ಪ್ರಾಣಿ-ಪಕ್ಷಿಗಳ ನೀರಿಗೂ ಸಂಚಕಾರ

ಕಿಕ್ಕೇರಿ: ಬೇಸಿಗೆಯಲ್ಲಿ ಜಾನುವಾರುಗಳು, ಪ್ರಾಣಿ-ಪಕ್ಷಿಗಳಿಗೆ ನೀರಿನ ಮೂಲವಾಗಿದ್ದ ಕೆರೆ-ಕಟ್ಟೆಯಲ್ಲಿನ ಅಳಿದುಳಿದ ಗುಟುಕು ನೀರಿಗೂ ಕೆರೆ ಪಾತ್ರದ ರೈತರು ಸಂಚಕಾರ ತಂದಿದ್ದಾರೆ.

ತಾಲೂಕಿನಲ್ಲಿಯೇ ಅತಿ ದೊಡ್ಡದಾದ ಅಮಾನಿಕೆರೆಯಲ್ಲಿ ಬೇಸಿಗೆಯಲ್ಲಿಯೂ ನೀರು ತುಂಬಿರುತ್ತಿತ್ತು. ಬೇಸಿಗೆ ಬಂದರೆ ಕೆರೆಯಂಗಳದಲ್ಲಿ ಜಾನುವಾರುಗಳು ಸಮೃದ್ಧಿಯಾಗಿ ಹಸಿರು ಮೇವು ತಿಂದು ನೀರು ಕುಡಿಯುತ್ತಿದ್ದವು. ಪ್ರಾಣಿ ಪಕ್ಷಿಗಳಿಗೆ ನೀರಿನ ಸಮಸ್ಯೆ ಇರಲಿಲ್ಲ.

ಕಾಲಕ್ರಮೇಣ ಕೆರೆ ಒತ್ತುವರಿ, ಹೂಳು ತುಂಬುವಿಕೆಯಿಂದ ಕೆರೆ ತನ್ನ ವೈಭವ ಕಳೆದುಕೊಂಡಿದೆ. ಕೆರೆಯ ದಂಡೆಯಲ್ಲಿ ಹಲವು ರೈತರು ಅಕ್ರಮವಾಗಿ ಮೋಟಾರ್ ಅಳವಡಿಸಿಕೊಂಡು ನೀರನ್ನು ರಾಜಾರೋಷವಾಗಿ ಬಸಿಯುತ್ತಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಣಾಮ ಕೆರೆಯಲ್ಲಿ ಪ್ರಾಣಿ-ಪಕ್ಷಿಗಳಿಗಿದ್ದ ಅಲ್ಪ-ಸ್ವಲ್ಪ ನೀರಿಗೂ ಗಂಡಾಂತರ ಎದುರಾಗಿದೆ.

ಪಟ್ಟಣದ ಕೆರೆ ತುಂಬಿದರೆ ಇಡೀ ಹೋಬಳಿಯೇ ನೆಮ್ಮದಿ ಕಾಣುವಂತಿತ್ತು. ತುಂಬಿದ ಕೆರೆ ಒಡೆದು 6 ತಿಂಗಳು ಕಳೆದಿವೆ. ದುರಸ್ತಿಯೂ ಇಲ್ಲ. ಅಕ್ರಮವಾಗಿ ನೀರು ಬಸಿಯುತ್ತಿರುವವರ ವಿರುದ್ಧ ಕ್ರಮ ವಹಿಸದ ಕಾಡಾ ಅಧಿಕಾರಿಗಳ ಕರ್ತವ್ಯ ನಿಷ್ಠೆಗೆ ಏನು ಹೇಳಬೇಕು ತಿಳಿಯದಾಗಿದೆ.
ಲೋಕೇಶ್, ಮಾಜಿ ಯೋಧ. ಕಿಕ್ಕೇರಿ

ನೀರು ಬಸಿಯುತ್ತಿರುವ ಅಕ್ರಮ ಕೃತ್ಯಧಾರಿಗಳ ಮೇಲೆ ಕ್ರಮವಹಿಸಲಾಗುವುದು. ಮುಂದೆ ಈ ರೀತಿ ನಡೆಯದಂತೆ ಕ್ರಮವಹಿಸಲಾಗುವುದು.
ಅಶೋಕ್, ಎಇಇ, ಕಾಡಾ.

 

Leave a Reply

Your email address will not be published. Required fields are marked *