ಹೆಬ್ಬಲಸು ನಾಟಾ ಸಾಗಿಸುತ್ತಿದ್ದ ಮೂವರ ಬಂಧನ

ವಿರಾಜಪೇಟೆ: ವಿರಾಜಪೇಟೆ ಅರಣ್ಯ ವಲಯದ ಕರಡ-ಚೈಯ್ಯಂಡಾಣೆ ರಸ್ತೆಯಲ್ಲಿ ಗುರುವಾರ ರಾತ್ರಿ ಅಕ್ರಮವಾಗಿ ಹೆಬ್ಬಲಸು ನಾಟಾಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪುತ್ತೂರಿನ ಇಮ್ತಿಯಾಜ್, ಮಹಮ್ಮದ್ ರಿಯಾಜ್, ಎಂ.ಫಯಾಜ್ ಎಂಬುವರು ಪಾರಣೆಯ ಖಾಸಗಿ ತೋಟದಿಂದ ಕರಡ ಮುಖ್ಯರಸ್ತೆಯ ಮೂಲಕ ಕಕ್ಕಬೆಗೆ ಹೆಬ್ಬಲಸು ನಾಟಾಗಳನ್ನು ಸಾಗಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಕುಂಜಿಲ ಗ್ರಾಮದ ರಿಯಾಜ್ ತಲೆಮರೆಸಿಕೊಂಡಿದ್ದಾನೆ. ಲಾರಿ ಹಾಗೂ ಮರದ ಮೌಲ್ಯ 8 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜು, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ರೋಷನಿ ಅವರ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಗೋಪಾಲ್ ನೇತೃತ್ವದಲ್ಲಿ ಅಧಿಕಾರಿಗಳಾದ ಅಕ್ಕಮ್ಮ, ಸುಬ್ರಾಯ, ಅರಣ್ಯ ರಕ್ಷಕರಾದ ಸೋಮಯ್ಯ, ಮಾಲತೇಶ್, ಮಧುಕುಮಾರ್, ವಿಕಾಸ್, ಲತೇಶ್, ಚಾಲಕ ಅಶೋಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪೋಟೊ ವಿಟಿಪಿ 24.05.19
ಕರಡ-ಚೈಯ್ಯಂಡಾಣೆ ರಸ್ತೆಯಲ್ಲಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹೆಬ್ಬಲಸು ನಾಟಾಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿರುವುದು.


Leave a Reply

Your email address will not be published. Required fields are marked *