ಗುಂಡ್ಲುಪೇಟೆ: ತಾಲೂಕಿನ ಮಾದಾಪಟ್ಟಣ ಗೇಟ್ ಸಮೀಪ ಸೋಮವಾರ ರಸ್ತೆಗೆ ಅಡ್ದಲಾಗಿ ಬಂದ ಬೈಕ್‌ಗೆ ಡಿಕ್ಕಿ ಹೊಡೆಯುವುದು ತಪ್ಪಿಸಲು ಹೋಗಿ ರಸ್ತೆ ಬದಿಗೆ ಉರುಳಿದ ಪರಿಣಾಮ ಕಾರು ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ನಯನಾ ಅವರು ತಮ್ಮ ಕಾರಿನಲ್ಲಿ ಮೈಸೂರಿನತ್ತ ಹೋಗುವಾಗ ಗೇಟ್ ಸಮೀಪ ನಾಯಿ ಅಡ್ಡ ಬಂದಿದ್ದರಿಂದ ಬಲಕ್ಕೆ ತಿರುಗಿಸಿದ್ದಾರೆ. ಈ ವೇಳೆ ಅನಂತ್ ನಾಗೇಶ್ ಅವರ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ಕಾರು ರಸ್ತೆಯ ಬದಿಗೆ ಉರುಳಿಬಿದ್ದು ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ ಎಂದು ಬೇಗೂರು ಠಾಣೆಯ ಪೊಲೀಸರು ತಿಳಿಸಿದ್ದಾರೆ.