ಕಳಸ: ಸಂಸೆ ಗ್ರಾಮದಲ್ಲಿ ತುಂಬಿಕೊಂಡಿದ್ದ ರಾಶಿ ರಾಶಿ ಕಸವನ್ನು ಗ್ರಾಮಸ್ಥರೇ ಸ್ವಚ್ಛಗೊಳಿಸಿದ್ದಾರೆ.
ಆಟೋ ನಿಲ್ದಾಣ, ಪ್ರಯಾಣಿಕರ ತಂಗುದಾಣ, ಜೀಪ್‌ನಿಲ್ದಾಣದಲ್ಲಿ ಕಳೆದ ಕೆಲ ದಿನಗಳಿಂದ ತ್ಯಾಜ್ಯಗಳು, ಮಳೆ ನೀರಿನಿಂದ ಕೊಚ್ಚಿಕೊಂಡು ಬಂದ ಮಣ್ಣಿನ ರಾಶಿ ತುಂಬಿ ಹೋಗಿತ್ತು. ಸಂಸೆ ಪಂಚಾಯಿತಿಗೆ ಹೋಗುವ ರಸ್ತೆಯಲ್ಲೇ ಕಸದ ರಾಶಿ ಸಮಗ್ರಹವಾಗಿರುವ ಬಗ್ಗೆ ಗ್ರಾಮಸ್ಥರು ಜೀಪ್, ಆಟೋ ಚಾಲಕರು ಗ್ರಾಪಂ ಹಾಗೂ ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ ಇದರಿಂದ ಬೇಸೆತ್ತ ಗ್ರಾಮಸ್ಥರು ಹಣ ಸಂಗ್ರಹಿಸಿ ಜೆಸಿಬಿ ಮತ್ತು ಶ್ರಮದಾನದ ಮೂಲಕ ಮಣ್ಣು ತೆರವು ಮಾಡಿ ಸ್ವಚ್ಚಗೊಳಿಸಿದರು.
ಸಂಸೆ ಗ್ರಾಪಂನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಭಿನ್ನಾಭಿಪ್ರಾಯದಿಂದಾಗಿ ಗ್ರಾಮದ ಅಭಿವೃದ್ಧಿಗೆ ಬಂದಿರುವ ಸುಮಾರು 1.26 ಕೋಟಿ ರೂ. ಹಣ ಬಳಕೆ ಮಾಡದೇ ಇರಿಸಿಕೊಂಡ ಬಗ್ಗೆ ಪತ್ರಿಕೆ ವರದಿಯನ್ನು ಮಾಡಿತ್ತು. ಆದರೂ ಎಚ್ಚೆತ್ತುಕೊಳ್ಳದ ಇಲ್ಲಿನ ಅಡಳಿತ ವರ್ಗ ತನ್ನ ಗ್ರಾಮದ ಸ್ವಚ್ಚತೆಯನ್ನೂ ಮಾಡದೇ ನಿರ್ಲಕ್ಷೃ ವಹಿಸುತ್ತಿದೆ. ಗ್ರಾಮದಲ್ಲಿರುವ ತ್ಯಾಜ್ಯದ ತೊಟ್ಟಿಗಳು ತುಂಬಿ ಕಸ ರಸ್ತೆ ಪೂರ್ತಿ ಹರಡಿಕೊಂಡಿದೆ.
ಸಾಕಷ್ಟು ಅನುದಾನ ಇದ್ದರೂ ಅಭಿವೃದ್ಧಿ ಮಾಡದೆ ಗ್ರಾಮ ಪಂಚಾಯಿತಿ ನಿರ್ಲಕ್ಷೃ ವಹಿಸುತ್ತಿದೆ. ಗ್ರಾಮದಲ್ಲಿ ತುಂಬಿರುವ ಕಸ ವಿಲೇವಾರಿಯನ್ನು ಮಾಡುತ್ತಿಲ್ಲ. ಸಂಸೆ ಗ್ರಾಪಂಗೆ ಹೋಗುವ ದಾರಿಯಲ್ಲೇ ಕಸ ಇದ್ದರೂ ಅದನ್ನು ತೆಗೆಯಲು ಮುಂದಾಗಿಲ್ಲ. ಆದ್ದರಿಂದ ಗ್ರಾಮಸ್ಥರೇ ಸೇರಿ ಮಣ್ಣು, ಕಸವನ್ನು ತೆರವು ಮಾಡಲಾಗಿದೆ ಎನ್ನುತ್ತಾರೆ ಆಟೋ ಚಾಲಕ ವರ್ಧಮಾನ್. ಬದ್ರುದ್ಧಿನ್, ಪ್ರವೀಣ್, ಚೇತನ, ವಿಷ್ಣು, ರಮೇಶ್, ಹೆರಾಲ್ಡ್, ರವಿ ಇತರರು ಇದ್ದರು.
ಸಂಸೆ ಗ್ರಾಮಸ್ಥರಿಂದಲೇ ಸ್ವಚ್ಛತಾಕಾರ್ಯ
ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips
ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…
ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips
ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…
Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?
ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…