More

  ದೇಶದ ಮೂಲಾಧಾರ ಸಂವಿಧಾನ

  ಚಿಟಗುಪ್ಪ: ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತಕ್ಕಿದೆ. ದೇಶದ ಮೂಲಾಧಾರವೇ ನಮ್ಮ ಸಂವಿಧಾನ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.

  ಮನ್ನಾಎಖೇಳ್ಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿ, ನರೇಂದ್ರ ಮೋದಿ ಸರ್ಕಾರ ಸಂವಿಧಾನದ ಮಹತ್ವ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳನ್ನು ಜನಮಾನಸಕ್ಕೆ ತಲುಪಿಸಲು ೨೦೧೫ರಿಂದ ನ.೨೬ರಂದು ಸಂವಿಧಾನ ದಿನ ಆಚರಣೆಗೆ ತಂದಿದೆ. ಎಲ್ಲರೂ ಸಂವಿಧಾನದ ಆಶಯ ಎತ್ತಿ ಹಿಡಿಯಲು ಶ್ರಮಿಸೋಣ ಎಂದರು.

  ಗ್ರಾಪಂ ಅಧ್ಯಕ್ಷ ರಾಜಕುಮಾರ, ವೈದ್ಯ ಡಾ.ಲಕ್ಷ್ಮಣ ಜಾಧವ, ಸಂತೋಷ ಹಳ್ಳಿಖೇಡ, ಮುಖಂಡರಾದ ಜಗನ್ನಾಥ ಮಜಗೆ, ರಾಜಕುಮಾರ ಪಂಚಾಳ, ಜರೆಪ್ಪ ಹಂದಿಕೇರಾ, ಮೋಹನ್ ತೇಲ್ಕೂರ್, ಬಸವರಾಜ ನಿಂಗದಳ್ಳಿ, ಕಲ್ಲಪ್ಪ ಉಪ್ಪಾರ, ವೀರಶೆಟ್ಟಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts