ಪಾಕ್ ಕಲಾವಿದರಿಗೆ ಬಹಿಷ್ಕಾರ ಅನಿವಾರ್ಯ

Latest News

ಅಸಲಿ ಪೊಲೀಸರಿಗೆ ಸೆರೆಸಿಕ್ಕ ನಕಲಿ ಅಧಿಕಾರಿ: ಉದ್ಯಮಿಗೆ ಬೆದರಿಸಿ 24 ಲಕ್ಷ ರೂ. ಸುಲಿಗೆ, ಸಿಸಿಬಿ ಪೊಲೀಸರಿಂದ ಆರೋಪಿ ಬಂಧನ

ಬೆಂಗಳೂರು: ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿ ಸೋಗಿನಲ್ಲಿ ಉದ್ಯಮಿಗೆ ಬೆದರಿಸಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಚ್​ಎಎಲ್...

ಯುವಕನ ಕೊಲೆ ಮಾಡಿದ್ದ ದಂಪತಿ ಬೆಳಗಾವಿಯಲ್ಲಿ ಸೆರೆ

ಆನೇಕಲ್: ಖಾಸಗಿ ಸಂಸ್ಥೆಯ ಉದ್ಯೋಗಿ ಭದ್ರಾವತಿಯ ಕಿರಣ್ ಕುಮಾರ್ (25) ಕೊಲೆ ಪ್ರಕರಣ ಭೇದಿಸಿರುವ ಜಿಗಣಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ದಾವಣಗೆರೆಯ ಸುರೇಖಾ (38)...

ತನ್ನದಲ್ಲದ ತಪ್ಪಿಗೆ ದಂಡ ಕಟ್ಟಿದ ಟೆಕ್ಕಿ: ನಕಲಿ ನಂಬರ್ ಪ್ಲೇಟ್ ಅಳವಡಿಸಿ 4 ವರ್ಷ ಕಾರು ಓಡಿಸಿದ್ದ, ಆರ್​ಟಿಒ ವಶದಲ್ಲಿ ಉದ್ಯಮಿ

ಬೆಂಗಳೂರು: ಪರಿಚಿತರೊಬ್ಬರ ಬೆನ್ಜ್ ಕಾರಿನ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು 7 ವರ್ಷಗಳಿಂದ 27 ಲಕ್ಷ ರೂ. ತೆರಿಗೆ ವಂಚಿಸಿ ಓಡಾಡುತ್ತಿದ್ದ ಮರ್ಸಿಡೀಸ್...

ಅಕ್ರಮ ಸಂಪತ್ತಿಗೆ ಅಧಿಕಾರಿಗಳ ಕಾವಲು

| ರಮೇಶ ದೊಡ್ಡಪುರ ಬೆಂಗಳೂರು ನಗರ ಪ್ರದೇಶದಲ್ಲಿ ವಸತಿ, ವಾಣಿಜ್ಯ ಪ್ರದೇಶಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ರಚಿಸಲಾಗಿರುವ ಕಾನೂನು ಪಾಲಿಸಿ ಅಕ್ರಮ ಕಟ್ಟಡಗಳಿಗೆ ಬ್ರೇಕ್ ಹಾಕಬೇಕಾದ...

ಪೊಲೀಸ್ ಠಾಣೆಗಳಲ್ಲಿ ದಲಿತರ ದಿನ ಆಚರಣೆ ಕಡ್ಡಾಯ: ಪ್ರತಿ ತಿಂಗಳ 2ನೇ ಭಾನುವಾರ ಕಡ್ಡಾಯ, ನಿಯಮ ಪಾಲಿಸದ ಅಧಿಕಾರಿಗಳ ವಿರುದ್ಧ ಇಲಾಖೆ ಗರಂ

| ಕೀರ್ತಿನಾರಾಯಣ ಸಿ. ಬೆಂಗಳೂರು ದಲಿತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳ 2ನೇ ಭಾನುವಾರ ‘ದಲಿತರ...

ಬೆಂಗಳೂರು: ಕಲೆಗೆ ಯಾವುದೇ ಗಡಿಯಿಲ್ಲ. ಆದರೂ ದೇಶದ ಭದ್ರತೆಯ ಹಿತದೃಷ್ಟಿಯಿಂದ ಪಾಕಿಸ್ತಾನದ ಕಲಾವಿದರಿಗೆ ಬಹಿಷ್ಕಾರ ಹೇರುವುದು ಅನಿವಾರ್ಯ ಎಂದು ಬಾಲಿವುಡ್ ನಿರ್ದೇಶಕ ರಾಹುಲ್ ರವೈಲ್ ಹೇಳಿದ್ದಾರೆ.

