ವಿಜಯವಾಣಿ ಸುದ್ದಿಜಾಲ ಧಾರವಾಡ
ಸಹಕಾರಿ ಬ್ಯಾಂಕ್ಗಳು ವಾಣಿಜ್ಯ ಬ್ಯಾಂಕ್ಗಳ ಮಟ್ಟಕ್ಕೆ ಬೆಳೆಯುವುದು ಸುಲಭದ ಮಾತಲ್ಲ. ಆದರೆ ಸಹಕಾರಿ ಬ್ಯಾಂಕ್ಗಳು ವಾಣಿಜ್ಯ ಬ್ಯಾಂಕ್ಗಳ ಜತೆಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಬೆಳೆದಿದ್ದೇ ಆದಲ್ಲಿ ಸಹಕಾರಿ ರಂಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾಣಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಗರದ ರಡ್ಡಿ ಸಹಕಾರ ಬ್ಯಾಂಕ್ ನಿಯಮಿತ ವತಿಯಿಂದ ಇಲ್ಲಿನ ಡಾ. ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಬ್ಯಾಂಕ್ಗಳು ಜಿಲ್ಲಾ ಮಟ್ಟದಲ್ಲಿ ಪ್ರಮುಖ ಬ್ಯಾಂಕ್ಗಳಾಗಿ ಹೊರಹೊಮ್ಮಬೇಕು. ಶಾಖೆಗಳ ಹೆಚ್ಚಳದ ಜತೆಗೆ ವಹಿವಾಟು ಹೆಚ್ಚಳಕ್ಕೂ ಪ್ರಯತ್ನಿಸಬೇಕು ಎಂದರು.
ಸಹಕಾರಿ ಬ್ಯಾಂಕ್ಗಳ ಸರ್ವತೋಮುಖ ಬೆಳವಣಿಗೆಗೆ ಸರ್ಕಾರ ಬದ್ಧವಾಗಿದ್ದು, ಅಗತ್ಯ ನೆರವು ನೀಡಲಿದೆ. ಒಂದು ಸಹಕಾರಿ ಬ್ಯಾಂಕ್ ಶತಮಾನೋತ್ಸವ ಆಚರಿಸುವುದು ಸಣ್ಣ ಮಾತಲ್ಲ. ರಡ್ಡಿ ಬ್ಯಾಂಕ್ 110 ವರ್ಷ ಪೂರೈಸಿರುವುದು ಆಡಳಿತ ಮಂಡಳಿಯ ಪ್ರಾಮಾಣಿಕತೆಗೆ ಸಾಕ್ಷಿ. ಆಡಳಿತ ಮಂಡಳಿ ಪ್ರಾಮಾಣಿಕವಾಗಿರದಿದ್ದರೆ, ಹೆಗ್ಗಣಗಳು ಸೇರಿ ಕೊರೆಯಲು ಆರಂಭಿಸುತ್ತವೆ. ಹೀಗಾಗಿ ಆಡಳಿತ ಮಂಡಳಿ ಪ್ರಾಮಾಣಿಕ ಕಾರ್ಯ ಅತ್ಯಂತ ಮುಖ್ಯ ಎಂದರು.
ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ, ಆಥಿರ್ಕ ನ್ಯಾಯ ಸಿಕ್ಕಾಗ ಮಾತ್ರ ಅಸಮಾನತೆ ಹೋಗಲಾಡಿಸಬಹುದು. ಈ ಅಸಮಾನತೆ ಹೋಗಲಾಡಿಸುವಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಸಹ ಅಪಾರವಾಗಿದೆ. ಹೀಗಾಗಿ ಸಹಕಾರ ಬ್ಯಾಂಕ್ ರೈತರ ಅನುಕೂಲತೆ ಕಲ್ಪಿಸುವ ನಿಟ್ಟಿನಲ್ಲಿ ಕಾಯೋರ್ನ್ಮುಖವಾಗಬೇಕು ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡಿ, ಕೆ.ಎಚ್ ಪಾಟೀಲ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ನನಗೆ ಮೊದಲ ಬಾರಿ ಟಿಕೆಟ್ ನೀಡಿದ್ದರು. ಆದರೆ ಆಗ ಸೋತೆ. ನಂತರದಲ್ಲಿ ಕೆ.ಎಚ್. ಪಾಟೀಲ್ ಅವರ ಜತೆ ಶಾಸಕ, ಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಅವರೊಬ್ಬ ಧೀಮಂತ ನಾಯಕ ಎಂದರು.
ನಾನು ಸಹಕಾರಿ ಸಚಿವನೂ ಆಗಿದ್ದೆ. ಗದಗದಲ್ಲಿ ಸಹಕಾರಿ ಕ್ಷೇತ್ರದ ಆಧಾರ ಸ್ಥಂಭವಾಗಿರುವ ಸಿದ್ದನಗೌಡ ಪಾಟೀಲ್ ಅವರನ್ನು ಸ್ಮರಿಸಬೇಕು. ಅವರು ಹಾಕಿರುವ ಅಡಿಪಾಯ ಇಡೀ ದೇಶದಲ್ಲಿ ಬೆಳೆದಿದೆ. ಹಣ ಸಮಾಜಕ್ಕೆ ಹೋದಷ್ಟು ಆಥಿರ್ಕತೆ ಬೆಳೆಯುತ್ತದೆ. ನೀವೆಲ್ಲರೂ ಉದ್ಯೋಗ ಸೃಷ್ಟಿ ಮಾಡುವುದರ ಬಗ್ಗೆ ಆಲೋಚನೆ ಮಾಡಬೇಕು ಎಂದರು.
ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಕರ್ನಾಟಕದಲ್ಲಿ ಸಹಕಾರ ಕ್ಷೇತ್ರ ಅಶಕ್ತ ಆಗುತ್ತಿದ್ದು, ರಾಜ್ಯ ಸರ್ಕಾರ ಈ ಕ್ಷೇತ್ರಕ್ಕೆ ಬಲ ತುಂಬುವ ಕೆಲಸ ಮಾಡಬೇಕಿದೆ. ಸಹಕಾರ ಕ್ಷೇತ್ರ ಹಲವು ಕಾರಣಕ್ಕೆ ಕ್ಷೀಣಿಸುತ್ತಿದೆ. ಈ ಮೂಲಕ ಮಧ್ಯಮ ವರ್ಗದ ಜನರು ತೊಂದರೆಗೆ ಒಳಗಾಗುವಂತೆ ಆಗಿದೆ. ಈ ಸ್ಥಿತಿಯಲ್ಲಿ ಸರ್ಕಾರ ಈ ಕ್ಷೇತ್ರಕ್ಕೆ ಬಲ ತುಂಬಬೇಕಿದೆ ಎಂದರು.
“ಕೆ.ಎಚ್. ಪಾಟೀಲ ವಿಚಾರಧಾರೆ’ ಪುಸ್ತಕ ಹಾಗೂ ಮಹಾಯೋಗಿ ವೇಮನರ ಭಾವಚಿತ್ರ ಅನಾವರಣ ಮಾಡಲಾಯಿತು. ಇದಕ್ಕೂ ಪೂರ್ವದಲ್ಲಿ ಬ್ಯಾಂಕಿನ ಕಟ್ಟಡ ಉದ್ಘಾಟನೆ ಹಾಗೂ ಸಂಸ್ಥಾಪಕ ಎಫ್ .ಟಿ. ನಲವಡಿ ಮತ್ತು ಸಹಕಾರ ರಂಗದ ಭೀಷ್ಮ ಕೆ.ಎಚ್. ಪಾಟೀಲ ಅವರ ಪುತ್ಥಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರು ಅನಾವರಣಗೊಳಿಸಿದರು.
ಶ್ರೀ ವೇಮನಾನಂದ ಸ್ವಾಮೀಜಿ, ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ರಾಮಲಿಂಗಾರಡ್ಡಿ, ಆರ್.ಬಿ. ತಿಮ್ಮಾಪುರ, ಸಂಸದ ಬಸವರಾಜ ಬೊಮ್ಮಾಯಿ, ಇತರರು ಇದ್ದರು.
ಬ್ಯಾಂಕ್ ಅಧ್ಯಕ್ಷ ಕೆ.ಎಲ್. ಪಾಟೀಲ ಸ್ವಾಗತಿಸಿದರು.
ಸಹಕಾರಿ ಕ್ಷೇತ್ರಕ್ಕೆ ಸಿಗಲಿದೆ ಸರ್ಕಾರದ ಸಹಕಾರ
You Might Also Like
Skin Care | ಚಳಿಗಾಲದಲ್ಲಿ ನಿಮ್ಮ ತ್ವಚೆಯು ಹಾಳಾಗದಂತೆ ಎಚ್ಚರವಹಿಸಿ; ಈ ಫೇಸ್ಪ್ಯಾಕ್ ಟ್ರೈ ಮಾಡಿ ಫಲಿತಾಂಶ ನೀವೇ ನೋಡಿ..
ಚಳಿಗಾಲ ಆರಂಭವಾಯಿತು ಎಂದರೆ ಸಾಕು ತ್ವಚೆಯಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಳ್ಳುವುದನ್ನು ನಾವು ನೊಡಬಹುದು. ಇನ್ನು ಮುಖದ…
ಈ ಆಹಾರ ಪದಾರ್ಥದಲ್ಲಿದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ; Health Tips ನಿಮಗಾಗಿ
ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಯನ್ನು ತಡೆಗಟ್ಟಲು ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.…
ಚಳಿಗಾಲದಲ್ಲಿ ಕೈ&ಕಾಲ್ಬೆರಳುಗಳ ಊತಕ್ಕೆ ಕಾರಣ ಈ ಕಾಯಿಲೆ; ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ… | Health Tips
ಚಳಿಗಾಲದಲ್ಲಿ ನೆಗಡಿ ಮಾತ್ರವಲ್ಲದೆ ಹಲವಾರು ಕಾಯಿಲೆಗಳು ಸಮಸ್ಯೆಯನ್ನು ಹೆಚ್ಚಿಸುತ್ತವೆ. ಅದರಲ್ಲಿ ಚಿಲ್ಬ್ಲೈನ್ಸ್ ರೋಗವು ಒಂದಾಗಿದೆ. ಬಹುಶಃ…