ಗಂಗಾವತಿ: ಕಾಶ್ಮೀರ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಪ್ರವಾಸಿಗರಿಗೆ ನಗರದ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ವಿವಿಧ ಘಟಕಗಳಿಂದ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಗರ ಮತ್ತು ಗ್ರಾಮೀಣ ಭಾಗದ ಕಾರ್ಯಕರ್ತರು ದೀಪ ಪ್ರಜ್ವಂಲನದೊಂದಿಗೆ ಮೌನಾಚರಣೆ ಸಲ್ಲಿಸಿದ್ದು, ಉಗ್ರರ ಕೃತ್ಯವನ್ನು ಖಂಡಿಸಿದರು.
ಆರಾಧನೆ ಸಮಿತಿ ಸದಸ್ಯ ವಿಶ್ವನಾಥ ಮಾಲಿ ಪಾಟೀಲ್ ಮಾತನಾಡಿ, ಪ್ರವಾಸಿಗರ ಮೇಲೆ ನಡೆದ ದಾಳಿ ಖಂಡನೀಯವಾಗಿದ್ದು, ಇಂತಹ ಘಟನೆ ಮರುಕಳಿಸದಂತೆ ಕೇಂದ್ರ ಸರ್ಕಾರ ಎಚ್ಚರಿಕೆವಹಿಸಬೇಕು.
ಉಗ್ರರಿಗೆ ಶಿಕ್ಷೆಯಾಗಲಿ, ಕಾಶ್ಮೀರದಲ್ಲಿ ಶಾಂತಿ ನೆಲೆಸಲಿ ಎಂದರು.
ನಗರಸಭೆ ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಡಾ.ಕೆ.ವೆಂಕಟೇಶಬಾಬು, ಸದಸ್ಯ ಆನಂದ ಹಾಸಲ್ಕರ್, ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳಾದ ನೆಹರ್‌ಸಾಬ್, ಜೆ.ರವಿನಾಯಕ, ಮಲ್ಲಿಕಾರ್ಜುನ ತಟ್ಟಿ, ಸನ್ನಿಕ್, ರಾಚಪ್ಪ ಗುಂಜಳ್ಳಿ, ರಾಮುಕಿರಿಕಿರಿ, ಹೊನ್ನಪ್ಪ ನಾಯಕ ಇತರರಿದ್ದರು.
ಸರ್ವೇಶ ಸಭಾಂಗಣ: ಮೃತ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ನಗರದ ಸರ್ವೇಶ ಸಭಾಂಗಣದಲ್ಲಿ ಕಾಂಗ್ರೆಸ್ ಎಚ್‌ಆರ್‌ಜಿ ಬಣದಿಂದ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.
ರಾಜ್ಯದ ಮೃತ ಪ್ರವಾಸಿಗರ ಭಾವಚಿತ್ರಕ್ಕೆ ದೀಪಪ್ರಜ್ವಂಲನದೊಂದಿಗೆ ನಮನ ಸಲ್ಲಿಸಿದ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಮತ್ತು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮಾತನಾಡಿ, ಉಗ್ರರ ಉಪಟಳಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕಿದ್ದು, ಅಮಾನವೀಯ ಕೃತ್ಯವನ್ನು ಪ್ರತಿಯೊಬ್ಬರೂ ಖಂಡಿಸಲೇಬೇಕು ಎಂದರು. ಪಕ್ಷದ ಮುಖಂಡರಾದ ಮಾಂತಗೊಂಡ ಸುರೇಶ, ಸುರೇಶ ಗೌರಪ್ಪ, ರಮೇಶ ಗೌಳಿ, ಅಮ್ಜದ್ ಖಾನ್, ಹನುಮಂತರಾಯ, ವೀರನಗೌಡ, ಅಯೂಬ್ ಖಾನ್ ಇತರರಿದ್ದರು.