ರಾಜಾಜಿನಗರದ ಒರಾಯನ್ ಮಾಲ್​ನಲ್ಲಿ ನಡೆಯುತ್ತಿರುವ 11ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಅಭಿಪ್ರಾಯ ಹಂಚಿಕೊಂಡರು. ಜಮ್ಮ- ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಪ್ರೇರಿತ ಉಗ್ರರ ಕೃತ್ಯ ಖಂಡನೀಯ. ಕಲಾವಿದರಿಂದ ದೇಶಕ್ಕೆ ಯಾವುದೇ ಹಾನಿಯಾಗದಿದ್ದರೂ ಕಲೆಗೆ ಸಹ ಗಡಿಯ ಎಲ್ಲೆ ನಿರ್ವಿುಸುವ ಪರಿಸ್ಥಿತಿಯನ್ನು ಪಾಕಿಸ್ತಾನ ನಿರ್ಮಾಣ ಮಾಡಿದೆ. ಹೀಗಾಗಿ ಪಾಕ್ ಕಲಾವಿದರನ್ನು ಸಂಪೂರ್ಣವಾಗಿ ಭಾರತೀಯ ಚಿತ್ರಗಳಲ್ಲಿ ಬಹಿಷ್ಕರಿಸುವ ಮೂಲಕ ಉಗ್ರರ ದಾಳಿ ಖಂಡಿಸಲಿದ್ದೇವೆ. ನಮಗೆ ದೇಶ ಮೊದಲು. ಆಮೇಲೆ ಕಲೆ ಹಾಗೂ ಕಲಾವಿದರು ಎಂದರು.

ಪ್ರಾದೇಶಿಕ ಚಿತ್ರಗಳ ಪ್ರಾಬಲ್ಯ: ಕನ್ನಡದ ಕೆಜಿಎಫ್ ಸೇರಿ ಪ್ರಾದೇಶಿಕ ಭಾಷೆಯ ಸಿನಿಮಾಗಳು ಬಾಲಿವುಡ್ ಚಿತ್ರಗಳಿಗೆ ಸೆಡ್ಡು ಹೊಡೆಯಲು ಆರಂಭಿಸಿವೆ. ಕಥಾವಸ್ತು, ನಿರೂಪಣೆಯಲ್ಲಿ ಹೊಸತನ ಕಾಣುತ್ತಿದ್ದೇವೆ. ಕಲಾತ್ಮಕ ಚಿತ್ರಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಭವಿಷ್ಯದಲ್ಲಿ ಹಿಂದಿ ಸಿನಿಮಾಕ್ಕೆ ಉತ್ತಮ ಸ್ಪರ್ಧೆ ಎದುರಾಗುವುದರಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಹಿಂದಿ ಸಿನಿಮಾ ಕರ್ತೃಗಳು ಎಚ್ಚೆತ್ತುಕೊಂಡು ಇನ್ನಷ್ಟು ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳಬೇಕು. ಉಳಿದಂತೆ ‘ರಾಜಿ’, ‘ಉರಿ’ಯಂತಹ ಸಿನಿಮಾ ಭಾರತೀಯ ಚಿತ್ರೋದ್ಯಮದ ದಿಕ್ಕನ್ನೇ ಬದಲಿಸುತ್ತಿವೆ ಎಂದು ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ. ನಾಗತಿಹಳ್ಳಿ ಚಂದ್ರಶೇಖರ್, ಉತ್ಸವದ ಕಲಾ ನಿರ್ದೇಶಕ ಎನ್. ವಿದ್ಯಾಶಂಕರ್ ಉಪಸ್ಥಿತರಿದ್ದರು.

ಹೂವಿಗೋಸ್ಕರ ಶೂಟಿಂಗ್ ಸ್ಥಗಿತ!

ತಂದೆ ಚಿತ್ರೋದ್ಯಮದಲ್ಲಿದ್ದರೂ ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯಲಿಲ್ಲ. ರಾಜ್​ಕಪೂರ್ ನನ್ನ ಪಾಲಿಗೆ ಮೆಂಟರ್ ಆಗಿದ್ದರು. ಅವರೊಂದಿಗಿನ ಒಡನಾಟವನ್ನು ಮರೆಯಲು ಸಾಧ್ಯವಿಲ್ಲ. ಬೆಂಗಳೂರಿನ ಆಹಾರ ಅವರಿಗೆ ತುಂಬ ಇಷ್ಟವಾಗುತ್ತಿತ್ತು. ಚಿತ್ರದ ಪ್ರತಿ ದೃಶ್ಯಕ್ಕೂ ಮಹತ್ವ ನೀಡುತ್ತಿದ್ದರು. ‘ಬಾಬಿ’ ಚಿತ್ರದ ‘ಹಮ್ ತುಮ್ ಏಕ್ ಕಮರೆ ಮೇ ಬಂದ್ ಹೋ…’ ಗೀತೆಯ ಶೂಟಿಂಗ್​ಗೆ ಜಮ್ಮು- ಕಾಶ್ಮೀರದ ಗುಲ್ಮಾರ್ಗ್​ನಲ್ಲಿ ಸೆಟ್ ಹಾಕಲಾಗಿತ್ತು. ಸಾಕಷ್ಟು ತಾಲೀಮು ನಡೆಸಿ, ಸ್ಥಳಕ್ಕೆ ಮೇಕಪ್ ಮಾಡಿಕೊಂಡು ರಿಷಿಕಪೂರ್ ಆಗಮಿಸಿದರು. ಆದರೆ, ಏನೋ ಕೊರತೆಯಿದೆ. ಸ್ವಲ್ಪ ಸಮಯ ನೀಡಿ ಆಲೋಚಿಸಿ ಹೇಳುತ್ತೇನೆ ಎಂದು ರಾಜ್​ಕಪೂರ್ ಶೂಟಿಂಗ್ ಸ್ಥಗಿತಗೊಳಿಸಿದರು. 200 ಮಂದಿ ಒಳಗೊಂಡ ತಂಡ ಚಿಂತಾಜನಕವಾಗಿ ಕುಳಿತುಕೊಂಡಿತು. ಈ ದೃಶ್ಯಕ್ಕೆ ಬಣ್ಣದ ಕೊರತೆ ಎದುರಾಗಿದೆ. ಹೂವುಗಳನ್ನು ತರಬೇಕು ಎಂದು ಸೂಚಿಸಿದರು. ಆದರೆ, ಗುಲ್ಮಾರ್ಗ್​ನಲ್ಲಿ ಅಷ್ಟೊಂದು ಹೂವು ಲಭ್ಯವಿರಲಿಲ್ಲ. ಅಂತಿಮವಾಗಿ ಶ್ರೀನಗರಕ್ಕೆ ಹೋಗಿ ಹೂವನ್ನು ತಂದು ಶೂಟಿಂಗ್ ಮಾಡಲಾಯಿತು ಎಂದು ಘಟನೆಯೊಂದನ್ನು ರಾಹುಲ್ ರವೈಲ್ ನೆನಪಿಸಿಕೊಂಡರು.

20 ಸಾವಿರ ಮಂದಿ ಭೇಟಿ!

ರಾಜಾಜಿನಗರದ ಒರಾಯಲ್ ಮಾಲ್​ನಲ್ಲಿ ನಡೆಯುತ್ತಿರುವ 11ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ವಿವಿಧ ಭಾಷಿಕರನ್ನು ಒಂದೇ ಸೂರಿನಡಿ ತರಲು ಯಶಸ್ವಿಯಾಗಿದೆ. ಶುಕ್ರವಾರ ಅಂದಾಜು 20 ಸಾವಿರ ಮಂದಿ ಸಿನಿಮಾ ವೀಕ್ಷಿಸಿದರು. ಶನಿವಾರ ಚಲಚಿತ್ರೋತ್ಸವಕ್ಕೆ ಅಧಿಕೃತವಾಗಿ ಚಾಲನೆ ದೊರೆತರೂ ಸಾರ್ವಜನಿಕರಿಗೆ ಚಿತ್ರ ವೀಕ್ಷಣೆಗೆ ಪಿವಿಆರ್ ಸಿನಿಮಾದ 11 ಸ್ಕ್ರೀನ್​ಗಳು ಶುಕ್ರವಾರ ತೆರೆದುಕೊಂಡವು. ಕನ್ನಡದ ‘ಏಳು ಸುತ್ತಿನ ಕೋಟೆ’ ಹಾಗೂ ‘ಅನಂತು ವರ್ಸಸ್ ನಸ್ರತ್’ ಸೇರಿ ವಿವಿಧ ಭಾಷೆಯ ಒಟ್ಟು 50 ಚಿತ್ರಗಳು ಪ್ರದರ್ಶನ ಕಂಡವು. ಬೆಳಗ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾದರೂ ಮಧ್ಯಾಹ್ನದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆಗಮಿಸಿದರು. ಇದರಲ್ಲಿ ಬಹು ತೇಕರು ಯುವಕ-ಯುವತಿಯರೇ ಆಗಿದ್ದರು. ಕನ್ನಡ ಚಿತ್ರರಂಗದ ಗಣ್ಯರು ಮಾತ್ರ ಕಾಣಿಸಿಕೊಳ್ಳದಿರುವುದು ಸಿನಿರಸಿಕರ ನಿರಾಸೆಗೆ ಕಾರಣವಾಯಿತು.

ಯಶ್ ನಾಯಕತ್ವದ ‘ಕೆಜಿಎಫ್- ಚಾಪ್ಟರ್ ಒನ್’ ನೋಡಿದ್ದೇನೆ. ಇಡೀ ಚಿತ್ರದ ಛಾಯಾಗ್ರಹಣ ಇಷ್ಟವಾಯಿತು. ತಾಂತ್ರಿಕ ವೈಭವ ಅದರಲ್ಲಿ ಎದ್ದುಕಾಣುತ್ತದೆ. ಆದರೆ, ಪುಟ್ಟಣ್ಣ ಕಣಗಾಲ್ ನನ್ನ ನೆಚ್ಚಿನ ನಿರ್ದೇಶಕರಲ್ಲೊಬ್ಬರು. ಅವರ ಪರಂಪರೆಯನ್ನು ಮುಂದುವರಿಸುವ ಮತ್ತಷ್ಟು ನಿರ್ದೇಶಕರು ಕನ್ನಡದಲ್ಲಿ ಬರಬೇಕಿದೆ.

| ರಾಹುಲ್ ರವೈತ್ ಬಾಲಿವುಡ್ ನಿರ್ದೇಶಕ 

- Advertisement -

Stay connected

278,673FansLike
576FollowersFollow
612,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...