More

  ಕನ್ನಡಕ್ಕೆ ಆಟೋ ಚಾಲಕರು, ಮಾಲೀಕರ ಕೊಡುಗೆ ಸ್ಮರಣೀಯ

  ಕುಶಾಲನಗರ: ಕನ್ನಡವನ್ನು ಉಳಿಸಿ ಬೆಳೆಸುವುದರಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಪಾತ್ರ ಮಹತ್ವವಾದದ್ದು ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಕುಶಾಲನಗರ ತಾಲೂಕು ಘಟಕ ಅಧ್ಯಕ್ಷ ಕೆ.ಎಸ್.ನಾಗೇಶ್ ತಿಳಿಸಿದರು.

  ಕುಶಾಲನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಸಾರಿಗೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಟೋ ಸಂಘಟನೆಗಳು ಅತ್ಯಂತ ಶಕ್ತಿಯುತವಾಗಿದೆ. ಕೆಲವು ಚಾಲಕರು ಕಾನೂನು ಪಾಲನೆ ಮಾಡದಿರುವ ಹಿನ್ನೆಲೆಯಲ್ಲಿ ಎಲ್ಲರನ್ನೂ ದೂಷಿಸುವಂತಾಗಿದೆ ಎಂದರು.

  ಸಂಘಕ್ಕೆ ಉಚಿತವಾಗಿ ನಿವೇಶನ ನೀಡಿರುವ ದಿ.ವಿ.ಪಿ.ನಾಗೇಶ್ ಅವರ ಪತ್ನಿ ಜಯಶ್ರೀ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ಕೃಷ್ಣ ದರ್ಶನ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ರಕ್ತದಾನ ನಡೆಯಿತು. ಆರೋಗ್ಯ ತಪಾಸಣಾ ಶಿಬಿರ ಮತ್ತು ಅಂಗಾಂಗ ದಾನಕ್ಕೆ ನೋಂದಣಿ ಕಾರ್ಯ ನಡೆಯಿತು. ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ವಿವಿಧ ಕ್ರೀಡೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

  ಉದ್ಯಮಿ ವಿ.ಎನ್.ತೇಜಸ್, ಆರೋಗ್ಯ ಇಲಾಖೆಯ ಶಾಂತಿ, ಡಾ.ಕರುಂಬಯ್ಯ, ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್‌ಕುಮಾರ್‌ಗೌಡ, ಖಜಾಂಚಿ ಮುನೀರ್ ಅಹಮದ್, ಮಾಜಿ ಖಜಾಂಚಿ ಜಿ.ರಮೇಶ್, ಪತ್ರಕರ್ತ ವಂಶಿ ರಘು ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts