ಬೆಂಗಳೂರು: ಕಳೆದ ಕೆಲವು ವರ್ಷಗಳಲ್ಲಿ, ದೇಶಾದ್ಯಂತ ಸರ್ಕಾರಗಳು ಭಾರತದಲ್ಲಿ ಎಲೆಕ್ಟ್ರಿಕಲ್ ವೆಹಿಕಲ್ ಗಳನ್ನು (EV) ಜನಪ್ರಿಯಗೊಳಿಸಲು ಹಲವಾರು ಯೋಜನೆಗಳನ್ನು ಪರಿಚಯಿಸಿವೆ. ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು ಕಡಿಮೆ ಮಾಡಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಲವಾರು ತೆರಿಗೆ ಪ್ರಯೋಜನಗಳನ್ನು ಘೋಷಿಸಿದ್ದಾರೆ. ಭಾರತದಲ್ಲಿ ಮೊದಲ ಬಾರಿಗೆ 5.9 ಮಿಲಿಯನ್ ಟನ್ ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿರುವುದರಿಂದ ಶೀಘ್ರದಲ್ಲೇ ಭಾರತದಲ್ಲಿ ಇವಿಗಳು ಮತ್ತಷ್ಟು ಬಲ ಪಡೆಯುತ್ತವೆ.
ಲಿಥಿಯಂ ನಾನ್-ಫೆರಸ್ ಲೋಹವಾಗಿದೆ. ಇದು ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಬ್ಯಾಟರಿಗಳ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಸದ್ಯಕ್ಕೆ ಭಾರತವು ಲಿಥಿಯಂ, ನಿಕಲ್ ಮತ್ತು ಕೋಬಾಲ್ಟ್ ನಂತಹ ಅನೇಕ ಪ್ರಮುಖ ಖನಿಜಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪಗಳ ಆವಿಷ್ಕಾರವಾಗಿದೆ. ಆದ್ದರಿಂದ ಬ್ಯಾಟರಿ ಮತ್ತು ಇವಿ ತಯಾರಕರು ಆಮದುಗಳನ್ನು ಅವಲಂಬಿಸಬೇಕಾಗಿಲ್ಲ.
ನಮ್ಮ ದೇಶದಲ್ಲೇ ಲಿಥಿಯಂ ಮೀಸಲು ಪ್ರಾರಂಭವಾದಾಗ ಬ್ಯಾಟರಿಗಳ ಬೆಲೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಇದು ಇವಿಗಳ ಬೆಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ನಡೆಸಿದ ಪರಿಶೋಧನೆಯ ನಂತರ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಲಿಥಿಯಂ ನಿಕ್ಷೇಪಗಳು ಕಂಡುಬಂದಿವೆ.
“ಸ್ವಾವಲಂಬಿಯಾಗಲು ದೇಶವು ನಿರ್ಣಾಯಕ ಖನಿಜಗಳನ್ನು ಕಂಡುಹಿಡಿಯುವುದು ಮತ್ತು ಅವುಗಳನ್ನು ಸಂಸ್ಕರಿಸುವುದು ಬಹಳ ಮುಖ್ಯ” ಎಂದು ಗಣಿ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಲಿಥಿಯಂ ನಿಕ್ಷೇಪಗಳ ಪತ್ತೆ ಕುರಿತು ಹೇಳಿದ್ದಾರೆ.
ಎಲೆಕ್ಟ್ರಿಕ್ ವಾಹನಗಳು ಮಾತ್ರವಲ್ಲ ಸ್ಮಾರ್ಟ್ಫೋನ್ ಉತ್ಪಾದನೆಗೂ ಸ್ಥಳೀಯ ಲೀಥಿಯಂ ಸಹಾಯ ಮಾಡುತ್ತದೆ. ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳನ್ನೇ ಉಪಯೋಗಿಸುತ್ತಿದ್ದಾರೆ. ಆದ್ದರಿಂದ ಲಿಥಿಯಂನ ಬೆಲೆ ಕಡಿಮೆ ಆಗುವುದರಿಂದ ದೇಶದಲ್ಲಿ ಸ್ಮಾರ್ಟ್ಫೋನ್ಗಳ ಉತ್ಪಾದನೆಯು ಹೆಚ್ಚುತ್ತದೆ ಮತ್ತು ಜನರಿಗೆ ಕೈಗೆಟಕುವ ದರದಲ್ಲಿ ಸಿಗುತ್ತದೆ. (ಏಜೆನ್ಸೀಸ್)
ರಿವರ್ಸ್ ಡಯಾಬಿಟಿಸ್, ಮಧುಮೇಹದಿಂದ ಮುಕ್ತಿ