ಭೋಪಾಲ್​ನಲ್ಲಿ ಸಾಧ್ವಿ ಪರ ಅಲೆ: ಈವರೆಗಿನ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡ ಪ್ರಜ್ಞಾ

ನವದೆಹಲಿ: ಇಲ್ಲಿಯವರೆಗಿನ ಮತ ಎಣಿಕೆಯಲ್ಲಿ ಭೋಪಾಲ್​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್​ ಠಾಕೂರ್​ ತನ್ನ ಪ್ರತಿಸ್ಪರ್ಧಿ ದಿಗ್ವಿಜಯ ಸಿಂಗ್​ ವಿರುದ್ಧ ಸುಮಾರು 3,105 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ದಿಗ್ವಿಜಯ್​ ಸಿಂಗ್​ ವಿರುದ್ಧ ಬಿಜೆಪಿ ಆಶ್ಚರ್ಯಕರ ರೀತಿಯಲ್ಲಿ ಪ್ರಜ್ಞಾ ಸಿಂಗ್​ ಅವರನ್ನು ಕಣಕ್ಕಿಳಿಸಿದೆ. 2008ರ ಮಾಲೇಗಾಂವ್​ ಸ್ಫೋಟದ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದು ಸದ್ಯ ಜಾಮೀನು ಪಡೆದು ಹೊರಗೆ ಬಂದಿದ್ದಾರೆ.

ಪ್ರಚಾರದ ವೇಳೆ ತುಂಬ ವಿವಾದಾತ್ಮಕ ಹೇಳಿಕೆ ನೀಡಿ ತನ್ನ ಪಕ್ಷ ಎಚ್ಚರಿಕೆ ಕೊಟ್ಟ ಬಳಿಕ ಸಾಧ್ವಿ ಮೌನವ್ರತಕ್ಕೆ ಜಾರಿದ್ದರು.

Leave a Reply

Your email address will not be published. Required fields are marked *