26.8 C
Bangalore
Friday, December 13, 2019

ಬಿಐಎಸ್ ವರದಿ ಆತಂಕಕಾರಿ: ಜಲಮಂಡಳಿಗೆ ತಜ್ಞರ ಸಲಹೆ, ಗುಣಮಟ್ಟದ ನೀರಿಗೆ ನಾಗರಿಕರ ಆಗ್ರಹ

Latest News

ಶಬರಿಮಲೆ ವಿಚಾರದಲ್ಲಿ ಸದ್ಯ ಯಾವುದೇ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್​

ನವದೆಹಲಿ: ಪೊಲೀಸ್​ ರಕ್ಷಣೆಯೊಂದಿಗೆ ಶಬರಿಮಲೆ ಅಯ್ಯಪ್ಪನ ಸನ್ನಿಧಿಯನ್ನು ಮಹಿಳೆಯರು ಸುರಕ್ಷಿತವಾಗಿ ಪ್ರವೇಶಿಸಲು ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಇಬ್ಬರು ಮಹಿಳಾ ಕಾರ್ಯಕರ್ತರು ಸಲ್ಲಿಸಿದ್ದ...

ತುಮಕೂರು ಸ್ಮಾರ್ಟ್‌ಸಿಟಿ ಜೆಎಂಡಿ ಎತ್ತಂಗಡಿ!

ತುಮಕೂರು: ಸ್ಮಾರ್ಟ್‌ಸಿಟಿ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್ ಅವರನ್ನು ಎತ್ತಂಗಡಿ ಮಾಡಲಾಗಿದೆ. 3 ತಿಂಗಳ ಹಿಂದೇ ಸ್ಮಾರ್ಟ್‌ಸಿಟಿ ಎಂಡಿ ಜವಾಬ್ದಾರಿ ಹೊಣೆ ಹೊತ್ತಿದ್ದ ಮಹಾನಗರ...

ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಜಾತ್ರೆಗೆ ಸಿಎಂ ಯಡಿಯೂರಪ್ಪ ಚಾಲನೆ

ಚಿಕ್ಕನಾಯಕನಹಳ್ಳಿ: ಸುಕ್ಷೇತ್ರ ಕುಪ್ಪೂರು ಶ್ರೀಮರುಳಸಿದ್ದೇಶ್ವರ ಗದ್ದುಗೆ ಜಾತ್ರೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಗುರುವಾರ ಚಾಲನೆ ನೀಡಿದ್ದು, ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಜಾತ್ರೆಗೆ ಬಂದಿದ್ದರು. ಶ್ರೀಮಠದ ಆವರಣದಲ್ಲಿ ಗುರುವಾರ...

ಬಲರಾಮ್ ಕುಣಿಗಲ್ ಬಿಜೆಪಿ ಅಧ್ಯಕ್ಷ

ಕುಣಿಗಲ್: ತಾಲೂಕು ಬಿಜೆಪಿ ನೂತನ ಅಧ್ಯಕ್ಷರಾಗಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ಬಲರಾಮ್ ಗುರುವಾರ ಅವಿರೋಧ ಆಯ್ಕೆಯಾದರು. ಪಟ್ಟಣದ ದಿಶಾ ಪಾರ್ಟಿ ಹಾಲ್‌ನಲ್ಲಿ ರಾಜ್ಯ ಬಿಜೆಪಿ...

ಭಾರತದ ಪ್ರಗತಿಗೆ ಬೇಕು ವೈಜ್ಞಾನಿಕ ಶಿಕ್ಷಣ: ಡಾ.ಡಿ.ವಿ.ಗೋಪಿನಾಥ್

ದಾವಣಗೆರೆ: ಭಾರತದ ಪ್ರಗತಿಗೆ ವೈಜ್ಞಾನಿಕ ಶಿಕ್ಷಣ ಅತ್ಯವಶ್ಯ ಎಂದು ಮುಂಬೈನ ಭಾಭಾ ಅಣು ಸಂಶೋಧನಾ ಕೇಂದ್ರದ ಜೀವ ವೈದ್ಯಕೀಯ ವಿಭಾಗದ ನಿವೃತ್ತ ನಿರ್ದೇಶಕ ಡಾ.ಡಿ.ವಿ.ಗೋಪಿನಾಥ್ ಹೇಳಿದರು. ಪಾರ್ವತಮ್ಮ...

ಬೆಂಗಳೂರು: ಬೆಂಗಳೂರು ಜಲಮಂಡಳಿ ಸರಬರಾಜು ಮಾಡುತ್ತಿರುವ ಕುಡಿಯುವ ನೀರು ಶುದ್ಧವಲ್ಲ ಎಂಬುದು ಭಾರತೀಯ ಗುಣಮಟ್ಟ ಸಂಸ್ಥೆ (ಬಿಐಎಸ್) ನಡೆಸಿದ ಅಧ್ಯಯನದಲ್ಲಿ ಬಯಲಾಗಿದೆ. ಇದು ಆತಂಕಕಾರಿ ವಿಷಯವಾಗಿದೆ ಎಂದು ಜಲತಜ್ಞ ರಾಜಾರಾವ್ ಹೇಳಿದ್ದಾರೆ.

ನಗರದ ವಿವಿಧೆಡೆ ಸಂಗ್ರಹಿಸಲಾದ 10 ಮಾದರಿಗಳ ಪೈಕಿ ಎಲ್ಲವೂ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂಬುದು ಜಲಮಂಡಳಿಗೆ ಒಂದು ರೀತಿಯ ಎಚ್ಚರಿಕೆಯ ಗಂಟೆ. ಬಿಐಎಸ್ ವರದಿಯನ್ನು ಗಂಭೀರವಾಗಿ ಪರಿಣಿಸಬೇಕು ಎಂದು ವಿಜಯವಾಣಿಗೆ ತಿಳಿಸಿದರು.

ಜಲಮಂಡಳಿ ಅಧಿಕಾರಿಗಳು ಸ್ಯಾಂಪಲ್​ಗಳನ್ನು ಸರಿಯಾಗಿ ವಿಶ್ಲೇಷಣೆ ಮಾಡಿಲ್ಲ. ಜಲಮಂಡಳಿ ಲ್ಯಾಬ್​ಗಳು ರಾಷ್ಟ್ರೀಯ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಮಾನ್ಯತಾ ಮಂಡಳಿಯಿಂದ (ಎನ್​ಎಬಿಎಲ್) ಮಾನ್ಯತೆ ಪಡೆದಿಲ್ಲ. ಅಲ್ಲಿ ಮಾನ್ಯತೆ ಪಡೆದರೆ ಮಾತ್ರ ಸ್ಯಾಂಪಲ್​ಗಳನ್ನು ಸರಿ ಯಾಗಿ ಪರೀಕ್ಷೆ ಮಾಡಬಹುದು. ಸರಿಯಾದ ಉಪಕರಣ, ತಂತ್ರಜ್ಞಾನ ಕೊರತೆ ಇದಕ್ಕೆ ಕಾರಣ ಎಂದು ಹೇಳಿದರು.

ನಿತ್ಯ 250 ಸ್ಯಾಂಪಲ್ಸ್ ನೀಡಬೇಕು: ಜಲಮಂಡಳಿ ಯವರು ಸರಿಯಾಗಿ ಸ್ಯಾಂಪಲ್​ಗಳನ್ನು ಸಂಗ್ರಹಿಸುತ್ತಿಲ್ಲ. ಬೆಂಗಳೂರಿನಂತಹ ಮಹಾನಗರದಲ್ಲಿ ಕನಿಷ್ಠ 200 ರಿಂದ 250 ಸ್ಯಾಂಪಲ್​ಗಳನ್ನು ಕಲೆ ಹಾಕಬೇಕು. ಅದು ಒಂದೇ ಭಾಗದಲ್ಲದೇ ಕಚ್ಛಾ ನೀರು, ತೃತೀಯ ಹಂತದ ಶುದ್ಧೀಕರಿಸಿದ ನೀರು, ಓವರ್ ಹೆಡ್ ಟ್ಯಾಂಕರ್​ಗಳ ನೀರು, ನೀರಿನ ವಿತರಣಾ ಕೇಂದ್ರದಿಂದ ಹಾಗೂ ಮನೆಗಳಿಂದಲ್ಲೂ ಸ್ಯಾಂಪಲ್​ಗಳನ್ನು ಕಲೆಹಾಕಬೇಕು ಎಂದು ರಾಜಾರಾವ್ ತಿಳಿಸಿದರು.

ಸಾರ್ವಜನಿಕರೂ ಮುಂಜಾಗ್ರತೆ ವಹಿಸಿ:

ನೀರು, ನೀರಿನ ಗುಣಮಟ್ಟದ ಬಗ್ಗೆ ಬಿಐಎಸ್​ನವರು ಯಾವ ರೀತಿ ಸ್ಯಾಂಪಲ್​ಗಳನ್ನು ಸಂಗ್ರಹಿಸಿದ್ದಾರೋ ತಿಳಿದಿಲ್ಲ. ಆದರೆ, ಬಿಐಎಸ್ ನೀಡಿರುವ ವರದಿಯಿಂದ ನಗರದ ಜನತೆ ಆತಂಕಕ್ಕೆ ಒಳಗಾಗಿರುವುದು ಸುಳ್ಳಲ್ಲ. ಸಾರ್ವಜನಿಕರೂ ಈ ಬಗ್ಗೆ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದರು.

