ಬಿಜೆಪಿಗೆ ಗೆಲುವಿನ ಭರವಸೆ: ಇಂದು ಸಂಜೆ ದೆಹಲಿ ಕಚೇರಿಯಲ್ಲಿ ನರೇಂದ್ರ ಮೋದಿಗೆ ಭರ್ಜರಿ ಸ್ವಾಗತ

ನವದೆಹಲಿ: ಚುನಾವಣೆ ಮುಗಿಯುತ್ತಿದ್ದಂತೆ ಹೊರಬಿದ್ದ ಎಕ್ಸಿಟ್​ ಪೋಲ್​ಗಳೆಲ್ಲ ಹೇಗೆ ಎನ್​ಡಿಎ ಪರವಾಗಿ ಇದ್ದವೋ ಹಾಗೇ ಮತ ಎಣಿಕೆ ಶುರುವಾದಾಗಿನಿಂದ ಫಲಿತಾಂಶವೂ ಎನ್​ಡಿಎ ಪರವಾಗಿಯೇ ಮುನ್ನಡೆ ತೋರಿಸುತ್ತಿವೆ.

ಬಿಜೆಪಿಗೆ ಈಗಾಗಲೇ ತಾನು ಭಾರಿ ಬಹುಮತದಿಂದ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ ಮೂಡಿದ್ದು ಇಂದು ಸಂಜೆ ದೆಹಲಿಯ ಪಕ್ಷದ ಮುಖ್ಯಕಚೇರಿಯಲ್ಲಿ ನರೇಂದ್ರ ಮೋದಿಯವರಿಗೆ ಭರ್ಜರಿ ಸ್ವಾಗತ ಕೋರಲು ಪಕ್ಷದ ಮುಖಂಡರು ನಿರ್ಧರಿಸಿದ್ದಾರೆ. ಈ ಸಮಾರಂಭಕ್ಕೆ 20,000 ಕಾರ್ಯಕರ್ತರಿಗೆ ಆಮಂತ್ರಣ ನೀಡಲಾಗಿದೆ.
ದೇಶಾದ್ಯಂತ ಗೆಲ್ಲುವ ಬಿಜೆಪಿ ಅಭ್ಯರ್ಥಿಗಳು ಮೇ 25ಕ್ಕೆ ದೆಹಲಿಯನ್ನು ತಲುಪಲಿದ್ದಾರೆ.

ಅನೇಕ ಕ್ಷೇತ್ರಗಳಲ್ಲಿ ಈಗಾಗಲೇ ಬಿಜೆಪಿ ಅಭ್ಯರ್ಥಿಗಳು ಗೆಲುವಿನೆಡೆಗೆ ನಾಗಾಲೋಟದಲ್ಲಿದ್ದಾರೆ.