ವಿಜಯವಾಣಿ ಸುದ್ದಿಜಾಲ ಧಾರವಾಡ
ಅಂಗನವಾಡಿ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ ಅವರ ಬಗ್ಗೆ ಅನಾವಶ್ಯಕವಾಗಿ ತೇಜೋವಧೆ ಮಾಡುತ್ತಿದ್ದು, ಈ ರೀತಿ ಅಪ್ರಚಾರ ಮಾಡುತ್ತಿರುವ ನಡೆ ಸರಿಯಲ್ಲ ಎಂದು ಅಂಗನವಾಡಿ ರಾಜ್ಯ ಸಂಘಟನಾ ಕಾರ್ಯದರ್ಶಿ ರತ್ನಾ ಶಿರೂರು ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆ ನಿಯಮ ಉಲ್ಲಂಘಿಸಿದ ಹೊನ್ನಪ್ಪ ಮರಿಯಮ್ಮನವರ ಅವರನ್ನು ಸಂಘಟನೆ ಉಪಾಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ. ಆದರೆ ಈಗ ಜಯಮ್ಮ ವಿರುದ್ಧವೇ ಅಪ್ರಚಾರ ಮಾಡುವ ಹೊನ್ನಪ್ಪ ನಡೆ ತಪ್ಪು. ಈ ಅಪ್ರಚಾರ ಕೈ ಬಿಡದಿದ್ದರೆ ಮಹಿಳಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.
ಸವಿತಾ ಸರ್ಜಾಪುರ, ಶಿವಲೀಲಾ ನಡೂರಮಠ, ಚೆನ್ನಕ್ಕ ಅಂಗಡಿ, ಸಂಜೋತಾ ಉಡುಪಿ, ಇತರರು ಇದ್ದರು.
