ವಿಜಯವಾಣಿ ಸುದ್ದಿಜಾಲ ಹುಲಸೂರು
ತಾಲೂಕಿನ ವಿವಿಧೆಡೆ ಭಾನುವಾರ ಬಿಜೆಪಿ ಅಭ್ಯಥರ್ಿ ಭಗವಂತ ಖೂಬಾ ಪರವಾಗಿ ಸ್ಥಳೀಯ ಮುಖಂಡರಿಂದ ಪ್ರಚಾರ ನಡೆಯಿತು. ಗುತ್ತಿ, ಮಿರಖಲ್, ಕೊಟಮಾಳ, ಗಡಿಗೌಂಡಗಾಂವ, ತೊಗಲೂರ, ಹಾಲಹಳ್ಳಿ, ಸೋಲದಾಬಕಾ, ಹುಲಸೂರಗಳಲ್ಲಿ ಬೂತ್ ಕಮಿಟಿ ರಚನೆ ಹಾಗೂ ಪ್ರಚಾರ ಸಭೆಗಳು ನಡೆದವು.
ಜಿಪಂ ಮಾಜಿ ಅಧ್ಯಕ್ಷ, ಬಿಜೆಪಿ ಜಿಲ್ಲಾ ಕಾರ್ಯದಶರ್ಿ ಅನೀಲ ಭೂಸಾರೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಕರ್ಾರದ 5 ವರ್ಷದ ಅವಧಿಯಲ್ಲಿ ಒಂದು ಸಣ್ಣ ಹಗರಣ ಸಹ ನಡೆದಿಲ್ಲ. ಪಾರದರ್ಶಕ ಆಡಳಿತ ಜತೆಗೆ ದೇಶದ ಅಭಿವೃದ್ಧಿಗೆ ಅದ್ಯತೆ ನೀಡಲಾಗಿದೆ. ದೇಶದ ಗೌರವ ವಿಶ್ವದಲ್ಲಿ ಹೆಚ್ಚುವಂತೆ ಮೋದಿ ಮಾಡಿದ್ದಾರೆ. ಮತ್ತೆ ಮೋದಿ ಅವರನ್ನು ಪ್ರಧಾನಿ ಮಾಡಲು ಎಲ್ಲರೂ ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.
ಸುಳ್ಳು ಅಶ್ವಾಸನೆ ನೀಡಿ ಚುನಾವಣೆ ನಡೆಸುವುದು ಕಾಂಗ್ರೆಸ್ ಅಭ್ಯರ್ಥಿಯಾದ ಶಾಸಕ ಈಶ್ವರ ಖಂಡ್ರೆಗೆ ಕರಗತವಾಗಿದೆ. ಜಿಲ್ಲೆಯಲ್ಲಿ ಮರಾಠಾ ಸಮಾಜಕ್ಕೆ ಖಂಡ್ರೆ ಅನ್ಯಾಯ ಮಾಡಿದ್ದಾರೆ. ಜಿಪಂ ಉಪಾಧ್ಯಕ್ಷರಾಗಿದ್ದ ಪ್ರಕಾಶ ಪಾಟೀಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಸಮಾಜದ ಜನರು ಜಾಗೃತವಾಗಬೇಕಾದ ಅಗತ್ಯವಿದೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೂರ್ಯಕಾಂತ ಚಿಲ್ಲಾಬಟ್ಟೆ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿಗಾಗಿ ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಬೇಕಾಗಿದೆ. ಸರಳ, ಸದಾ ಜನರೊಂದಿಗೆ ಬೆರೆಯುವ ಬಿಜೆಪಿ ಅಭ್ಯಥರ್ಿ ಖೂಬಾ ಅವರಿಗೆ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕಿದೆ. ಎಲ್ಲರೂ ಇದಕ್ಕಾಗಿ ಹಗಲಿರುಳು ದುಡಿಯೋಣ ಎಂದು ಹೇಳಿದರು.
ಸ್ಲಂ ಮೋರ್ಚಾದ ಜಿಲ್ಲಾಧ್ಯಕ್ಷ ಅರವಿಂದ ಮುತ್ತೆ, ರಮೇಶ ಧಬಾಲೆ, ಹುಲಸೂರು ಶಕ್ತಿ ಕೇಂದ್ರ ಅಧ್ಯಕ್ಷ ಸಂಗಮೇಶ ಭೋಪಳೆ, ಮುಖಂಡರಾದ ಬಸವರಾಜ ಡೋಣಗಾಂವಕರ್, ಅರವಿಂದ ಹರಪಲ್ಲೆ, ಶಿವಾಜಿ ಪಾಟೀಲ್, ಕಲ್ಯಾಣರಾವ ಸೂರ್ಯವಂಶಿ, ಅಜರ್ುನ ಲಂಬೆ, ಪ್ರದೀಪ ಗುತ್ತಿ, ಆನಂದರಾವ ಸೂರ್ಯವಂಶಿ ಇದ್ದರು.