Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ರೈತ ಹುತಾತ್ಮ ದಿನದಂದು ಕೃಷಿಕರಿಂದ ಕರಾಳ ಆಚರಣೆ

Sunday, 22.07.2018, 3:03 AM       No Comments

ನರಗುಂದ/ಗದಗ/ಕೊಪ್ಪಳ: ರೈತ ಹುತಾತ್ಮ ದಿನವನ್ನು ನರಗುಂದ, ನವಲುಗುಂದ, ಗದಗ, ಕೊಪ್ಪಳ ಮುಂತಾದೆಡೆ ಶನಿವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ರೈತರ ಬೇಡಿಕೆಗಳಿಗಾಗಿ ಶಕ್ತಿಪ್ರದರ್ಶನ, ಕರಾಳ ದಿನಾಚರಣೆ ಸೇರಿ ವಿವಿಧ ರೀತಿಯಲ್ಲಿ ಆಗ್ರಹ, ಪ್ರತಿಭಟನೆಗಳೂ ಜರುಗಿದವು.

ರೈತ ಮುಖಂಡ ದಿ. ವೀರಪ್ಪ ಕಡ್ಲಿಕೊಪ್ಪ ಅವರ 38ನೇ ಹುತಾತ್ಮ ದಿನವನ್ನು ನರಗುಂದದಲ್ಲಿ ಶನಿವಾರ ವಿವಿಧ ರೈತ ಪರ ಸಂಘಟನೆಗಳ ನೇತೃತ್ವದಲ್ಲಿ ಕಪ್ಪುಪಟ್ಟಿ ಧರಿಸಿ ಕರಾಳ ದಿನವಾಗಿ ಆಚರಿಸಲಾಯಿತು. ಒಂದೆಡೆ ವೀರೇಶ ಸೊಬರದಮಠ, ಇನ್ನೊಂದೆಡೆ ಶಂಕ್ರಪ್ಪ ಅಂಬಲಿ ಸಂಚಾಲಕತ್ವದ ಮಹದಾಯಿಗಾಗಿ ಮಹಾವೇದಿಕೆ, ಸಹ್ಯಾದ್ರಿ ಜಲಜನ ಸೊಸೈಟಿಯಿಂದ ಪ್ರತ್ಯೇಕ ವೇದಿಕೆಯಲ್ಲಿ ಹೋರಾಟ ನಡೆದು ಶಕ್ತಿ ಪ್ರದರ್ಶನದಂತೆ ಭಾಸವಾಯಿತು. ಮಹದಾಯಿ ಮಹಾವೇದಿಕೆ ಕಾರ್ಯಕರ್ತರು ಪಟ್ಟಣದ ಪುರಸಭೆ ಬಾಬಾಸಾಹೇಬ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಮೂಲಕ ವೀರಗಲ್ಲಿಗೆ ಆಗಮಿಸಿದರು. ನಂತರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಪ್ರತ್ಯೇಕ ವೇದಿಕೆಗೆ ತೆರಳಿದರು.

ಕುಡಿಯುವ ನೀರಿಗಾಗಿ ರೈತರು ದಯಾಮರಣ ಕೇಳುವಷ್ಟರ ಮಟ್ಟಿಗೆ ತಲುಪಿದರೂ ಸರ್ಕಾರಗಳಿಗೆ ಕರುಣೆ ಇಲ್ಲ. ಮುಂದಿನ ತಿಂಗಳು ನ್ಯಾಯಾಧಿಕರಣ ತೀರ್ಪು ಬರಲಿದೆ. ರೈತರು ಆತ್ಮಹತ್ಯೆ ನಿರ್ಧಾರ ಕೈಗೊಳ್ಳಬಾರದು ಎಂದು ಕೂಡಲಸಂಗಮ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ರಾಷ್ಟ್ರಪತಿ ಅವರ ಗಮನ ಸೆಳೆಯಲು ರೈತರಿಂದ ದಯಾಮರಣಕ್ಕೆ ಅರ್ಜಿ ಸಲ್ಲಿಸಲಾಗಿದೆ. ಮಹದಾಯಿ ನೀರು ಬರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ವೀರೇಶ ಸೊಬರದಮಠ ಹೇಳಿದರು.

ರೈತರ ಸಂಪೂರ್ಣ ಸಾಲ ಮನ್ನಾಗೆ ಆಗ್ರಹ

ಕೊಪ್ಪಳ: ಕೊಪ್ಪಳದ ಹಿಟ್ನಾಳ ಬಳಿ ನಡೆದ ರೈತ ಹುತಾತ್ಮ ದಿನಾಚರಣೆ ವೇಳೆ ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಸಿ ಪ್ರತಿಭಟಿಸಲಾಯಿತು. ಆ ಮೂಲಕ ಸಂಪೂರ್ಣ ಸಾಲಮನ್ನಾ ಮಾಡುವಂತೆ ಆಗ್ರಹಿಸಲಾಯಿತು. ಮಂಡ್ಯ, ತುಮಕೂರು, ಹಾವೇರಿ, ರಾಯಚೂರು, ಬಳ್ಳಾರಿ ಸೇರಿ 26 ಜಿಲ್ಲೆಗಳಿಂದ ಬಂದಿದ್ದ ರೈತರು ಇದರಲ್ಲಿ ಭಾಗವಹಿಸಿದ್ದರು. ರೈತರ ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ, ಆ.15ರಂದು ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ಆಚರಣೆ ಸೇರಿ 11 ಪ್ರಮುಖ ನಿರ್ಣಯಗಳನ್ನು ಕೈಗೊಂಡು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಗದಗ ಜಿಲ್ಲೆ ನವಲಗುಂದದಲ್ಲೂ ರೈತ ಹುತಾತ್ಮ ದಿನಾಚರಣೆ ನಡೆದಿದ್ದು ಮಹದಾಯಿ-ಮಲಪ್ರಭಾ, ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಲು ಆಗ್ರಹಿಸಿಲಾಯಿತು. ನೂರಾರು ರೈತರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜನಪ್ರತಿನಿಧಿಗಳ ವಿರುದ್ಧ ಘೊಷಣೆ ಕೂಗಿದರು.

ಕಳಸಾ-ಬಂಡೂರಿ, ಮಹದಾಯಿ ಯೋಜನೆ ಜಾರಿಗೆ ಹೋರಾಡಿದವರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಬೇಕು ಹಾಗೂ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ 25ಕ್ಕೂ ಹೆಚ್ಚು ಪದಾಧಿಕಾರಿಗಳು ಶನಿವಾರ ಗದಗದಲ್ಲಿ ದೀಡ್ ನಮಸ್ಕಾರ ಹಾಕಿ ಪ್ರತಿಭಟಿಸಿದರು.

Leave a Reply

Your email address will not be published. Required fields are marked *

Back To Top