ಅಪಘಾತದಲ್ಲಿ ಹಳ್ಳಕ್ಕೆ ಬಿದ್ದ ಕಾರು

ಮಡಿಕೇರಿ: ಮಡಿಕೇರಿಯಲ್ಲಿ ಶುಕ್ರವಾರ ಮಾರುತಿ 800 ಹಾಗೂ ಆಲ್ಟೊ ನಡುವೆ ಡಿಕ್ಕಿ ಸಂಭವಿಸಿ ಆಲ್ಟೊ ಕಾರು ರಸ್ತೆ ಬದಿಯ ಗುಂಡಿಗೆ ಮಗುಚಿ ಬಿದ್ದಿದೆ.

ಉಕ್ಕುಡ ನಿವಾಸಿ ಭರತ್ ಎಂಬುವರು ಮಾರುತಿ 800 ಕಾರಿನಲ್ಲಿ ವಿಜಯವಿನಾಯಕ ಗ್ಯಾಸ್ ಏಜೆನ್ಸಿಯಿಂದ ಗ್ಯಾಸ್ ಸಿಲಿಂಡರ್ ತೆಗೆದುಕೊಂಡು ಮೈಥ್ರಿ ಮಾರ್ಗವಾಗಿ ಸಾಯಿ ಮೈದಾನದ ಕಡೆಗೆ ತೆರಳುತ್ತಿದ್ದರು. ಈ ಸಂದರ್ಭ ಎಸ್‌ಪಿ ಕಚೇರಿ ಹಿಂಭಾಗದ ರಸ್ತೆಯಿಂದ ಬಂದ ಆಲ್ಟೊ ಕಾರು ಮಾರುತಿ 800ಗೆ ಡಿಕ್ಕಿಯಾಗಿ ರಸ್ತೆ ಕೆಳಭಾಗದ ಕನ್ನಿಕಾ ಲೇಔಟ್ ಗುಂಡಿಗೆ ಉರುಳಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರುತಿ 800 ಕಾರು ಜಖಂಗೊಂಡಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಸ್ಥಳಕ್ಕೆ ನಗರ ಸಂಚಾರ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *