ಸನ್‌ಸೆಟ್ ವೀಕ್ಷಣಾ ಸ್ಥಳದ ತಡೆಗೋಡೆ ಶಿಥಿಲ

blank

ತೀರ್ಥಹಳ್ಳಿ: ಆಗುಂಬೆಯ ಸೂರ್ಯಾಸ್ತಮಾನ ವೀಕ್ಷಣೆಯ ತಡೆಗೋಡೆ ಶಿಥಿಲಗೊಂಡಿದ್ದು ಅಪಾಯಕಾರಿ ಸ್ಥಿತಿ ತಲುಪಿದೆ. ಅನಾಹುತ ಸಂಭವಿಸುವ ಮುನ್ನ ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.
ಸೂರ್ಯಾಸ್ತಮಾನ ವೀಕ್ಷಣೆಯ ಸ್ಥಳದ ಸುತ್ತಲೂ ಸಿಮೆಂಟಿನಿಂದ ನಿರ್ಮಿಸಿರುವ ತಡೆಗೋಡೆ ಶಿಥಿಲಗೊಂಡು ಸಿಮೆಂಟ್ ಪ್ಲಾಸ್ಟರ್ ಉದುರುತ್ತಿದೆ. ಇದರಿಂದ ತಡೆಗೋಡೆಗೆ ಹಾಕಿರುವ ಕಬ್ಬಿಣದ ಸರಳುಗಳು ಸಂಪೂರ್ಣ ತುಕ್ಕು ಹಿಡಿದಿವೆ. ಪ್ರವಾಸಿಗರು ಸೂಯಾಸ್ತಮಾನದ ವೇಳೆ ತಡೆಗೋಡೆಗೆ ಒರಗಿಕೊಳ್ಳುವುದು ಸಾಮಾನ್ಯ. ನೂರಾರು ಮಂದಿ ಒಮ್ಮೆಲೇ ಒರಗಿಕೊಳ್ಳುವ ಒತ್ತಡಕ್ಕೆ ತಡೆಗೋಡೆ ಕುಸಿಯುವ ಸಾಧ್ಯತೆಯಿದೆ.
ಟ್ರಾಫಿಕ್ ಜಾಮ್ ಸಮಸ್ಯೆ: ಒಂದೆಡೆ ತಡೆಗೋಡೆ ಶಿಥಿಲಗೊಂಡಿದ್ದರೆ ಮತ್ತೊಂದೆಡೆ ಟ್ರಾಫಿಕ್ ಜಾಮ್ ಸಮಸ್ಯೆಯೂ ಹೆಚ್ಚಿದೆ. ಈ ಸ್ಥಳದಲ್ಲಿ ವಾಹನ ನಿಯಂತ್ರಣಕ್ಕೆ ಸೂಕ್ತ ಸಿಬ್ಬಂದಿ ಇಲ್ಲದ ಕಾರಣ ಕಿರಿದಾದ ಘಾಟಿ ರಸ್ತೆಯಲ್ಲಿ ಪದೇಪದೆ ಸಂಭವಿಸುವ ಟ್ರಾಫಿಕ್ ಜಾಮ್ ಸಮಸ್ಯೆ ಈ ಮಾರ್ಗದಲ್ಲಿ ಸಂಚರಿಸುವ ಆ್ಯಂಬುಲೆನ್ಸ್ ಸೇರಿ ಮಿನಿ ಬಸ್‌ಗಳು ಹಾಗೂ ಇತರ ವಾಹನಗಳಿಗೆ ದೊಡ್ಡ ಸವಾಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಮೂವರು ಗೃಹರಕ್ಷಕರನ್ನು ಇಲ್ಲಿಗೆ ನಿಯೋಜಿಸಿದ್ದರೂ ಸಮಸ್ಯೆ ಮಾತ್ರ ಬಿಗಡಾಯಿಸುತ್ತಿದೆ.
ವಾಹನ ನಿಲುಗಡೆಗೆ ಾರೆಸ್ಟ್ ಗೇಟ್ ಸಮೀಪದಲ್ಲಿ ಸ್ಥಳಾವಕಾಶ ಇದ್ದರೂ ನೋ ಪಾರ್ಕಿಂಗ್ ಸೂಚನೆ ಧಿಕ್ಕರಿಸಿ ಕೆಲವು ಪ್ರವಾಸಿಗರು ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಾರೆ. ತಿಂಡಿ, ತಿನಿಸುಗಳ ಪೊಟ್ಟಣ, ನೀರಿನ ಬಾಟಲಿಯನ್ನು ಎಲ್ಲೆಂದರಲ್ಲಿ ಎಸೆಯುವುದೂ ಸಾಮಾನ್ಯವಾಗಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಪಶ್ಚಿಮಘಟ್ಟ ಶ್ರೇಣಿಯ ಆಗುಂಬೆ ನಿತ್ಯಹರಿದ್ವರ್ಣದ ಸುಂದರ ಮತ್ತು ಅತ್ಯಂತ ಸೂಕ್ಷ್ಮ ಪ್ರವಾಸಿ ತಾಣವಾಗಿದೆ. ಸೂರ್ಯಾಸ್ತಮಾನ ವೀಕ್ಷಣೆ ಸ್ಥಳ ಇಡೀ ದೇಶದಲ್ಲಿ ಖ್ಯಾತಿ ಗಳಿಸಿದೆ. ತಾಲೂಕು ವ್ಯಾಪ್ತಿಯ ಈ ಪ್ರವಾಸಿ ತಾಣದಲ್ಲಿ ಮೂಲ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಶಾಸಕರು, ಸಂಸದರು ಚಿಂತನೆ ನಡೆಸಬೇಕು ಎಂದು ಆಗುಂಬೆ ಗ್ರಾಪಂ ಮಾಜಿ ಅಧ್ಯಕ್ಷ ಹಸಿರುಮನೆ ನಂದನ್ ಆಗ್ರಹಿಸಿದ್ದಾರೆ.

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…