ಎಚ್ಚರಿಕೆಯ ಗಂಟೆ

ನೀರು , ನೀರಿನ ಗುಣಮಟ್ಟದ ಬಗ್ಗೆ ಸ್ಟ್ಯಾಂಡರ್ಡ್ ಮೆಥಡ್ ಎಂಬ ಪುಸ್ತಕದಲ್ಲಿ ಎಲ್ಲ ಅಂಶಗಳಿವೆ. ಅದರಲ್ಲಿ ಎಲ್ಲ ಮಾಹಿತಿ ಇರುತ್ತದೆ. ಜಲಮಂಡಳಿ ಯವರಾಗಲಿ ಅಥವಾ ಬೇರೊಬ್ಬರಾಗಲಿ ಅದನ್ನು ಪಾಲಿಸುತ್ತಿಲ್ಲ . ಬಿಐಎಸ್ ವರದಿ ಜನರಿಗೆ, ಸರ್ಕಾರಕ್ಕೆ ಹಾಗೂ ಜಲಮಂಡಳಿಗೆ ಒಂದು ಎಚ್ಚರಿಕ ಗಂಟೆ ಎಂದು ರಾಜಾರಾವ್ ಹೇಳಿದ್ದಾರೆ. ಬಿಐಎಸ್ ವರದಿಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಭಯಾನಕ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಆರು ತಿಂಗಳ ಹಿಂದೆಯೇ ಕಾವೇರಿ ನೀರಿನ ಸಂಪರ್ಕ ಪಡೆದಿದ್ದರೂ ಜಲಮಂಡಳಿಯವರು ಸಮರ್ಪಕವಾಗಿ ನೀರು ಸರಬರಾಜು ಮಾಡುತ್ತಿಲ್ಲ. ಈಗ ನೀಡುತ್ತಿರುವ ಬೋರ್​ವೆಲ್ ನೀರೂ ಕುಡಿಯಲು ಯೋಗ್ಯವಿಲ್ಲ. ಸುರಕ್ಷಿತ ನೀರು ಸರಬರಾಜು ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು.

| ಮಂಜುಳಾ ಯಲಹಂಕ ನಿವಾಸಿ

ನೀರು ಸರಬರಾಜು ಪೈಪ್​ಲೈನ್ ಮತ್ತು ಒಳಚರಂಡಿ ಪೈಪ್​ಲೈನ್ ಒಂದೇ ಕಡೆ ಇರುವ ಕಡೆ ಪೈಪ್​ಲೈನ್ ರಿಪೇರಿ ಮಾಡುವಾಗ ಅಥವಾ ಪೈಪ್​ಲೈನ್ ಸರಿಪಡಿಸುವ ವೇಳೆ ಕಲುಷಿತ ನೀರು ಬಂದಿ ರುವುದು ಉಂಟು. ಬೆಂಗಳೂರು ಜಲ ಮಂಡಳಿ ಬಿಡುವ ನೀರು ಕಲುಷಿತವಾಗಿದೆಯೇ ಅಥವಾ ಸರಿ ಯಾಗಿದೆಯೇ ಎಂದು ತಿಳಿಯುವುದು ಕಷ್ಟ.

| ನಿಖಿಲ್​ರೆಡ್ಡಿ ಉದ್ಯಮಿ, ಬ್ಯಾಟರಾಯನಪುರ

ನೀರಿನಲ್ಲಿ ಖನಿಜಾಂಶ ಕಡಿಮೆ ಇದೆಯೇ ಅಥವಾ ನೀರು ಕಲುಷಿತವಾಗಿದೆಯೇ ಎಂಬುದನ್ನು ಸ್ಥಳೀಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಜಲಮಂಡಳಿ ಅಧಿಕಾರಿಗಳು ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು.

| ಮೂರ್ತಿ ಕೊಡಿಗೇಹಳ್ಳಿ ನಿವಾಸಿ

ಸಮರ್ಪಕವಾಗಿ ನೀರು ಸರಬರಾಜಾಗುತಿಲ್ಲ. ಅದರಲ್ಲೂ, ಫ್ಲೋರೈಡ್​ಯುುಕ್ತ ನೀರಿನ ಸರಬರಾಜು ಹೆಚ್ಚಾಗಿದೆ. ಕಲುಷಿತ ನೀರು ಕುಡಿಯು ವುದರಿಂದ ಜೈವಿಕ ಪದಾರ್ಥಗಳು, ಸೂಕ್ಷ್ಮಾಣುಜೀವಿಗಳು ಮತ್ತು ರಾಸಾಯನಿಕ ಪದಾರ್ಥಗಳು ನೀರಿನಲ್ಲಿ ್ಟ ಬೆರೆತು ಡೆಂಘ, ಚಿಕುನ್​ಗೂನ್ಯಾ ಮುಂತಾದ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ.

| ಎಲ್. ಸಂಜೀವರಾಯ ಕಾರ್ಯದರ್ಶಿ, ಮಾರುತಿನಗರ ನಾಗರಿಕರ ಹಿತರಕ್ಷಣಾ ಸಮಿತಿ

Stay connected

278,748FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....