ರಸಲ್​​ ಮಾರುಕಟ್ಟೆಯಲ್ಲಿ ಬಿಬಿಎಂಪಿಯಿಂದ ಅನಧಿಕೃತ ಅಂಗಡಿಗಳ ತೆರವು

ಬೆಂಗಳೂರು: ಬೃಹತ್​​ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಅಧಿಕಾರಿಗಳು ಬೆಳ್ಳಂಬೆಳಗ್ಗೆ ರಸಲ್​​ ಮಾರುಕಟ್ಟೆಯ ಮೇಲೆ ಕಾರ್ಯಚರಣೆ ನಡೆಸಿದ್ದಾರೆ.

ಮಾರುಕಟ್ಟೆಯಲ್ಲಿ ಅನಧಿಕೃತ ಒತ್ತುವರಿ ತೆರವುಗೊಳಿಸುವಂತೆ ಹೈಕೋರ್ಟ್​ ಸೂಚನೆ ನೀಡಿತ್ತು. ಈ ಆದೇಶದ ಮೇರೆಗೆ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ನೇತೃತ್ವ ತಂಡ ಕಾರ್ಯಾಚರಣೆ ನಡೆಸಿದೆ. ರಸಲ್​​ ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿದ್ದಾರೆ. ಇನ್ನೂ ಫುಟ್​ಬಾತ್​ ಮತ್ತು ರಸ್ತೆಯ ಮೇಲೆ ಅನಧಿಕೃತ ವಾಹನ ಪಾರ್ಕಿಂಗ್​​ನ್ನು ತೆರವುಗೊಳಿಸಲಾಗಿದೆ.

ಪೊಲೀಸರ ಬಂದೋಬಸ್ತ್​​ನಲ್ಲಿ ಜೆಸಿಬಿ ಮೂಲಕ ಅನಧಿಕೃತ ಅಂಗಡಿಗಳನ್ನು ತೆರವು ಮಾಡಲಾಗಿದೆ. ರಸಲ್​​ ಮಾರುಕಟ್ಟೆಯ ಸುತ್ತಮುತ್ತ ಕಸ ಹಾಕದಂತೆ ಸಾರ್ವಜನಿಕರಿಗೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)