More

  ಬಂಟ ಸಮಾಜದ ಸಮಗ್ರ ಅಭಿವೃದ್ದಿಯೇ ಸಂಘದ ಗುರಿ, ಬಂಟರ ಮಾತೃ ಸಂಘದ 103 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ

  ಮಂಗಳೂರು: ಆರ್ಥಿಕವಾಗಿ ಹಿಂದುಳಿದ ಬಂಟ ಸಮಾಜದವರ ಏಳಿಗೆಗೆ ಮತ್ತು ಸಮಗ್ರ ಅಭಿವೃದ್ದಿಗೆ ಬಂಟರ ಯಾನೆ ನಾಡವರ ಮಾತೃಸಂಘ ಸ್ಪಂದಿಸುತ್ತಿದೆ. ಬಂಟರ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ವೈವಾಹಿಕ, ಆರೋಗ್ಯ, ವಸತಿ ಮತ್ತು ಒಟ್ಟು ಜೀವನದ ವ್ಯವಸ್ಥೆ ಸೇರಿದಂತೆ ಬಂಟ ಸಮಾಜದ ಸಮಗ್ರ ಅಭಿವೃದ್ದಿಯೇ ಸಂಘದ ಗುರಿ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಹೇಳಿದರು.

  ಬಂಟ್ಸ್ ಹಾಸ್ಟೇಲ್ ನಲ್ಲಿರುವ ಶ್ರೀಮತಿ ಗೀತಾ ಎಸ್ ಎಮ್ ಶೆಟ್ಟಿ ಸಭಾಭವನದಲ್ಲಿ ನಡೆದ ಬಂಟರ ಯಾನೆ ನಾಡವರ ಮಾತೃ ಸಂಘದ 2022-23 ನೇ ಸಾಲಿನ 103 ನೇ ವಾರ್ಷಿಕ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

  ಬಂಟರ ಯಾನೆ ನಾಡವರ ಮಾತೃ ಸಂಘಕ್ಕೆ 115 ವರ್ಷಗಳ ಇತಿಹಾಸ ಇದೆ. ಈ ನಿಟ್ಟಿನಲ್ಲಿ ಮಾತೃಸಂಘದ ಬಹು ಕನಸಿನ ಯೋಜನೆಯಾದ ಶತಮಾನೋತ್ಸವ ಕಟ್ಟಡ ನಿರ್ಮಾಣ ಸಮಿತಿಗೆ ಎಂಆರ್ ಜಿ ಗ್ರೂಪ್ ನ ಚೆಯರ್ ಮೆನ್ ಕೆ ಪ್ರಕಾಶ್ ಶೆಟ್ಟಿಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಪ್ರಕಾಶ್ ಶೆಟ್ಟಿಯವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅದೇ ರೀತಿ ವಿಶ್ವ ಬಂಟರ ಮಾಹಿತಿ ಕೋಶ ಸಮಿತಿಗೆ ಹೇರಂಭ ಇಂಡಸ್ಟೀಸ್ ನ ಆಡಳಿತ ನಿರ್ದೇಶಕ ಕನ್ಯಾನ ಕುಳೂರು ಸದಾಶಿವ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಒಂದು ಯೋಜನೆಗೆ ಒಂದು ಕೋಟಿ ರೂಪಾಯಿಗೂ ಮಿಕ್ಕಿ ಖರ್ಚಗಲಿದ್ದು, ಅದರ ಸಂಪೂರ್ಣ ವೆಚ್ಚವನ್ನು ಕನ್ಯಾನ ಸದಾಶಿವ ಶೆಟ್ಟಿಯವರು ಭರಿಸಲಿದ್ದಾರೆಂದು ಎಂದು ಹೇಳಿದರು.

  2022-23 ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಕೆ ಎಂ ಶೆಟ್ಟಿ ಮಂಡಿಸಿದರು. 2022-23 ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಕೋಶಾಧಿಕಾರಿ ಸಿಎ. ರಾಮ್ ಮೋಹನ್ ರೈ ಟಿ ಮಂಡಿಸಿದರು. ಉಮೇಶ್ ರೈ ಪದವುಮೇಗಿನ ಮನೆ, ಶಾಲಿನಿ ಶೆಟ್ಟಿ, ಸಂಜೀವ ರೈ, ಕಾವು ಹೇಮನಾಥ ಶೆಟ್ಟಿ, ವಸಂತ ಶೆಟ್ಟಿ, ಮಿಥುನ್ ಹೆಗ್ಡೆ ಉಡುಪಿ, ವಿಜಯ ಶೆಟ್ಟಿ ಕಾರ್ಕಳ, ಆವರ್ಸೆ ಸುಧಾಕರ ಶೆಟ್ಟಿ, ದಯಾನಂದ ರೈ ಮನವಳಿಕೆ, ಜಯರಾಮ ಭಂಡಾರಿ, ಸುಧೀರ್ ಕುಮಾರ್ ರೈ ವರದಿಗಳನ್ನು ಮಂಡಿಸಿದರು.

  2023-24 ನೇ ಸಾಲಿಗೆ ಲೆಕ್ಕಪರಿಶೋಧಕರಾಗಿ ದಯಾಶರಣ್ ಶೆಟ್ಟಿ ಆಯ್ಕೆಯಾದರು. ಅಜಿತ್ ಕುಮಾರ್ ರೈ ಸ್ವಾಗತಿಸಿದರು. ದೀಪಿಕಾ, ಸಿಂಧೂರ, ಸಹನ ಪ್ರಾರ್ಥಿಸಿದರು. ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ವಂದಿಸಿದರು. ಶರತ್ ಶೆಟ್ಟಿ ಪಡುಪಳ್ಳಿ ನಿರೂಪಿಸಿದರು.

  —————–

  ಮೀಸಲಾತಿಯಲ್ಲಿ ಬಂಟರಿಗೆ ಅನ್ಯಾಯ

  ಬಂಟ ಸಮಾಜವನ್ನು ಕೇಂದ್ರ ಸರ್ಕಾರವು ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ. ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಸಮಾಜವು ಪ್ರವರ್ಗ 2 (ಎ) ಯಲ್ಲಿ ಸೇರಲು ಅರ್ಹರಾಗಿದ್ದರೂ ಬಂಟ ಸಮುದಾಯವನ್ನು ಪ್ರವರ್ಗ 3 (ಬಿ) ಯಲ್ಲಿ ಸೇರಿಸಿರುವ ಕಾರಣ ಸಮುದಾಯ ಶಿಕ್ಷಣ, ಉದ್ಯೋಗ, ಸಾಮಾಜಿಕ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಸಿಗುವ ಸೌಲಭ್ಯಗಳಿಂದ ವಂಚಿತರಾಗಿ ಸಮುದಾಯಕ್ಕೆ ತುಂಬಾ ಹಿನ್ನಡೆಯಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts