಾರತೀಯ ನೌಕಾಸೇನೆಯ 312 ಸ್ವಾಡ್ರನ್​ನಲ್ಲಿ 1988 ರಿಂದ ಟಪ್ಲು-142ಎಂ ಯುದ್ಧ ವಿಮಾನಗಳು ಕಾರ್ಯನಿರ್ವಹಿಸಿದ್ದವು. ಒಟ್ಟು 49.5 ಮೀಟರ್ ಉದ್ದವಿರುವ ವಿಮಾನ ಅಗಲವಾದ ರೆಕ್ಕೆಗಳನ್ನು ಹೊಂದಿದೆ. 1,85,000 ಕೆಜಿ ಭಾರ ಹೊಂದಿದೆ. ಒಟ್ಟು 30, ಸಾವಿರ ಗಂಟೆ ಭಾರತೀಯ ನೌಕಾಸೇನೆಯಲ್ಲಿ ಕಾರ್ಯನಿರ್ವಹಿಸಿದೆ.

ಪ್ರಯೋಜನವೇನು..? ಯುದ್ಧ ವಿಮಾನವೊಂದನ್ನು ವಸ್ತು ಸಂಗ್ರಹಾಲಯವಾಗಿಸಿದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗುತ್ತದೆ. ಈಗಾಗಲೇ ಯುದ್ಧ ಹಡಗಿನ ವಸ್ತು ಸಂಗ್ರಹಾಲಯ ಇರುವುದರಿಂದ ಯುದ್ಧ ವಿಮಾನವೂ ಸೇರಿದರೆ ಮತ್ತಷ್ಟು ಜನರನ್ನು ಸೆಳೆಯಬಹುದು.

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...