ಮುಧೋಳ: ಬಸ್ ಚಾಲನೆ ವೇಳೆ ಚಾಲಕನಿಗೆ ತಲೆಸುತ್ತು ಬಂದ ಕಾರಣ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ರಸ್ತೆ ಬದಿಯ ರೈತರ ತೋಟಕ್ಕೆ ನುಗ್ಗಿದ ಘಟನೆ ಭಾನುವಾರ ಶಿರೋಳದ ಬಳಿ ನಡೆದಿದೆ.
ವಿಜಯಪುರ- ಅಂಕೋಲಾ ಬಸ್ ಜಮಖಂಡಿಯಿಂದ ಮುಧೋಳಕ್ಕೆ ಆಗಮಿಸುತ್ತಿದ್ದಂತೆ ಶಿರೋಳ ಗ್ರಾಮದ ಬಳಿ ಚಾಲಕನಿಗೆ ತಲೆ ಸುತ್ತು ಬಂದಿದೆ. ಕೂಡಲೇ ಚಾಲಕ ಬಸ್‌ನ್ನು ಹೊಲಕ್ಕೆ ನುಗ್ಗಿಸಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ತಲೆಸುತ್ತು ಬಂದರೂ ಚಾಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಪ್ರಯಾಣಿಕರಿಗೆ ಬದಲಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.