ರಾಯಚೂರು ವಿದ್ಯಾರ್ಥಿನ ಸಾವಿನ ಪ್ರಕರಣ ತನಿಖೆಗೆ ಸಿಐಡಿ ತಂಡ ರಚನೆ: ಇಂದು ಸಂಜೆ ರಾಯಚೂರಿಗೆ ತೆರಳಲಿರುವ ತಂಡ

ರಾಯಚೂರು: ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಪ್ರಕರಣ ತನಿಖೆಗಾಗಿ ರಾಜ್ಯ ಸರ್ಕಾರ ಸಿಐಡಿ ತಂಡ ರಚನೆ ಮಾಡಿದೆ.

ಶನಿವಾರ ಗೃಹ ಇಲಾಖೆಯ ಸೂಚನೆ ಹಾಗೂ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ತನಿಖೆಗೆ ಆದೇಶದ ಮೇಲೆ ಐಪಿಎಸ್​​​​​ ಶರಣಪ್ಪ ನೇತೃತ್ವದಲ್ಲಿ ಸಿಐಡಿ ತಂಡ ರಚನೆಯಾಗಿದ್ದು, ಇಂದು ಸಂಜೆ ಬೆಂಗಳೂರಿನಿಂದ ರಾಯಚೂರಿಗೆ ತೆರಳಲಿದೆ. ತಂಡದಲ್ಲಿ ಒಬ್ಬ ಡಿವೈಎಸ್ಪಿ, ಇಬ್ಬರು ಸಿಪಿಐ ಮತ್ತು ಎಂಟು ಜನ ಸಿಬ್ಬಂದಿಗಳಿದ್ದಾರೆ.

ಇಂಜಿನಿಯರಿಂಗ್‌ ವಿದ್ಯಾರ್ಥಿನಿಯದ್ದು ಆತ್ಮಹತ್ಯೆಯಲ್ಲ ಅದು ಕೊಲೆ ಎಂದು ಈಗಾಗಲೇ ರಾಜ್ಯದಲ್ಲಿ ಹಲವು ಹೋರಾಟಗಳು ನಡೆಯುತ್ತಿವೆ. ಜಿಲ್ಲೆಯ ಪ್ರಗತಿಪರ ಸಂಘಟನೆ, ವಿದ್ಯಾರ್ಥಿಗಳು ಸಭೆ ಸೇರಿ ಜಸ್ಟೀಸ್​​​ ಫಾರ್​ ಮಧು ಎಂಬ ಹೋರಾಟ ಸಮಿತಿ ರಚನೆ ಮಾಡಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸಮಿತಿ ಅಗ್ರಹಿಸಿದೆ.

ಸಿಐಡಿ ತನಿಖೆ ತೀವ್ರಗತಿಯಲ್ಲಿ ನಡೆಸಲು ಒತ್ತಾಯಿಸಿ ಇದೇ 24ರಂದು ನಗರದ ಅಂಬೇಡ್ಕರ್​​​ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲು ಸಮಿತಿ ತೀರ್ಮಾನಿಸಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *